ಹಾಸನ

ಶ್ರೀರಾಮ ಸೇನೆಯಿಂದ ದತ್ತಮಾಲೆ ಅಭಿಯಾನ

ದತ್ತಮಾಲೆ ಅಭಿಯಾನ ನಿಮಿತ್ತ ಶ್ರೀರಾಮ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ನಡೆಯುವ  ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಹೊರಟರು.

ಹಾಸನ: ದತ್ತಮಾಲೆ ಅಭಿಯಾನ ನಿಮಿತ್ತ ಶ್ರೀರಾಮ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ನಡೆಯುವ  ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಹೊರಟರು.

ನಗರದ ಸಂಗಮೇಶ್ವರ ಬಡಾವಣೆ ಶಿವಪಾರ್ವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೇಸರಿ ಶಾಲು ಹಾಗೂ ಮಾಲೆ ಧರಿಸಿದ ಕಾರ್ಯಕರ್ತರು ಗುರು ದತ್ತಾತ್ರೇಯ ಹಾಗೂ ಶ್ರೀರಾಮ ಸೇನೆ ಪರವಾಗಿ ಘೋಷಣೆ ಕೂಗಿದರು.

ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಾನೆಕರೆ ಹೇಮಂತ್ ಅವರು, ಈ ವರ್ಷವೂ ಸಂಘಟನೆಯ ಕಾರ್ಯಕರ್ತರು ದತ್ತಮಾಲಧಾರಿಗಳಾಗಿ ದತ್ತಪೀಠಕ್ಕೆ ತೆರಳುತ್ತಿದ್ದೇವೆ. ಚಿಕ್ಕಮಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

ದತ್ತಪೀಠವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಹಿಂದೂ ಅರ್ಚಕರನ್ನು ನೇಮಿಸಿ ಪೂಜೆಗೆ ಅವಕಾಶ ಕಲ್ಪಿಸಬೇಕು. ಅನ್ಯಧರ್ಮೀಯರ ಪೂಜೆ ನಿಷೇಧಿಸಬೇಕು ಎಂಬುವುದು ನಮ್ಮ ಬೇಡಿಕೆ. ಸಾಧು-ಸಂತರೂ ದತ್ತಮಾಲೆ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಶ್ರೀರಾಮ ಸೇನೆ ಉಪಾಧ್ಯಕ್ಷ ಸೌದರಹಳ್ಳಿ ಕುಮಾರ್, ಜಿಲ್ಲಾ ಕಾರ್ಯದರ್ಶಿ ರಘುನಂದನ್, ಸಹ ಕಾರ್ಯದರ್ಶಿಗಳಾದ ರಾಖೇಶ್, ಕಿರಣ್ ಗೌಡ, ಯೋಗೀಶ್, ಚೇತನ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕಟ್ಟಿನಕೆರೆ ಮಾರುಕಟ್ಟೆ ನವೀಕರಣ ಶುರು

ಹಾಸನ
ಕಟ್ಟಿನಕೆರೆ ಮಾರುಕಟ್ಟೆ ನವೀಕರಣ ಶುರು

22 Jan, 2018

ಹಿರೀಸಾವೆ
ಪಿಯು ಕಾಲೇಜು: ನಿರ್ಮಾಣ ವಿಳಂಬಕ್ಕೆ ಆಕ್ರೋಶ

ಕೆಆರ್‌ಐಡಿಎಲ್ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯು ₹52 ಲಕ್ಷ ವೆಚ್ಚದಲ್ಲಿ 2 ಕೊಠಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 2016ರಲ್ಲಿ ಆರಂಭಿಸಿದೆ

22 Jan, 2018
ದಿನದಲ್ಲಿ ಒಂದೇ ಬಾರಿ ಆಹಾರ

ಶ್ರವಣಬೆಳಗೊಳ
ದಿನದಲ್ಲಿ ಒಂದೇ ಬಾರಿ ಆಹಾರ

21 Jan, 2018

ಅರಕಲಗೂಡು
ಅರಕಲಗೂಡಿನಲ್ಲಿ ರೈತರಿಂದ ಪ್ರತಿಭಟನೆ

ಬರಗಾಲದಿಂದ ತತ್ತರಿಸಿರುವ ಅನ್ನದಾತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸರ್ಕಾರ ನಿದ್ರಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ...

21 Jan, 2018
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

ಶ್ರವಣಬೆಳಗೊಳ
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

20 Jan, 2018