ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ಪ್ರಕರಣ: ಎಸಿಪಿ ಮೇಲಿನ ಆರೋಪ ಸಾಬೀತು

Last Updated 20 ನವೆಂಬರ್ 2017, 19:32 IST
ಅಕ್ಷರ ಗಾತ್ರ

ಬೆಂಗಳೂರು: ದಿಣ್ಣೂರಿನ ‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕ ರಾಜೀವ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದ ಜೆ.ಸಿ.ನಗರ ಉಪವಿಭಾಗದ ಎಸಿಪಿ ಮಂಜುನಾಥ್‌ ಬಾಬು ಅವರ ಮೇಲಿನ ಆರೋಪ ಸಾಬೀತಾಗಿದೆ.

ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್, ಮೂರು ಪುಟಗಳ ತನಿಖಾ ವರದಿಯನ್ನು ನಗರ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸೋಮವಾರ ಸಲ್ಲಿಸಿದ್ದಾರೆ. ‘ಎಸಿಪಿ ಮಂಜುನಾಥ್‌ ಬಾಬು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಡಿಸಿಪಿ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

‘ಎಸಿಪಿ, ಕಾನ್‌ಸ್ಟೆಬಲ್‌, ಹೋಟೆಲ್‌ ಮಾಲೀಕ, ಸಿಬ್ಬಂದಿ ಹಾಗೂ ಕೆಲ ಸಾರ್ವಜನಿಕರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದೇನೆ. ಅದನ್ನು ಆಧರಿಸಿ ಅಂತಿಮ ವರದಿ ಸಿದ್ಧಪಡಿಸಿದ್ದೇನೆ. ಎಸಿಪಿ ಅವರು ಕಾರಣವಿಲ್ಲದೆ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ನಡೆಸಿ, ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗಿದೆ.  ತನಿಖಾ ವರದಿಯನ್ನು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಅವರಿಗೆ ನೀಡಿದ್ದು, ಅವರು ಆ ವರದಿಯನ್ನು ಕಮಿಷನರ್‌ ಅವರಿಗೆ ಕೊಡಲಿದ್ದಾರೆ’ ಎಂದು ಡಿಸಿಪಿ ಚೇತನ್‌ಸಿಂಗ್ ರಾಥೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವರದಿಯ ವಿವರ: ‘ನ. 9ರ ರಾತ್ರಿ 11.56 ಗಂಟೆಗೆ ಹೋಟೆಲ್‌ಗೆ ಹೋಗಿದ್ದ ಎಸಿಪಿ ಹಾಗೂ ಕಾನ್‌ಸ್ಟೆಬಲ್‌, ಹೋಟೆಲ್‌ ಬಂದ್‌ ಮಾಡುವಂತೆ ಸೂಚಿಸಿದ್ದರು. ‘ರಾತ್ರಿ 1 ಗಂಟೆವರೆಗೂ ವಹಿವಾಟು ನಡೆಸಲು ಸರ್ಕಾರದ ಆದೇಶವಿದೆ’ ಎಂದು ಹೋಟೆಲ್‌ ಮಾಲೀಕ ರಾಜೀವ್‌ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡ ಎಸಿಪಿ, ಲಾಠಿಯಿಂದ ಹೊಡೆದಿದ್ದಾರೆ. ಹೋಟೆಲ್‌ನಲ್ಲಿದ್ದ ಗ್ರಾಹಕರನ್ನು ಹೊರಗೆ ಕಳುಹಿಸಿ ಕಾನ್‌ಸ್ಟೆಬಲ್‌ ತೊಂದರೆ ಕೊಟ್ಟಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವರದಿಯ ವಿವರ: ‘ನ. 9ರ ರಾತ್ರಿ 11.56 ಗಂಟೆಗೆ ಹೋಟೆಲ್‌ಗೆ ಹೋಗಿದ್ದ ಎಸಿಪಿ ಹಾಗೂ ಕಾನ್‌ಸ್ಟೆಬಲ್‌, ಹೋಟೆಲ್‌ ಬಂದ್‌ ಮಾಡುವಂತೆ ಸೂಚಿಸಿದ್ದರು. ‘ರಾತ್ರಿ 1 ಗಂಟೆವರೆಗೂ ವಹಿವಾಟು ನಡೆಸಲು ಸರ್ಕಾರದ ಆದೇಶವಿದೆ’ ಎಂದು ಹೋಟೆಲ್‌ ಮಾಲೀಕ ರಾಜೀವ್‌ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡ ಎಸಿಪಿ, ಲಾಠಿಯಿಂದ ಹೊಡೆದಿದ್ದಾರೆ. ಹೋಟೆಲ್‌ನಲ್ಲಿದ್ದ ಗ್ರಾಹಕರನ್ನು ಹೊರಗೆ ಕಳುಹಿಸಿ ಕಾನ್‌ಸ್ಟೆಬಲ್‌ ತೊಂದರೆ ಕೊಟ್ಟಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ಗೆ ಸಮೀಪದಲ್ಲಿದ್ದ ಹಲವು ಹೋಟೆಲ್‌ಗಳಲ್ಲಿ ವಹಿವಾಟು ನಡೆಯುತ್ತಿತ್ತು. ಎಸಿಪಿ ಅಲ್ಲಿ ಹೋಗಿ ಯಾವುದೇ ಎಚ್ಚರಿಕೆ ನೀಡಿಲ್ಲ. ಅದರ ಬದಲು ಉದ್ದೇಶಪೂರ್ವಕವಾಗಿ ‘ಶೆಟ್ಟಿ ಲಂಚ್‌ ೋಮ್‌’ ಹೋಟೆಲ್‌ಗೆ ಹೋಗಿ ಈ ರೀತಿ ವರ್ತಿಸಿದ್ದಾರೆ. ಹಲ್ಲೆ ವೇಳೆ ಹೋಟೆಲ್ ಮಾಲೀ
ಕರು ಹಾಗೂ ಹಲವು ಸಾರ್ವಜನಿಕರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ’.

