ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಂದ್ರಸ್ವಾಮಿ ದರ್ಶನ ಪಡೆದ ನಟ ರಜನಿಕಾಂತ್‌

Last Updated 21 ನವೆಂಬರ್ 2017, 9:36 IST
ಅಕ್ಷರ ಗಾತ್ರ

ರಾಯಚೂರು: ಚಲನಚಿತ್ರ ನಟ ರಜನಿಕಾಂತ್‌ ಅವರು ಸ್ನೇಹಿತರೊಂದಿಗೆ ಮಂಗಳವಾರ ಬೆಳಿಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರಸ್ವಾಮಿ ಮಠದ ದರ್ಶನ ಮಾಡಿಕೊಂಡು, ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು.

ಮಠದ ಪ್ರಾಂಗಣದೊಳಗೆ ಬರುವ ಪೂರ್ವ ಮಂತ್ರಾಲಯದ ಗ್ರಾಮದೇವತೆ ಮಂಚಾಲಮ್ಮ ದೇವಿ ಹಾಗೂ ಆಂಜನೇಯಸ್ವಾಮಿಗೆ ಮೊದಲು ನಮಸ್ಕರಿಸಿ, ಆನಂತರ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿದರು. ಪೀಠಾಧಿಪತಿ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಮಠದಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕೆಲಸಗಳ ಕುರಿತಾಗಿ ಸುಮಾರು 10 ನಿಮಿಷ ಸ್ವಾಮೀಜಿಯವರ ಮಾತುಗಳನ್ನು ಆಲಿಸಿದರು.

‘ಈಗ ತಾವು ತುರ್ತಾಗಿ ಹೋಗುತ್ತಿದ್ದೀರಿ ಎಂದು ತಿಳಿದುಕೊಂಡಿದ್ದೇನೆ. ಮತ್ತೊಮ್ಮೆ ಬಿಡುವು ಮಾಡಿಕೊಂಡು ಬಂದು ಮಠದ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಬೇಕು. ಇದರಿಂದ ನಮಗೂ ಸಂತೋಷವಾಗುತ್ತದೆ’ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದರು.

‘ಗಡಿಬಿಡಿ ಏನಿಲ್ಲ. ಮಠದೊಳಗೆ ಜನಸಂದಣಿ ಹೆಚ್ಚಾಗಿ ಬಿಡುತ್ತದೆ. ಮತ್ತೊಮ್ಮೆ ಬರುತ್ತೇನೆ’ ಎಂದು ನಟ ರಜನಿಕಾಂತ್‌ ಅವರು ಸ್ವಾಮೀಜಿಗಳಿಗೆ ಹೇಳಿದರು. ಸುಬುಧೇಂದ್ರ ತೀರ್ಥರು ರಜನಿಕಾಂತ್‌ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಪರಿಮಳ ಪ್ರಸಾದ, ತುಳಸಿಮಣಿ ಹಾಗೂ ಬೃಂದಾವನ ಪ್ರತಿಮೆಯೊಂದನ್ನು ನೆನಪಿನ ಕಾಣಿಕೆಯಾಗಿ ನೀಡಿದರು.

ರಜನಿಕಾಂತ್‌ ಅವರು ಮಂತ್ರಾಲಯಕ್ಕೆ ಮಠಕ್ಕೆ ಈ ಮೊದಲು ಅನೇಕ ಸಲ ಭೇಟಿ ನೀಡುತ್ತಾ ಬಂದಿದ್ದಾರೆ. ಸುಬುಧೇಂದ್ರ ತೀರ್ಥರು ಪೀಠಾಧಿಪತಿಗಳಾದ ನಂತರದಲ್ಲಿ ಇದೇ ಮೊದಲ ಸಲದ ಭೇಟಿಯಾಗಿದೆ. ಮಠಕ್ಕೆ ರಜನಿಕಾಂತ್‌ ಅವರು ಭೇಟಿ ನೀಡುತ್ತಿರುವ ಕುರಿತು ಮಠದ ಅಧಿಕಾರಿಗಳಿಗೆ ಯಾವುದೇ ಸೂಚನೆ ಇರಲಿಲ್ಲ. ಸಾಮಾನ್ಯರಂತೆ ಮಠಕ್ಕೆ ಬಂದು ಆಶೀರ್ವಾದ ಪಡೆದು ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT