ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ಭಯೋತ್ಪಾದಕ ಪ್ರಾಯೋಜಕ ರಾಷ್ಟ್ರ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉತ್ತರ ಕೊರಿಯಾವನ್ನು ಭಯೋತ್ಪದನೆಯ ಪ್ರಾಯೋಜಕತ್ವ ರಾಷ್ಟ್ರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ರಾಜಧಾನಿ ಪ್ಯೊಂಗ್ಯಾಂಗ್‌ ವಿರುದ್ಧ ಕ್ಷಿಪಣಿ ಮತ್ತು ಪರಮಾಣು ಕಾರ್ಯಕ್ರಮಗಳ ಮೇಲಿನ ಹೆಚ್ಚುವರಿ ನಿರ್ಬಂಧ ಹೇರುವ ಕ್ರಮವಾಗಿ ಟ್ರಂಪ್‌ ಈ ಘೋಷಣೆ ಮಾಡಿದ್ದಾರೆ.

ಜಾರ್ಜ್‌ ಡಬ್ಲ್ಯು ಬುಷ್‌ ಅವರ ಆಡಳಿತಾವಧಿಯಲ್ಲಿ ಉತ್ತರ ಕೊರಿಯಾವನ್ನು ಭಯೋತ್ಪಾದನೆಯ ಪ್ರಾಯೋಜಕತ್ವ ರಾಷ್ಟ್ರಗಳ ಪಟ್ಟಿಯಿಂದ ಕೈಬಿಡಲಾಗಿತ್ತು.  ಸಂಪುಟ ಸಭೆಯ ವೇಳೆ ಸೋಮವಾರ ಟ್ರಂಪ್‌ ಈ ಘೋಷಣೆ ಮಾಡಿದ್ದಾರೆ.

‘ಭಯೋತ್ಪಾದನೆಯ ಪ್ರಾಯೋಜಕತ್ವ ರಾಷ್ಟ್ರ ಎಂದು ಪಟ್ಟವನ್ನು ಉತ್ತರ ಕೊರಿಯಾಗೆ ನೀಡಲಾಗಿದೆ. ಆದರೆ ವರ್ಷಗಳಿಂದ ಕೊರಿಯಾ ಈ ಕೆಲಸ ಮಾಡುತ್ತಾ ಬಂದಿದೆ’ ಎಂದು ಟ್ರಂಪ್‌ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಪರಮಾಣು ದಾಳಿ ಮಾಡುವುದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆದರಿಕೆ ಹಾಕಲಾಗುತ್ತಿದೆ. ವಿದೇಶಿ ನೆಲದಲ್ಲಿ ಹತ್ಯೆ ಮಾಡುವುದೂ ಸೇರಿದಂತೆ ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ಪದೇ ಪದೇ ಉತ್ತರ ಕೊರಿಯಾ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT