ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣದ ದಿನಗಳನ್ನು ನೆನೆದ ಮಹಿಳೆ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ತಾಲಿಬಾನ್‌ ಉಗ್ರರಿಂದ ಅಪಹರಣಕ್ಕೆ ಒಳಗಾಗಿ ಐದು ವರ್ಷಗಳ ಕಾಲ ಅಲ್ಲಿಯೇ ಬಂಧಿಯಾಗಿ ಮೂರು ಮಕ್ಕಳಿಗೆ ಜನ್ಮ ನೀಡಿ, ನಂತರ ಬಿಡುಗಡೆಗೊಂಡ ಅಮೆರಿಕದ ಮಹಿಳೆಯೊಬ್ಬರು ತಾವು ಅನುಭವಿಸಿದ ಚಿತ್ರಹಿಂಸೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

‘ಉಗ್ರರು ನಮಗೆ ಚಿತ್ರಹಿಂಸೆ ಕೊಡುತ್ತಿದ್ದರು. ನಮ್ಮ ಶಿರಚ್ಛೇದನ ಮಾಡುವುದಾಗಿ ಬೆದರಿಸುತ್ತಿದ್ದರು. ಮಕ್ಕಳನ್ನು ಹೊಡೆಯುತ್ತಿದ್ದರು. ಅವರನ್ನು ಕೋಲಿನಿಂದ ಥಳಿಸುತ್ತಿದ್ದರು. ನನ್ನ ಮಗನನ್ನು ಬಿಡಿಸಲು ಹೋದಾಗ ನನ್ನ ಕೆನ್ನೆಯ ಮೂಳೆ ಮತ್ತು ಮೂರು ಬೆರಳುಗಳು ತುಂಡಾದವು. ಒಮ್ಮೆ ನನಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಯಿತು. ನನ್ನ ಮೇಲೆ ಅತ್ಯಾಚಾರವನ್ನೂ ಮಾಡಿದರು.  ಐದು ವರ್ಷಗಳು ಘೋರ ನರಕ ಅನುಭವಿಸಿದ್ದೇವೆ’ ಎಂದು ಕೇಟ್‌ಲಾನ್‌ ಕೋಲ್‌ಮನ್‌ ಬೊಯ್ಲೆ ‘ಎಬಿಸಿ ನ್ಯೂಸ್‌’ಗೆ ಮಾಹಿತಿ ನೀಡಿದರು.

2012ರಲ್ಲಿ ಕೇಟ್‌ಲಾನ್‌ ಹಾಗೂ ಕೆನಡಾದ ಅವರ ಗಂಡ ಅಫ್ಗಾನಿಸ್ತಾನಕ್ಕೆ ಹೋಗುತ್ತಿದ್ದ ವೇಳೆ ಹಖ್ಖಾನಿ ಉಗ್ರರು ಅಪಹರಣ ಮಾಡಿದ್ದರು. ಕಳೆದ ತಿಂಗಳು ಇವರನ್ನು ಬಿಡುಗಡೆ ಮಾಡಲಾಗಿದೆ. ದಂಪತಿ ಮತ್ತು ಮಕ್ಕಳನ್ನು ತಾವು ರಕ್ಷಿಸಿರುವುದಾಗಿ ಪಾಕಿಸ್ತಾನ  ಹೇಳುತ್ತಿದ್ದರೆ, ಕೆನಡಾದ ಅಧಿಕಾರಿಗಳು ಇದನ್ನು ‘ಸಂಧಾನದ ಹಸ್ತಾಂತರಿಸುವಿಕೆ‘ ಎನ್ನುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT