ಬೀದರ್

ಕೃಷಿ ಸಾಲ: ಡಿಸಿಸಿ ಬ್ಯಾಂಕ್ ಪಾಲು ಶೇ 65

‘ರಾಜ್ಯದಲ್ಲೇ ರೈತರಿಗೆ ಅತಿಹೆಚ್ಚು ಸಾಲ ಕೊಡುವ ಬ್ಯಾಂಕ್ ಆಗಿದೆ. ಸಹಕಾರ ಬ್ಯಾಂಕ್‌ಗಳಿಗೆ ರೈತರೇ ಬೆನ್ನೆಲುಬು ಆಗಿದ್ದಾರೆ

ಬೀದರ್: ‘ಜಿಲ್ಲೆಯಲ್ಲಿ ರೈತರಿಗೆ ನೀಡುವ ಕೃಷಿ ಸಾಲದಲ್ಲಿ ಡಿಸಿಸಿ ಬ್ಯಾಂಕ್ ಪಾಲು ಶೇಕಡ 65 ರಷ್ಟು ಇದೆ’ ಎಂದು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ ತಿಳಿಸಿದರು.

ನಬಾರ್ಡ್ ವತಿಯಿಂದ ಬೀದರ್, ವಿಜಯಪುರ ಹಾಗೂ ಬಾಗಲಕೋಟೆ ಡಿಸಿಸಿ ಬ್ಯಾಂಕ್‌ಗಳ ಮಹಿಳಾ ಪ್ರಬಂಧಕರಿಗೆ ಇಲ್ಲಿನ ಸೌಹಾರ್ದ ರುಡ್‌ಸೆಟ್‌ಲ್ಲಿ ಆಯೋಜಿಸಿದ್ದ ಕಚೇರಿ ವ್ಯವಸ್ಥಾಪನೆ ಹಾಗೂ ಮಹಿಳಾ ಅಭಿವೃದ್ಧಿ ಕುರಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲೇ ರೈತರಿಗೆ ಅತಿಹೆಚ್ಚು ಸಾಲ ಕೊಡುವ ಬ್ಯಾಂಕ್ ಆಗಿದೆ. ಸಹಕಾರ ಬ್ಯಾಂಕ್‌ಗಳಿಗೆ ರೈತರೇ ಬೆನ್ನೆಲುಬು ಆಗಿದ್ದಾರೆ’ ಎಂದು ಹೇಳಿದರು. ‘ರೈತರಿಗೆ ಸಾಲ ನೀಡುವುದಷ್ಟೇ ಅಲ್ಲ, ಅವರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನೂ ಮಾಡಬೇಕಿದೆ. ತರಬೇತಿಗಳು ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಕಲಿಸಿಕೊಡುತ್ತವೆ’ ಎಂದು ತಿಳಿಸಿದರು.

‘ಬ್ಯಾಂಕ್‌ಗಳ ಸಿಬ್ಬಂದಿ ನೇಮಕಾತಿಯಲ್ಲಿ ಮಹಿಳೆಯರಿಗೂ ಆದ್ಯತೆ ದೊರೆಯುತ್ತಿದೆ. ಕೇವಲ ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಬ್ಯಾಂಕಿಂಗ್ ವ್ಯವಸ್ಥೆ ಬದಲಾಗಬೇಕಿದೆ. ಬದಲಾದ ವಾತಾವರಣದಲ್ಲಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರವೀಕ್ಷಕಿ ಗೀತಾ, ಕಚೇರಿಗಳಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ರಚನೆ ಕುರಿತು ಉಪನ್ಯಾಸ ನೀಡಿದರು.

ವಿಜಯಪುರ ಡಿಸಿಸಿ ಬ್ಯಾಂಕ್‌ ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಸೌಜನ್ಯ ಲಿಂಗಾದಲ್ಲಿ, ಶಿಲ್ಪಾ ಜಮಾದಾರ್‌, ಭಾಗ್ಯಶ್ರೀ ಪಾಟೀಲ, ನಬಾರ್ಡ್ ಬ್ಯಾಂಕ್‌ನ ಡಿ.ವಿ.ಎಸ್. ಜೋಶಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಂಡಿತ ಹೊಸಳ್ಳಿ, ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಮಹಾಜನ ಮಲ್ಲಿಕಾರ್ಜುನ, ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ, ರಾಜಕುಮಾರ ಉಪಸ್ಥಿತರಿದ್ದರು. ಅನಿಲ ಪರಶೆಣ್ಣೆ, ತನ್ವೀರ್ ರಜಾ ಮತ್ತು ನಾಗಶೆಟ್ಟಿ ಘೋಡಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಹುಮನಾಬಾದ್
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

20 Apr, 2018

ಬೀದರ್‌
ಒಗ್ಗೂಡುತ್ತಿರುವ ಮರಾಠರು: ಬಿಜೆಪಿ, ಕಾಂಗ್ರೆಸ್‌ ತಳಮಳ

ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿಶ್ಚಯಿಸಿದ ನಂತರ ಜಿಲ್ಲೆಯಲ್ಲಿ ಮರಾಠರು ಒಗ್ಗೂಡಲು ಆರಂಭಿಸಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ...

20 Apr, 2018

ಬೀದರ್
ಮಾದರಿ ಮತಗಟ್ಟೆಗಳಿಗೆ ಬಹುಮಾನ: ಜಿಲ್ಲಾಧಿಕಾರಿ

‘ಜಿಲ್ಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಲ್ಲಿ ಮಾದರಿ ಮತಗಟ್ಟೆಗಳಿಗೆ ಸೂಕ್ತ ಬಹುಮಾನ ಕೊಡಲಾಗುವುದು’ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದರು.

20 Apr, 2018
ರಾಜ್ಯದಲ್ಲಿ 21 ಅಭ್ಯರ್ಥಿಗಳು ಕಣಕ್ಕೆ

ಬೀದರ್‌
ರಾಜ್ಯದಲ್ಲಿ 21 ಅಭ್ಯರ್ಥಿಗಳು ಕಣಕ್ಕೆ

19 Apr, 2018
ಬಸವಾಭಿಮಾನಿಗಳ ಬೈಕ್‌ ರ‍್ಯಾಲಿ

ಕಮಲನಗರ
ಬಸವಾಭಿಮಾನಿಗಳ ಬೈಕ್‌ ರ‍್ಯಾಲಿ

18 Apr, 2018