ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಿನ್ನಮತ ಇಲ್ಲ, ಎಲ್ಲರೊಟ್ಟಿಗೆ ಚುನಾವಣೆ’

Last Updated 21 ನವೆಂಬರ್ 2017, 9:49 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನೈರುತ್ಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ ಒಂದು ಲಕ್ಷ ಮತದಾರರು ಹೆಸರು ನೋಂದಾಯಿಸಲಿದ್ದಾರೆ. ಪಕ್ಷದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವು ಸಾಧಿಸುವ ಮೂಲಕ ಅವರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಭರವಸೆ ನೀಡಿದರು.

ಪಕ್ಷದಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳು ಇದ್ದರು. ದೊಡ್ಡಪಕ್ಷದಲ್ಲಿ ಅದು ಸಹಜ. ಟಿಕೆಟ್ ದೊರೆಯದೇ ಇದ್ದಾಗ ಬೇಸರ ಎಲ್ಲರಿಗೂ ಆಗುತ್ತದೆ. ಡಿ.ಎಚ್. ಶಂಕರಮೂರ್ತಿ ಅವರ ಪುತ್ರ ಅರುಣ್ ಸೇರಿದಂತೆ ಅಸಮಾಧಾನಗೊಂಡ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಮತ್ತೆ ಬಿಜೆಪಿಯಲ್ಲೇ ಕ್ಷೇತ್ರ ಉಳಿಸಿ ಕೊಳ್ಳುತ್ತೇವೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮೂರು ರೀತಿಯ ಪದವೀಧರರು ಇದ್ದಾರೆ. ಸರ್ಕಾರಿ ನೌಕರರು, ಸ್ವಯಂ ಉದ್ಯೋಗಿಗಳು ಹಾಗೂ ನಿರುದ್ಯೋಗಿ ಪದವೀಧರರು. ಈ ಮೂರೂ ವರ್ಗದ ಹಿತಕಾಪಾಡಲು ಶ್ರಮಿಸಲಾಗುವುದು. ಶಾಸಕರಾಗಿ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ ಸಾಕಷ್ಟು ಅನುಭವವಿದೆ. ಪರಿಷತ್ ಒಳಗೆ, ಹೊರಗೆ ಅವರ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದು ವಿವರ ನೀಡಿದರು.

ನೌಕರರು ಹಾಗೂ ಕಾರ್ಮಿಕರ ಪರ ಹೋರಾಟ ನಡೆಸಿದ ಸಾಕಷ್ಟು ಅನುಭವ ತಮಗಿದೆ. ಪಕ್ಷದಲ್ಲಿ ಸಂಘಟನೆ ಚೆನ್ನಾಗಿದೆ. ಯಾವುದೇ ಬಣಗಳು ಇಲ್ಲ. ಚುನಾವಣೆಯಲ್ಲಿ ಸಂಘಟಿತವಾಗಿ ಹೋರಾಟ ನಡೆಸುತ್ತೇವೆ ಎಂದರು.

ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ನೀಡಬೇಕು. ವೇತನ ಆಯೋಗ ವರದಿ ನೀಡಿದ ತಕ್ಷಣವೇ ವೇತನ ಹೆಚ್ಚಳ ಜಾರಿಗೆ ತರಬೇಕು. ಪ್ರಸಕ್ತ ವರ್ಷದ ಏಪ್ರಿಲ್‌ 1ರಿಂದಲೇ ಪೂರ್ವಾನ್ವಯ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಎಂ. ಶಂಕರ್ ಎಸ್.ಎನ್. ಚನಬಸಪ್ಪ, ಎನ್.ಜೆ. ರಾಜಶೇಖರ್ ಎಚ್.ಸಿ. ಬಸವರಾಜಪ್ಪ, ಮಧುಸೂದನ್, ಅನಿತಾ ರವಿಶಂಕರ್, ನಾಗರಾಜ್, ರತ್ನಾಕರ ಶೆಣೈ, ಅಣ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT