ಬಾಣಾವರ

ಧಾರ್ಮಿಕ ಭಾವನೆಯಿಂದ ಉತ್ತಮ ಸಮಾಜ’

ಭಾರತ ಅಧ್ಯಾತ್ಮದ ತವರು. ಈ ನೆಲದಲ್ಲಿ ಸಂಪ್ರದಾಯ ಆಚರಣೆ ಅನಾದಿ ಕಾಲದಿಂದ ನಡೆಯುತ್ತಿದೆ. ಮನುಷ್ಯನ ಜೀವನದಲ್ಲಿ ಬೆಳಕಿದ್ದರೆ ಭಯವಿರುವುದಿಲ್ಲ ಆತ್ಮದಲ್ಲಿ ಅರಿವಿನ ಜ್ಯೋತಿ ಪ್ರಜ್ವಲಿಸಬೇಕು

ಬಾಣಾವರ: ‘ಧಾರ್ಮಿಕ ಭಾವನೆಯಿಂದ ಸಂಸ್ಕಾರ ಬೆಳೆದು, ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಕೆರೆಕೋಡಿ ಮಠ ಆವರಣದಲ್ಲಿ ಹನ್ನೊಂದು ಸಹಸ್ರ ಜ್ಯೋತಿ ಬೆಳಗಿಸುವ ಕಾರ್ತಿಕ ದೀಪೋತ್ಸವ ಹಾಗೂ ಧಾರ್ಮಿಕ ಜನಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತ ಅಧ್ಯಾತ್ಮದ ತವರು. ಈ ನೆಲದಲ್ಲಿ ಸಂಪ್ರದಾಯ ಆಚರಣೆ ಅನಾದಿ ಕಾಲದಿಂದ ನಡೆಯುತ್ತಿದೆ. ಮನುಷ್ಯನ ಜೀವನದಲ್ಲಿ ಬೆಳಕಿದ್ದರೆ ಭಯವಿರುವುದಿಲ್ಲ ಆತ್ಮದಲ್ಲಿ ಅರಿವಿನ ಜ್ಯೋತಿ ಪ್ರಜ್ವಲಿಸಬೇಕು ಎಂದರು. ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಅವರು, ‘ಅಂತರಂಗ ಶುದ್ಧಿಯಿಂದ ಬದುಕಿನಲ್ಲಿ ಶಾಶ್ವತ ಸುಖ ಅನುಭವಿಸಲು ಸಾಧ್ಯ’ ಎಂದು ಹೇಳಿದರು.

ಬಿದರೆಯ ದೊಡ್ಡಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಮಾರಗೊಂಡನಹಳ್ಳಿಯ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಸ್.ಅಶೋಕ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮಿ ಶ್ರೀಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ವೆಂಕಟೇಶ್ ಲಾಡ್, ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಆರ್.ಶ್ರೀಧರ್, ಕರವೇ ಲಕ್ಷ್ಮೀಶ್, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಸೇತುರಾಮ್, ಉದ್ಯಮಿ ಜಗದೀಶ್, ಶಿಕ್ಷಕರಾದ ನಾಗರಾಜು ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ದಿನದಲ್ಲಿ ಒಂದೇ ಬಾರಿ ಆಹಾರ

ಶ್ರವಣಬೆಳಗೊಳ
ದಿನದಲ್ಲಿ ಒಂದೇ ಬಾರಿ ಆಹಾರ

21 Jan, 2018

ಅರಕಲಗೂಡು
ಅರಕಲಗೂಡಿನಲ್ಲಿ ರೈತರಿಂದ ಪ್ರತಿಭಟನೆ

ಬರಗಾಲದಿಂದ ತತ್ತರಿಸಿರುವ ಅನ್ನದಾತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸರ್ಕಾರ ನಿದ್ರಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ...

21 Jan, 2018
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

ಶ್ರವಣಬೆಳಗೊಳ
ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

20 Jan, 2018
ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸಿ

ಹಾಸನ
ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸಿ

20 Jan, 2018

ಹಾಸನ
ಉತ್ತರ ಭಾರತ ಯುವಕರಿಗೆ ಥಳಿತ

ಎನ್‌.ಆರ್‌.ವೃತ್ತದಿಂದ ಹೊಸಕೊಪ್ಪಲು ಕಡೆಗೆ ಹೋಗುತ್ತಿದ್ದ ಆಟೊದಲ್ಲಿ ಯುವತಿ ಪ್ರಯಾಣಿಸುತ್ತಿದ್ದರು.

20 Jan, 2018