ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಮೂಲಕ ಅಕ್ರಮವಾಗಿ ಔಷಧಿ ಮಾರಾಟ ಜಾಲ: ಮತ್ತೊಬ್ಬ ಆರೋಪಿ ಸೆರೆ

Last Updated 20 ನವೆಂಬರ್ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ಮೂಲಕ ಅಕ್ರಮವಾಗಿ ಔಷಧಿಗಳ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದ್ದ ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು, ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ನಗರದ ಥಣಿಸಂದ್ರದ ನಿವಾಸಿ ಮೊಹಮ್ಮದ್ ಖಾಲಿದ್ ಬಂಧಿತರು. ವಿದ್ಯಾರ್ಹತೆ ಹಾಗೂ ಉದ್ಯೋಗ ಅನುಭವದ ಬಗ್ಗೆ ನಕಲಿ ದಾಖಲಾತಿ
ಗಳನ್ನು ನೀಡಿ ಮಾನ್ಯತಾ ಟೆಕ್ ಪಾರ್ಕ್‌ ಬಳಿಯ ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎನ್‌ಸಿಬಿ ಅಧಿಕಾರಿ
ಗಳು ತಿಳಿಸಿದರು.

ನಗರದ ಥಣಿಸಂದ್ರದಲ್ಲಿರುವ ಕಾಲ್‌ಸೆಂಟರ್‌ ಮೇಲೆ ಏಪ್ರಿಲ್‌ನಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು, ಅಲ್ಲಿಯ ಉದ್ಯೋಗಿಗಳಾದ ಸಲೀಂ ಪಾಷಾ ಹಾಗೂ ಮೊಹಮ್ಮದ್‌ ಸುಹೇಲ್‌ ಅಹ್ಮದ್‌ ಎಂಬುವರನ್ನು ಬಂಧಿಸಿದ್ದರು. ತನಿಖೆಯ ಮುಂದುವರೆದ ಭಾಗವಾಗಿ ಆಗಸ್ಟ್‌ 12ರಂದು ಜಾಲದ ‌ಕಿಂಗ್‌ಪಿನ್ ವಾಸೀಂ ಅಕ್ರಂ ಎಂಬುವರನ್ನು ಅಧಿಕಾರಿಗಳು ಬಂಧಿಸಿದ್ದರು.

ವಾಸೀಂ ಅಕ್ರಂ ಜತೆ ನಿಕಟ ಸಂಬಂಧ ಹೊಂದಿದ್ದ ಮೊಹಮ್ಮದ್ ಖಾಲಿದ್, ಆನ್‌ಲೈನ್ ಮೂಲಕ ಔಷಧಿಗಳ ಮಾರಾಟ ಕೃತ್ಯದಲ್ಲಿ ಭಾಗಿಯಾಗಿದ್ದ ಬಗ್ಗೆ ತನಿಖೆಯಿಂದ ಗೊತ್ತಾಗಿತ್ತು. ಈ ಬಗ್ಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಅವರ ವಿರುದ್ಧ ಮಾದಕ ದ್ರವ್ಯಗಳು ಮತ್ತು ಮಾನಸಿಕ ವ್ಯಸನ ಪದಾರ್ಥಗಳ (ಎನ್‌ಡಿಪಿಎಸ್‌) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಪ್ರಕರಣದ ಹಿನ್ನೆಲೆ: ‘ಕೆಲ ವರ್ಷಗಳ ಹಿಂದೆಯೇ ವೆಬ್‌ಸೈಟ್‌ ಸೃಷ್ಟಿಸಿದ್ದ ಆರೋಪಿಗಳು, ಕಾಲ್‌ಸೆಂಟರ್‌ ಉದ್ಯೋಗಿಗಳ ಮೂಲಕ ಮಾತ್ರೆಗಳನ್ನು ಮಾರಾಟ ಮಾಡಿಸುತ್ತಿದ್ದರು’ ಎಂದು ಎನ್‌ಸಿಬಿ ಅಧಿಕಾರಿ ತಿಳಿಸಿದರು.

‘ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಯುರೋಪಿಯನ್‌ ದೇಶಗಳಲ್ಲಿ ಹೆಚ್ಚಾಗಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದರು. ವೆಬ್‌ಸೈಟ್‌ನಲ್ಲೇ ಗ್ರಾಹಕರಿಂದ ಬುಕ್ಕಿಂಗ್‌ ಪಡೆಯುತ್ತಿದ್ದ ಆರೋಪಿಗಳು, ಕೊರಿಯರ್‌ ಮೂಲಕ ಮಾತ್ರೆಗಳನ್ನು ಪೂರೈಕೆ ಮಾಡುತ್ತಿದ್ದರು’ ಎಂದು ಹೇಳಿದರು.

ಜಾಲದ ಮೇಲೆ ದಾಳಿ ನಡೆದ ವೇಳೆ ಕಾಲ್‌ಸೆಂಟರ್‌ನಲ್ಲಿ ಸಿದಿಗ್ರಾ, ಜೆನೆಗ್ರಾ, ಆರೋಗ್ರಾ ಸೇರಿದಂತೆ ಹಲವು ಕಂಪೆನಿಯ ಕಾಮಪ್ರಚೋದಕ ಮಾತ್ರೆಗಳು ಸಹ ಪತ್ತೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT