ಕೊಳ್ಳೇಗಾಲ

ರಸ್ತೆ ವಿಸ್ತರಣೆ ವೇಳೆ ಅವಾಂತರ: ‍ಪರಿಹಾರ ಭರವಸೆ

ಕಾರ್ಯಾಚರಣೆ ವೇಳೆಯಲ್ಲಿ ತಿಳಿಯದೆ ಸಿಬ್ಬಂದಿ ಹಣ್ಣಿನ ಅಂಗಡಿ  ತೆರವು ಮಾಡಿದ್ದಾರೆ. ಚರಂಡಿ ಹಿಂದೆ ಇರುವುದನ್ನು ಗಮನಿಸಿಲ್ಲ. ದಾಖಲೆ ಪರಿಶೀಲಿಸಿ, ತಪ್ಪಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಪೌರಾಯುತ್ತ ಡಿ.ಕೆ.ಲಿಂಗರಾಜು ಸ್ಥಳಕ್ಕೆ ಭೇಟಿನೀಡಿ ಹಣ್ಣಿನ ಅಂಗಡಿ ಪರಿಶೀಲನೆ ಮಾಡುತ್ತಿರುವುದು

ಕೊಳ್ಳೇಗಾಲ: ಪಟ್ಟಣದ ಡಾ.ಅಂಬೇಡ್ಕರ್ ರಸ್ತೆ ಹಾಗೂ ಡಾ.ರಾಜಕುಮಾರ್ ರಸ್ತೆ ಚರಂಡಿ ಸ್ಲ್ಯಾಬ್‌ ಮೇಲೆ ಒತ್ತುವರಿಯನ್ನು ತೆರವು ಮಾಡುವ ವೇಳೆ ಹಣ್ಣಿನ ಅಂಗಡಿಯ ಕಟ್ಟೆಯನ್ನು ಹಾನಿ ಮಾಡಿದ್ದಾರೆ.

ಮಸಿದಿ ವೃತ್ತದ ಬಳಿಯಿರುವ ಮಹಾಲಕ್ಷ್ಮೀ ಬೇಕರಿಯ ಮುಂದೆ ಇದ್ದ ಹಣ್ಣಿನ ಅಂಗಡಿಕಟ್ಟೆಹೊಡೆದಿದ್ದು, ಈ ಸಂಬಂಧ ಮಾಲಿಕ ಮುತ್ತುರಾಜು ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ. ಮಂಗಳವಾರ ನಗರ ಸಭೆ ಪೌರಾಯುತ್ತ ಡಿ.ಕೆ.ಲಿಂಗರಾಜು ಅವರಿಗೆ ದೂರು ನೀಡಿದರು.

ನಂತರ ಸ್ಥಳಕ್ಕೆ ಭೇಟಿ ನೀಡಿದ ಡಿ.ಕೆ.ಲಿಂಗರಾಜು ಮಾತನಾಡಿ, ಕಾರ್ಯಾಚರಣೆ ವೇಳೆಯಲ್ಲಿ ತಿಳಿಯದೆ ಸಿಬ್ಬಂದಿ ಹಣ್ಣಿನ ಅಂಗಡಿ  ತೆರವು ಮಾಡಿದ್ದಾರೆ. ಚರಂಡಿ ಹಿಂದೆ ಇರುವುದನ್ನು ಗಮನಿಸಿಲ್ಲ. ದಾಖಲೆ ಪರಿಶೀಲಿಸಿ, ತಪ್ಪಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಪಟ್ಟಣದ ಅಭಿವೃದ್ಥಿಗೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಾಣಿಗಳ ಪ್ರತಿಮೆಗೆ ಇಲ್ಲ ರಕ್ಷಣೆ

ಯಳಂದೂರು
ಪ್ರಾಣಿಗಳ ಪ್ರತಿಮೆಗೆ ಇಲ್ಲ ರಕ್ಷಣೆ

26 Apr, 2018
ಬೆಟ್ಟದ ಹಾದಿಯಲ್ಲಿ ಗುಂಡಿಗಳದ್ದೇ ಪಾರುಪತ್ಯ!

ಕೊಳ್ಳೇಗಾಲ
ಬೆಟ್ಟದ ಹಾದಿಯಲ್ಲಿ ಗುಂಡಿಗಳದ್ದೇ ಪಾರುಪತ್ಯ!

26 Apr, 2018

ಚಾಮರಾಜನಗರ
ಚೆಕ್‍ಪೋಸ್ಟ್‌ಗಳಲ್ಲಿ ನಿಗಾವಹಿಸಿ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಂತರರಾಜ್ಯ ಚೆಕ್‍ಪೋಸ್ಟ್‌ಗಳಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಸೂಚಿಸಿದರು. ...

26 Apr, 2018

ಚಾಮರಾಜನಗರ
ಜಿಲ್ಲೆಯಲ್ಲಿ ನಾಲ್ವರ ನಾಮಪತ್ರಗಳು ತಿರಸ್ಕೃತ

ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದ 53 ಅಭ್ಯರ್ಥಿಗಳ ಪೈಕಿ ನಾಲ್ವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಉಳಿದ 49 ಅಭ್ಯರ್ಥಿಗಳ ನಾಮಪತ್ರಗಳು...

26 Apr, 2018
ಮೂಲಸೌಲಭ್ಯ ವಂಚಿತ ಕೊಣನಹುಂಡಿ ಗ್ರಾಮ

ಸಂತೇಮರಹಳ್ಳಿ
ಮೂಲಸೌಲಭ್ಯ ವಂಚಿತ ಕೊಣನಹುಂಡಿ ಗ್ರಾಮ

25 Apr, 2018