‘ಎಸಿಪಿ ಹಾಗೂ ಕಾನ್‌ಸ್ಟೆಬಲ್‌ ಅಧಿಕಾರ ದುರುಪಯೋಗಪಡಿಸಿಕೊಂಡು ಹೋಟೆಲ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬಂದಿದೆ’ ಎಂದು ತಿಳಿಸಿದ್ದಾರೆ.

ದೂರಿನ ವಿಚಾರಣೆ: ‘ಘಟನೆ ಬಗ್ಗೆ ಹೋಟೆಲ್ ಮಾಲೀಕ ರಾಜೀವ್‌ ದೂರು ಕೊಟ್ಟಿದ್ದಾರೆ. ಡಿಸಿಪಿ ಅವರು ಈಗಾಗಲೇ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆ ವರದಿಯನ್ನು ಕಮಿಷನರ್‌ ಪರಿಶೀಲಿಸಲಿದ್ದು, ಬಳಿಕ ಅವರು ನೀಡುವ ಸೂಚನೆಯಂತೆ ರಾಜೀವ್‌ ಅವರ ದೂರಿನ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಲಿದ್ದೇವೆ’ ಎಂದು ಆರ್‌.ಟಿ.ನಗರ ಪೊಲೀಸರು ತಿಳಿಸಿದರು.

ಕಮಿಷನರ್‌ ಸೂಚನೆಯಂತೆ ದೂರಿನ ವಿಚಾರಣೆ: ‘ಘಟನೆ ಬಗ್ಗೆ ಹೋಟೆಲ್ ಮಾಲೀಕ ರಾಜೀವ್‌ ದೂರು ಕೊಟ್ಟಿದ್ದಾರೆ. ಡಿಸಿಪಿ ಅವರು ಈಗಾಗಲೇ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆ ವರದಿಯನ್ನು ಕಮಿಷನರ್‌ ಪರಿಶೀಲಿಸಲಿದ್ದು, ಬಳಿಕ ಅವರು ನೀಡುವ ಸೂಚನೆಯಂತೆ ರಾಜೀವ್‌ ಅವರ ದೂರಿನ ವಿಚಾರಣೆಯನ್ನು ಪ್ರತ್ಯೇಕವಾಗಿ ನಡೆಸಲಿದ್ದೇವೆ’ ಎಂದು ಆರ್‌.ಟಿ.ನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT