ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಿಕ್ಷುಕಿ

Last Updated 22 ನವೆಂಬರ್ 2017, 5:44 IST
ಅಕ್ಷರ ಗಾತ್ರ

ಮೈಸೂರು: ವೃದ್ಧೆಯೊಬ್ಬರು ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಸಂಪಾದಿಸಿದ್ದ ₹ 2 ಲಕ್ಷ ಹಣವನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ನಗರದ ಒಂಟಿಕೊಪ್ಪಲು ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾಲಕ್ಷ್ಮಿ ಅದೇ ದೇವಾಲಯಕ್ಕೆ ಈ ಕೊಡುಗೆ ನೀಡಿದ್ದಾರೆ.

ತಮಿಳುನಾಡಿನ ಸೀತಾಲಕ್ಷ್ಮಿ ಕೆಲ ವರ್ಷಗಳಿಂದ ಯಾದವಗಿರಿ ರೈಲ್ವೆ ಕಾಲೊನಿಯಲ್ಲಿ ಸಂಬಂಧಿಕರ ಜತೆ ವಾಸಿಸುತ್ತಿದ್ದಾರೆ. ಪ್ರತಿದಿನವೂ ಬೆಳಿಗ್ಗೆ ದೇವಸ್ಥಾನಕ್ಕೆ ಬಂದು ಸಂಜೆಯವರೆಗೂ ಭಿಕ್ಷೆ ಬೇಡುತ್ತಾರೆ.

ಮನೆಯವರು ಸೀತಾಲಕ್ಷ್ಮಿ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾರೆ. ಭಿಕ್ಷೆಯಿಂದ ಬಂದ ಹಣವನ್ನು ಅವರು ಖಾತೆಗೆ ಜಮಾ ಮಾಡುತ್ತಿದ್ದರು. ಇತ್ತೀಚೆಗೆ ದೇವಸ್ಥಾನ ಟ್ರಸ್ಟ್‌ನ ಮುಖ್ಯಸ್ಥರ ಜತೆ ಬ್ಯಾಂಕ್‌ಗೆ ತೆರಳಿ ₹ 2 ಲಕ್ಷ ನೀಡಿದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಎಂ.ಬಸವರಾಜು ಹೇಳಿದರು.

ಕೆಲ ತಿಂಗಳ ಹಿಂದೆಯಷ್ಟೆ ಅವರು ದೇವಸ್ಥಾನಕ್ಕೆ ₹ 30 ಸಾವಿರ ನೀಡಿದ್ದರು. ಈವರೆಗೆ ಒಟ್ಟು ₹ 2.50 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT