ಶಿರಾ

ಒಡೆಯರ್‌ರಿಂದ ಅಂಬಾಭವಾನಿಗೆ ವಿಶೇಷ ಪೂಜೆ

‘ಹಳೇ ಮೈಸೂರು ಭಾಗದಲ್ಲಿ ಈಗಲೂ ಮೈಸೂರು ಮಹಾರಾಜರು ದೈವ ಸ್ವರೂಪಿಗಳು ನಮ್ಮ ಭಾಗದ ದೇವರು ಎನ್ನುವ ಭಾವನೆ ಜನರಲ್ಲಿದೆ.

ಶಿರಾ: ‘ಜನರು ಮೈಸೂರು ರಾಜರ ಬಗ್ಗೆ ಇಟ್ಟಿರುವ ಗೌರವ ಅಮೂಲ್ಯವಾದದ್ದು’ ಎಂದು ಮೈಸೂರಿನ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ನಗರದ ಐತಿಹಾಸಿಕ ಪ್ರಸಿದ್ಧ ಅಂಬಾಭವಾನಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

‘1847ರಲ್ಲಿ ಅಂಬಾಭವಾನಿ ದೇವಾಲಯ ನಿರ್ಮಾಣಕ್ಕಾಗಿ ಮೈಸೂರು ಮಹಾರಾಜರು ಜಮೀನು ನೀಡಿದ್ದು, ಇಂದು ದೇವಿಯ ಕರೆಯ ಮೇರೆಗೆ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಇಲ್ಲಿ ಜನರು ನೀಡುತ್ತಿರುವ ಗೌರವ ಸಂತೋಷ ತಂದಿದೆ’ ಎಂದರು.

ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ‘ಹಳೇ ಮೈಸೂರು ಭಾಗದಲ್ಲಿ ಈಗಲೂ ಮೈಸೂರು ಮಹಾರಾಜರು ದೈವ ಸ್ವರೂಪಿಗಳು ನಮ್ಮ ಭಾಗದ ದೇವರು ಎನ್ನುವ ಭಾವನೆ ಜನರಯಲ್ಲಿದೆ. ಆದ್ದರಿಂದ ಈ ಭಾಗದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜನರ ನಂಬಿಕೆಗೆ ಗೌರವ ಮೂಡಿಸುವ ಕೆಲಸ ಮಾಡಬೇಕು ಎಂದರು. ಯದುವೀರ ಕೃಷ್ಣದತ್ತ ಚಾಮರಾಜ ಓಡೆಯರ್‌ ಅವರಿಗೆ ಲಾಡರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಂತರ ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು.

ಸಂಸದ ಬಿ.ಎನ್.ಚಂದ್ರಪ್ಪ, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಮಧುಗಿರಿ ಉಪವಿಭಾಗಾಧಿಕಾರಿ ವೆಂಕಟೇಶಯ್ಯ, ದೇವಾಲಯ ನಿರ್ವಹಣಾ ಸಮಿತಿ ಸದಸ್ಯರಾದ ಬಿ.ಎಸ.ವಿಜಯ್ ಕುಮಾರ್, ಆರ್.ಉದಯ್ ಕುಮಾರ್, ಲಾಡರ ಸಮಾಜದ ಹಿರಿಯ ಮುಖಂಡ ಎಸ್.ಎನ್.ಕೃಷ್ಣಯ್ಯ, ಬಿ.ವಿ.ವೆಂಕಟೇಶ್ ಲಾಡ್ ಸೇರಿದಂತೆ ನಗರದ ವಿವಿಧ ಗಣ್ಯರು ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮೌಲ್ಯವರ್ಧನೆಯಿಲ್ಲದೆ ಮರುಗಿದ ಹಲಸು

ತುಮಕೂರು
ಮೌಲ್ಯವರ್ಧನೆಯಿಲ್ಲದೆ ಮರುಗಿದ ಹಲಸು

18 Jun, 2018
ಬಲಿಗೆ ಹೊಂಚು ಹಾಕಿವೆ ಟ್ರಾನ್ಸ್‌ಫಾರ್ಮರ್

ತುಮಕೂರು
ಬಲಿಗೆ ಹೊಂಚು ಹಾಕಿವೆ ಟ್ರಾನ್ಸ್‌ಫಾರ್ಮರ್

18 Jun, 2018

ತುಮಕೂರು
ತತ್ವಪದಗಳು ತಾರಮತ್ಯ ನಿವಾರಣೆಗೆ ಮದ್ದು

ನಮ್ಮೊಳಗಿನ ಎಲ್ಲ ತರಹದ ತಾರತಮ್ಯಗಳನ್ನು ನಿವಾರಿಸಿ ಸುಂದರ ಬದುಕು ಕಟ್ಟಿಕೊಳ್ಳಲು ತತ್ವಪದ‌ಗಳು ಮದ್ದಾಗಬಲ್ಲದು ಎಂದು ವಿಮರ್ಶಕ ಡಾ.ನಟರಾಜ ಬೂದಾಳು ತಿಳಿಸಿದರು.

18 Jun, 2018

ಕೊರಟಗೆರೆ
ನಾಟಿ ಕೋಳಿ ತಿಂದು ನಾಪತ್ತೆಯಾದ ಚಿರತೆ!

ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದ ಬಳಿ ಚಂದ್ರಣ್ಣ ಎಂಬುವರ ಕೋಳಿ ಫಾರಂ ಟಿನ್ ಶೆಡ್‌ ಮೇಲಿಂದ ಒಳಗಡೆ ಬಿದ್ದ ಚಿರತೆ ಕೋಳಿಗಳನ್ನು ತಿಂದು ತೇಗಿತು....

17 Jun, 2018

ತುಮಕೂರು
ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಯುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳದೇ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಎಂದು ನಟ ಸಂಚಾರಿ ವಿಜಯ್...

17 Jun, 2018