ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಗ್ರೂಪ್‌ ಸ್ಪರ್ಧೆ: ಐಐಎಂಬಿಗೆ ತೃತೀಯ ಸ್ಥಾನ

Last Updated 20 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಗ್ರೂಪ್‌ ಆಯೋಜಿಸಿದ್ದ ‘ಟಾಟಾ ಬ್ಯುಸಿನೆಸ್‌ ಲೀಡರ್‌ಶಿಪ್‌ ಅವಾರ್ಡ್‌’ ವಾರ್ಷಿಕ ಸ್ಪರ್ಧೆಯಲ್ಲಿ ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಮೂರನೇ ಸ್ಥಾನ ಪಡೆದಿದೆ.

ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಐಐಎಂಬಿಯ ಐವರು ವಿದ್ಯಾರ್ಥಿಗಳ ತಂಡ ಸಲ್ಲಿಸಿದ ಪ್ರಾಜೆಕ್ಟ್‌ಗೆ ಈ ಪ್ರಶಸ್ತಿ ಸಿಕ್ಕಿದೆ.

ಮುಂಬೈನ ಎಸ್.ಪಿ.ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ರಿಸರ್ಚ್‌ನ ತಂಡವು ಮೊದಲ ಸ್ಥಾನ ಗಳಿಸಿದೆ. ಜಮ್‌ಶೆಡ್‌ಪುರದ ಎಕ್ಸ್‌ಎಲ್‌ಆರ್‌ಐನ ತಂಡವು ದ್ವಿತೀಯ ಸ್ಥಾನ ಪಡೆದಿದೆ.

ಪ್ರಥಮ ಬಹುಮಾನ ₹5 ಲಕ್ಷ, ದ್ವಿತೀಯ ಬಹುಮಾನ ₹2 ಲಕ್ಷ ಹಾಗೂ ತೃತೀಯ ಬಹುಮಾನ ₹1 ಲಕ್ಷ ನಗದು ಒಳಗೊಂಡಿದೆ.

ಈ ಮೂರು ಪ್ರಶಸ್ತಿಗಳಿಗೆ ಆಯ್ಕೆಯಾದ ತಂಡದ ವಿದ್ಯಾರ್ಥಿಗಳಿಗೆ ಟಾಟಾ ಅಡ್ಮಿನಿಸ್ಟ್ರೇಷನ್‌ ಸರ್ವಿಸ್‌ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಅವರಿಗೆ ತರಬೇತಿ ನೀಡಲಾಗುತ್ತದೆ.

ನಗರದ 1,103 ಕಾಲೇಜುಗಳು ಈ ಸ್ಪರ್ಧೆಗೆ ಹೆಸರು ನೋಂದಾಯಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT