ನರಗುಂದ

‘ತಾಳ್ಮೆ ಕಳೆದುಕೊಳ್ಳುವ ಮುನ್ನ ಮಹದಾಯಿ ಈಡೇರಲಿ’

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದ ಮೇಲೆ ನೆಪ ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಗೋವಾದ ವಿರೋಧ ಪಕ್ಷದ ನಾಯಕರನ್ನು ಒಲಿಸಿ ಎನ್ನುತ್ತಾರೆ.

ನರಗುಂದ: ‘ಮಹದಾಯಿ ಜೀವನ್ಮರಣದ ಹೋರಾಟವಾಗಿದೆ. ಮೂರನೇ ವರ್ಷ ಸಮೀಪಿಸುತ್ತಿದೆ. ಬೇಡಿಕೆ ಈಡೇರುತ್ತಿಲ್ಲ, ಎಲ್ಲದಕ್ಕೂ ಹೋರಾಟ ಮಾಡಬೇಕಾಗಿದೆ. ರೈತರ ತಾಳ್ಮೆ ಕಳೆದುಕೊಳ್ಳುವ ಮುನ್ನವೇ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದು ರೈತ ಸಂಘದ ಶಹರ ಘಟಕದ ಅಧ್ಯಕ್ಷ ವಿಠ್ಠಲ ಜಾಧವ ಆಗ್ರಹಿಸಿದರು. ಪಟ್ಟಣದ ನಡೆಯುತ್ತಿರುವ ಮಹದಾಯಿ ಧರಣಿಯ 859 ದಿನವಾದ ಸೋಮವಾರ ಅವರು ಮಾತನಾಡಿದರು.

‘ಈ ಹೋರಾಟಕ್ಕೆ ನಾಡಿನ ಎಲ್ಲ ಮಠಾಧೀಶರು, ಒಂದು ಸಾವಿರಕ್ಕೂ ಹೆಚ್ಚು ಸಂಘಟನೆಗಳು, ಲಕ್ಷಾಂತರ ರೈತರು ಕೈಜೋಡಿಸಿದ್ದು, ಜನಾಂದೋಲನವಾಗಿ ಬದಲಾಗಿದೆ. ಆದರೆ, ಮಹದಾಯಿ ಜಾರಿಗಾಗಿ ಈ ಭಾಗದ ಶಾಸಕರು, ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಅವರ ಮನೆ ಮುಂದೆ ಧರಣಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನವೇ ಯೋಜನೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದ ಮೇಲೆ ನೆಪ ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಗೋವಾದ ವಿರೋಧ ಪಕ್ಷದ ನಾಯಕರನ್ನು ಒಲಿಸಿ ಎನ್ನುತ್ತಾರೆ. ನ್ಯಾಯಮಂಡಳಿಯು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿ ಎನ್ನುತ್ತಿದೆ.

ಇದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಇದು ಖಂಡನೀಯ ಎಂದರು. ನಮ್ಮ ಹಕ್ಕಿನ ಹೋರಾಟಕ್ಕೆ ಬೆಲೆ ನೀಡಬೇಕು. ಇಲ್ಲವಾದರೆ ರೈತರಿಂದ ಮುಂದೆ ಆಗುವ ಕ್ರಾಂತಿಕಾರಕ ಹೋರಾಟ ಎದುರಿಸಲು ಸಿದ್ದರಾಗಿ’ ಎಂದು ಮಹದಾಯ ಹೋರಾಟ ಸಮಿತಿ ಸದಸ್ಯ ವಾಸು ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು. ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ವೀರಣ್ಣ ಸೊಪ್ಪಿನ, ಸಿದ್ದಪ್ಪ ಚಂದ್ರತ್ನವರ, ಚನ್ನಪ್ಪಗೌಡ ಪಾಟೀಲ, ಕಾಡಪ್ಪ ಕಾಕನೂರ, ಚನ್ನಬಸು ಹುಲಜೋಗಿ, ಯಲ್ಲಪ್ಪ ಗುಡದೇರಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಡಂಬಳ
ದುಶ್ಚಟ ತೊರೆಯಲು ಯುವಕರಿಗೆ ಸಲಹೆ

ಪುರಾತನ ಕಾಲದಿಂದಲೂ ರಾಜ ಮಹಾರಾಜರ ಆಸ್ಥಾನದಲ್ಲಿ ಕುಸ್ತಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತಿದ್ದರು. ಆದರೆ ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಅವು ಕಡಿಮೆ ಆಗುತ್ತಿದೆ...

21 Apr, 2018
ಚುನಾವಣಾ ಪ್ರಚಾರಕ್ಕೆ ರಣ ಬಿಸಿಲ ಬರೆ

ಗದಗ
ಚುನಾವಣಾ ಪ್ರಚಾರಕ್ಕೆ ರಣ ಬಿಸಿಲ ಬರೆ

21 Apr, 2018

ಗದಗ
ತೀವ್ರ ಮನವೊಲಿಕೆ ನಂತರ ಶಮನವಾದ ಭಿನ್ನಮತ

ಗದಗ ವಿಧಾನಸಭಾ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರನ್ನು, ಪಕ್ಷದ ಜಿಲ್ಲಾ ಮುಖಂಡರು ಮನವೊಲಿಕೆ ಮಾಡಿದ್ದು, ಭಿನ್ನಮತ...

21 Apr, 2018

ಗದಗ
ಗ್ರಾಮೀಣರ ಬದುಕಿನಲ್ಲಿ ಗುಣಾತ್ಮಕ ಬದಲು

‘ಗ್ರಾಮೀಣ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗದಗ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪಿಸುವ...

21 Apr, 2018

ಗದಗ
ಪುಸ್ತಕಗಳಿಂದ ವಿಚಾರ ಕ್ರಾಂತಿ: ತೋಂಟದ ಶ್ರೀ

‘ಮಠಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ, ಪುಸ್ತಕೋತ್ಸವಗಳಂತಹ ಸಮಾಜಮುಖಿ ಕಾರ್ಯಗಳನ್ನು ಕೈಕೊಳ್ಳುವ ಮೂಲಕ ಜ್ಞಾನ ದಾಸೋಹದ ಕೇಂದ್ರಗಳಾಗಬೇಕು’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ...

20 Apr, 2018