ಕಕ್ಕೇರಾ

‘ಸಂಗೀತದಿಂದ ಮನಸ್ಸಿಗೆ ನೆಮ್ಮದಿ’

‘ಸುಮಾರು ವರ್ಷಗಳಿಂದ ಕಕ್ಕೇರಾ ಪಟ್ಟಣದಲ್ಲಿ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದಾರೆ. ಇವರಲ್ಲಿ ಸಂಗೀತ ಅಭ್ಯಾಸ ಮಾಡಿದವರು ಇಂದು ಸರ್ಕಾರಿ ಸಂಗೀತ ಶಿಕ್ಷಕರಾಗಿದ್ದಾರೆ

ಕಕ್ಕೇರಾ: ‘ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುವ ಸಂಗೀತವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವಂತ ಕೆಲಸ ಸಾಗಬೇಕಿದೆ’ ಎಂದು ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಚೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕಸಾಪ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನರಾದ ಬಸಣ್ಣ ಗುರಿಕಾರ ಅವರನ್ನು ಸನ್ಮಾನಿಸಿ, ಅವರು ಮಾತನಾಡಿದರು.

‘ಸುಮಾರು ವರ್ಷಗಳಿಂದ ಕಕ್ಕೇರಾ ಪಟ್ಟಣದಲ್ಲಿ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದಾರೆ. ಇವರಲ್ಲಿ ಸಂಗೀತ ಅಭ್ಯಾಸ ಮಾಡಿದವರು ಇಂದು ಸರ್ಕಾರಿ ಸಂಗೀತ ಶಿಕ್ಷಕರಾಗಿದ್ದಾರೆ. ಚಿಕ್ಕ ವಯಸಿನಲ್ಲಿಯೇ ಸಂಗೀತದ ಸಾಧನೆಯತ್ತ ಮುಖ ಮಾಡಿದ ಬಾಲಪ್ರತಿಭೆಗಳು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಬಸಣ್ಣ ಗುರಿಕಾರ ಅವರ ಅಸಮಾನ್ಯ ಪ್ರತಿಭೆಯನ್ನು ಸರ್ಕಾರ ಗುರುತಿಸಬೇಕು’ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ‘ಎಲ್ಲ ಮಾನಸಿಕ ತೊಳಲಾಟಗಳಂತ ಸಮಸ್ಯೆಗಳಿಗೆ ಸಂಗೀತವೇ ಪರಿಹಾರ. ಯುವಕರು ಕನ್ನಡಕ್ಕೆ ಹೆಚ್ಚು ಒತ್ತು ಕೊಡಬೇಕು. ಪ್ರತಿಯೊಬ್ಬರೂ ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾಗದೆ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕಾಗಿದೆ’ ಎಂದರು. ಕಸಾಪ ವರ್ಷದ ವ್ಯಕ್ತಿ ಬಸಣ್ಣ ಗುರಿಕಾರ ಮಾತನಾಡಿದರು. ಸೋಮನಾಥ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಶ್ರೀಹರಿರಾವ್ ಆದೋನಿ, ಬಸವರಾಜ ಆರೇಶಂಕರ್, ನಿಂಗಯ್ಯ ಬೂದಗುಂಪಿ, ಗವಿಸಿದ್ದಪ್ಪ ಹೊಗರಿ, ಬಸವರಾಜ ಅಂಬಿಗೇರ, ಸೋಮಶೇಖರ ದೊರೆ, ಶರಣಕುಮಾರ ಸೊಲ್ಲಾಪುರ, ನಾಗರಾಜ, ದೇವು, ಪ್ರವೀಣ ಇದ್ದರು. ಲಕ್ಷ್ಮಣ ಲಿಂಗದಳ್ಳಿ ಸ್ವಾಗತಿಸಿದರು. ರಹೀಮ ಹವಾಲ್ದಾರ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಕಕ್ಕೇರಾ
‘ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ’

‘ಸತತ ಪ್ರಯತ್ನ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಉಪನ್ಯಾಸಕ ಪ್ರಭುಲಿಂಗ ಸಪಲಿ ಹೇಳಿದರು.

23 Apr, 2018

ಶಹಾಪುರ
ಖನಿಜ ಸಂಪತ್ತಿನ ಸಂರಕ್ಷಣೆ ಅಗತ್ಯ

‘ನಿಸರ್ಗದ ಸಂಪತ್ತಿನ ಜೀವಾಳವಾಗಿರುವ ಭೂ ಒಡಲಿಗೆ ವ್ಯಕ್ತಿಯ ಸ್ವಾರ್ಥ ಸಾಧನೆಗಾಗಿ ನಿರಂತರವಾಗಿ ಹಾಳು ಮಾಡುತ್ತಿರುವುದರ ಜತೆಯಲ್ಲಿ ಭೂಗರ್ಭದ ಖನಿಜ ಸಂಪತ್ತುಗಳನ್ನು ಕೊಳ್ಳೆ ಹೊಡೆಯುವುದನ್ನು ನಿಲ್ಲಿಸಬೇಕು’...

23 Apr, 2018
ಕಾಂಗ್ರೆಸ್‌ಗೆ ವಿರೋಧಿ ಅಲೆ ಇಲ್ಲ

ಯಾದಗಿರಿ
ಕಾಂಗ್ರೆಸ್‌ಗೆ ವಿರೋಧಿ ಅಲೆ ಇಲ್ಲ

23 Apr, 2018
ಸ್ಪರ್ಧೆಯಿಂದ ಉಳಿದ ‘ಪುಸ್ತಕ ಸಂಸ್ಕೃತಿ’

ಯಾದಗಿರಿ
ಸ್ಪರ್ಧೆಯಿಂದ ಉಳಿದ ‘ಪುಸ್ತಕ ಸಂಸ್ಕೃತಿ’

23 Apr, 2018

ಕೆಂಭಾವಿ
ಸಂವಿಧಾನ ಬದಲಾವಣೆಗೆ ಅವಕಾಶ ನೀಡಲ್ಲ

‘ದೇಶದ ಸಂವಿಧಾನ ದೊಡ್ಡ ಗ್ರಂಥವಾಗಿದ್ದು, ಇಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆ ಕುರಿತು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು, ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ...

23 Apr, 2018