ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಹೋರಾಟದ ಕಥನ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸಾಹಿತ್ಯ ಸೃಷ್ಟಿಯಲ್ಲಿ ಹಾಗೂ ಹಲಬಗೆಯ ಕಲಾಸೃಷ್ಟಿಗಳಲ್ಲಿ ತೊಡಗಿರುವ ಸ್ವತಂತ್ರ ಜೀವಿಗಳ ಬೆನ್ನು ಹತ್ತುವ ವ್ಯವಸ್ಥೆಯ ದುಷ್ಟ ಚಾಳಿ ಇಂದು, ನಿನ್ನೆಯದಲ್ಲ; ಅದು ಈ ಲೋಕದಲ್ಲಿ ಸಾವಿರಾರು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಆದರೆ ‘ಆನು ಒಲಿದಂತೆ ಹಾಡುವೆ’ ಎಂಬ ದಿಟ್ಟ ಆತ್ಮವಿಶ್ವಾಸ ಹಾಗೂ ವಿನಯ ಈ ಎಲ್ಲ ಒತ್ತಡಗಳನ್ನೂ ಧಿಕ್ಕರಿಸುತ್ತಲೇ ಮುನ್ನಡೆದಿದೆ.

ಕನ್ನಡನಾಡಿನ ಭಾಗ್ಯ! ಹನ್ನೆರಡನೆಯ ಶತಮಾನದಲ್ಲಿ ಅಳಿಯ ಬಿಜ್ಜಳನ ಸೈನ್ಯವನ್ನು ಹಿಮ್ಮೆಟ್ಟಿಸಿ ವಚನ ಸಾಹಿತ್ಯವನ್ನು ರಕ್ಷಿಸಿದ ಧೀರ ಶರಣರ ಕಾಲದಿಂದ ಆರಂಭವಾದ ಈ ಅಭಿವ್ಯಕ್ತಿ ಹೋರಾಟದ ಕಥನ ಕನ್ನಡನಾಡಿನ ಯಾವ ಮೂಲೆಯಲ್ಲೋ ಕವಲೊಡೆದು ಮತ್ತೆಲ್ಲೋ ಹಬ್ಬಿ ನಿಂತಿದೆ. ದಣಿವರಿಯದ ಮಾನವ ಚೈತನ್ಯದ ಈ ಆದಿಮ ಸೃಜನಶೀಲ ಕಥನಕ್ಕೆ ಅಂತ್ಯವೇ ಇಲ್ಲ.

ಕವಿಗಳು, ಜನಸಾಮಾನ್ಯರು, ಜನಪದ ಕಲಾವಿದರು, ನಟ ನಟಿಯರು ಈ ಸ್ವತಂತ್ರ ಅಭಿವ್ಯಕ್ತಿಯ ಹೋರಾಟವನ್ನು ಮುಂದೆ ಕೊಂಡೊಯ್ಯುತ್ತಲೇ ಬಂದಿದ್ದಾರೆ. ಈ ಎಲ್ಲ ಆಶಯಗಳನ್ನು ಮಂಡಿಸಲೆತ್ನಿಸುವ ‘ಮುಂದಣ ಕಥನ’ ನಾಟಕ ಹಲಬಗೆಯ ಪ್ರದರ್ಶನ ಪ್ರಕಾರಗಳನ್ನು ಬಳಸಿ ಈ ಅಭಿವ್ಯಕ್ತಿ ಹೋರಾಟದ ನಿರಂತರ ತುಡಿತಗಳನ್ನು ಮಂಡಿಸಲೆತ್ನಿಸುತ್ತದೆ.

ನಾಟಕದೊಳಗೊಂದು ನಾಟಕ ಹಾಗೂ ಹಲ ಬಗೆಯ ಜನಪದ ಪ್ರಕಾರಗಳ ಸಾವಯವ ಬೆಸುಗೆಯ ಮೂಲಕ ‘ಮುಂದಣ ಕಥನ’ ಏಕಕಾಲಕ್ಕೆ ಚರಿತ್ರೆಯ ಹಾಗೂ ಸಮಕಾಲೀನ ಭಾರತದಲ್ಲಿ ಅಭಿವ್ಯಕ್ತಿಗೆ ಎದುರಾಗಿರುವ ಸವಾಲುಗಳನ್ನು ಮತ್ತು ಎಲ್ಲ ಸೃಜನಶೀಲರ ಬತ್ತದ ಕನಸುಗಳನ್ನು ಕಲಾತ್ಮಕವಾಗಿ ಪ್ರತಿಧ್ವನಿಸುತ್ತದೆ. ಇವತ್ತು ಈ ನಾಟಕವನ್ನಾಡುತ್ತಿರುವ ನಟ, ನಟಿಯರೂ ಪ್ರೇಕ್ಷಕರೂ ಭಾಗಿಯಾಗಿ ನಿರಂತರವಾಗಿ ಸೃಷ್ಟಿಯಾಗುತ್ತಲೇ ಇರುತ್ತದೆ ಈ ಸೃಜನಶೀಲ ಪಯಣವೇ ಮುಂದಣ ಕಥನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT