ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ, ಮತದಾನ ಬಹಿಷ್ಕಾರ ಎಚ್ಚರಿಕೆ

Last Updated 21 ನವೆಂಬರ್ 2017, 5:38 IST
ಅಕ್ಷರ ಗಾತ್ರ

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶ್ವತ್ಥಪುರ-ಕೊಂಡೆಬೆಟ್ಟು-ಪಿದಮಲೆಗೆ ಹೋಗುವ 5 ಕಿ.ಮೀ ರಸ್ತೆಗೆ ಡಾಂಬರೀಕರಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಕೊಂಡೆಬೆಟ್ಟುವಿನಲ್ಲಿ ಪ್ರತಿಭಟನೆ ನಡೆಸಿ, ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು.

‘40 ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣವಾಗಿದ್ದು, ಇಲ್ಲಿ ರೈತರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಸೋಮಪ್ಪ ಸುವರ್ಣ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಇಲ್ಲಿ 3 ಕಿ.ಮೀ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದರೆ 2 ವರ್ಷಗಳಲ್ಲಿ ಆ ಡಾಂಬರೀಕರಣ ಕಿತ್ತು ಹೋಗಿದ್ದು ಮತ್ತೆ ಈ ರಸ್ತೆಗೆ ಯಾವುದೇ ಅನುದಾನ ಬಂದಿಲ್ಲ’ ಎಂದು ತಿಳಿಸಿದ್ದಾರೆ.

‘ಈ ರಸ್ತೆಯಲ್ಲಿ ಟಿಪ್ಪರ್‌ ಮತ್ತು ಇತರ ಘನ ವಾಹನಗಳು ಅಧಿಕ ಭಾರವನ್ನು ಹೊತ್ತುಕೊಂಡು ಸಂಚರಿಸುವುದರಿಂದ ರಸ್ತೆ ತೀರಾ ಹದಗೆಟ್ಟಿದೆ. ಲಘು ವಾಹ ನಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಆದರೆ ಪ್ರಯೋಜನವಾಗಿಲ್ಲ.  ರಸ್ತೆಗೆ ಡಾಮ ರೀಕರಣ ಅಥವಾ ಕಾಂಕ್ರಿಟೀ ಕರಣ ಮಾಡಿಕೊಡದಿದ್ದಲ್ಲಿ ಮುಂದಿನ ಚುನಾ ವಣೆಯನ್ನು ಗ್ರಾಮಸ್ಥರು ಬಹಿಷ್ಕಾರ ಮಾಡುವುದೆಂದು ನಿರ್ಧರಿಸಿದ್ದೇವೆ’ ಎಂದು ಗ್ರಾಮಸ್ಥ ಮಂಜುನಾಥ್ ಕೊಂಡೆ ಬೆಟ್ಟು ಅವರು ತಿಳಿಸಿದರು.

ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷರು ಮಾತನಾಡಿ, ‘ ಡಾಮರೀ ಕರಣ ಆಗಬೇಕೆಂದು ಶಾಸಕರ ಗಮನಕ್ಕೂ ತರಲಾಗಿದ್ದು ರಸ್ತೆ ಡಾಮ ರೀಕರಣಕ್ಕೆ ಶಾಸಕರ ಮೂಲಕ ಪ್ರಯ ತ್ನಿಸುವುದಾಗಿ’ ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯ ಉಮೇಶ್ ಶೆಟ್ಟಿ, ಗ್ರಾಮಸ್ಥರಾದ ಜೋಸೆಫ್ ಪಿರೇರಾ, ಅಣ್ಣಿ ಶೆಟ್ಟಿ, ಲೂಯಿಸ್ ಡಿ’ಸೋಜ, ಎಂ.ಕೆ ಹರೀ ಶ್ಚಂದ್ರ, ರುಕ್ಕುಬಾಯಿ, ಲೋಯ್ಡ್ ಡಿ’ಸೋಜ, ಸುರೇಶ್ ದೇವಾಡಿಗ ಭಾಗವಹಿಸಿದ್ದರು.

ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ
ಬೆಳ್ತಂಗಡಿ: ಕಲ್ಲಗುಡ್ಡೆ-ಕೋಟಿಕಟ್ಟೆ, ಜೈನ್‍ಪೇಟೆ-ಕೋಡಿಯಾಲ್ ರಸ್ತೆ, ಕಲ್ಲಗುಡ್ಡೆ- ಮೆಲಂತಬೆಟ್ಟು, ನಾಗಬ್ರಹ್ಮ ದೇವಸ್ಥಾನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಛೇರಿ ಎದುರುಗಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಬಿಯಂತರ ಸಿ.ಆರ್ ನರೇಂದ್ರ ಅವರಿಗೆ ಮನವಿ ಪತ್ರ ನೀಡಿದರು. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಚಂದ್ರರಾಜ್, ಥೋಮಸ್ ಡಿ.ಕೆ, ಜೆಸಿಂತ ಮೋನೀಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT