ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಿ–ಹರ್ಷ್ ಕಲ್ಯಾಣೋತ್ಸವ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಾಳೆ ಮದುವೆ. ಹೇಗೆಲ್ಲಾ ಅಲಂಕಾರ ಮಾಡಿಕೊಳ್ಳಬಹುದು? ಕೂದಲನ್ನು ಎತ್ತಿಕಟ್ಟಿಕೊಳ್ಳಲೇ? ಎಂಥ ಮೇಕಪ್ ಮಾಡಿಕೊಳ್ಳಲಿ? ಹೀಗೆ ಮದುಮಗಳು ಯೋಚಿಸುತ್ತಿರುವಾಗ ಮದುಮಗನೇ ಬಂದು ಕೇಶವಿನ್ಯಾಸ ಮಾಡಿದರೆ ಎಂಥ ಖುಷಿ. ಇಂಥ ಹಲವು ಪ್ರಣಯ ಸನ್ನಿವೇಶಗಳನ್ನು ಸಂಯೋಜನೆ ಮಾಡಿ ತಮ್ಮ ಮದುವೆಯ ವಿವಾಹಪೂರ್ವ (ಪ್ರಿವೆಡ್ಡಿಂಗ್‌) ವಿಡಿಯೊ ಮಾಡಿಸಿದ್ದಾರೆ ಬಾಲಿವುಡ್‌ನ ಹಾಸ್ಯ ಕಲಾವಿದೆ ಭಾರತಿ ಸಿಂಗ್‌.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ  #BhartiKiBaraat ಎಂಬ ಹೆಸರಿನಲ್ಲಿ ಟ್ರೆಂಡಿಂಗ್ ಆಗಿದೆ. ಡಿ.3ರಂದು ಮದುವೆಯಾಗಲಿರುವ ಈ ಜೋಡಿಗಾಗಿ ‘ಆನ್‌ ಬೋರ್ಡ್‌ ಫಿಲಮ್ಸ್‌’ ಕಂಪೆನಿ ಈ ವಿಡಿಯೊ ನಿರ್ಮಿಸಿದೆ. ಭಾರತಿ–ಹರ್ಶ್‌ ಕಲ್ಯಾಣೋತ್ಸವದ ವಿಡಿಯೊಗಳು ಆರು ಕಂತುಗಳಲ್ಲಿ ಸಿದ್ಧಗೊಳ್ಳಲಿವೆ. ಗೋವಾದಲ್ಲಿ ಮದುವೆ ನಡೆಯಲಿದೆ.

ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ವಿವಾಹಪೂರ್ವ ವಿಡಿಯೊದಲ್ಲಿ ಹಾಸ್ಯರಾಣಿ ಭಾರತಿ ಸಿಂಗ್ ಪ್ರಣಯ ದೇವತೆಯಂತೆ ಕಾಣಿಸಿಕೊಂಡಿದ್ದಾರೆ. ‘ತುಮ್ ಖುಬ್ಸೂರತ್ ಹೋ’ (ನೀನು ಸುಂದರಿ) ಎಂದು ಹಿನ್ನೆಲೆಯಲ್ಲಿ ತೇಲಿಬರುವ ಈ ಹಾಡಿನ ದೃಶ್ಯ ಸಂಯೋಜನೆಗಳು ಸುಂದರವಾಗಿವೆ.

ಭಾರತಿಗೆ ಪ್ರಪೋಸ್‌ ಮಾಡಲು ಬರುವ ಹರ್ಷ್, ಉಂಗುರದ ಡಬ್ಬಿಯೊಳಗೆ ಜಾಮೂನು ತಂದಿರುತ್ತಾನೆ. ಇದನ್ನು ನೋಡಿ ಕೋಪಗೊಳ್ಳುವ ಭಾರತಿ ಸಿಂಗ್‌ಗೆ ಜಾಮೂನಿನ ಒಳಗೆ ಉಂಗುರ ಅಡಗಿಸಿರುವುದು ಕೊನೆಗೆ ಗೊತ್ತಾಗುತ್ತದೆ. ‘ಗುಂಡಮ್ಮ’ ಎಂದೇ ಹೆಸರುವಾಸಿಯಾಗಿರುವ ಭಾರತಿ ಸಿಂಗ್‌ಗೆ ಇಷ್ಟವಾದ ಜಾಮೂನಿನ ಒಳಗೆ ಉಂಗುರವಿಟ್ಟು ಪ್ರಪೋಸ್ ಮಾಡಿದ ಸನ್ನಿವೇಶ ಹಲವರಿಗೆ ಇಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT