ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದವಾದ ಮನೆಗಳು ವಿತರಣೆಗೆ ಸಿದ್ಧ

Last Updated 22 ನವೆಂಬರ್ 2017, 8:34 IST
ಅಕ್ಷರ ಗಾತ್ರ

ಒಟ್ಟು ₹28.37 ಕೋಟಿ ವೆಚ್ಚದಲ್ಲಿ ‘ಜಿ ಪ್ಲಸ್’ ಮಾದರಿಯಲ್ಲಿ ಈ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದೆ. 16 ಮನೆಗಳನ್ನು ಒಳಗೊಂಡ 44 ಬ್ಲಾಕ್‌ಗಳಿವೆ. ಡಾಂಬರು ರಸ್ತೆ, ಉದ್ಯಾನ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಐದು ಎಕರೆ ಆವರಣಕ್ಕೆ ತಂತಿ ಬೇಲಿ ಅಳವಡಿಸಲಾಗಿದೆ. ಮುಂಭಾಗದಲ್ಲಿ ಹುಲ್ಲುಹಾಸು ಹಾಗೂ ಗಿಡಗಳನ್ನು ಬೆಳೆಸಲಾಗಿದೆ.

300 ಚದರ ಅಡಿ ವಿಸ್ತೀರ್ಣದ ಒಂದು ಮನೆ ನಿರ್ಮಾಣಕ್ಕೆ ₹4,03,000 ವೆಚ್ಚ ತಗುಲಿದ್ದು ಒಂದು ಹಾಲ್, ಬೆಡ್‌ರೂಂ ಮತ್ತು ಅಡುಗೆ ಕೋಣೆಯನ್ನು ಒಳಗೊಂಡಿವೆ. ಗಾಳಿ ಮತ್ತು ಬೆಳಕಿಗಾಗಿ ಪ್ರತಿ ಮನೆಗೂ ಬಾಲ್ಕನಿ ರೂಪಿಸಿರುವುದು ವಿಶೇಷ. ಕುಡಿಯುವ ನೀರಿಗಾಗಿ ಎಂಟು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಹಾಗೂ ಪ್ರತಿ ಬ್ಲಾಕ್‌ಗೆ ಎರಡು ಚಿಕ್ಕ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ.

ಒಟ್ಟು ಅನುದಾನ ಎಷ್ಟು?:
ರಾಜೀವ್ ಆವಾಸ್ ಯೋಜನೆಯಡಿ ಜಫರಾಬಾದ್‌ನಲ್ಲಿ 704 ಮತ್ತು ಕೋಟನೂರ (ಡಿ)ಯಲ್ಲಿ 320 ಸೇರಿ ಒಟ್ಟು 1,024 ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಒಟ್ಟು ₹56 ಕೋಟಿ ವೆಚ್ಚವಾಗಿದೆ. ಕೇಂದ್ರ ಸರ್ಕಾರ ಶೇ 50, ರಾಜ್ಯ ಸರ್ಕಾರ ಶೇ 25 ಮತ್ತು ಶೇ 25ರಷ್ಟು ವಂತಿಕೆಯನ್ನು ಫಲಾನುಭವಿಗಳು ಭರಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳ ಪಾಲಿನ ಶೇ 25ರಷ್ಟು ವಂತಿಕೆ ಪೈಕಿ ಸರ್ಕಾರ ಶೇ 15ರಷ್ಟು ವಂತಿಕೆಯನ್ನು ಹೆಚ್ಚುವರಿಯಾಗಿ ಪಾವತಿಸಿದೆ. ಹೀಗಾಗಿ ಇವರು ಕೇವಲ ಶೇ 10ರಷ್ಟು ವಂತಿಕೆಯನ್ನು ಭರಿಸಿದ್ದಾರೆ.

ಸಮುದಾಯ ಕೇಂದ್ರ: ವಸತಿ ಸಮುಚ್ಛಯದ ನಿವಾಸಿಗಳಿಗೆ ಅನುಕೂಲಕ ಕಲ್ಪಿಸಲು ಬಹುಬಳಕೆ ಸಮುದಾಯ ಭವನವನ್ನೂ ನಿರ್ಮಿಸಲಾಗಿದೆ. ಈ ಕಟ್ಟಡದ ನೆಲಮಹಡಿಯಲ್ಲಿ ಶಾಲೆ/ಪ್ರಾಥಮಿಕ ಆರೋಗ್ಯ ಕೇಂದ್ರ, ಓದುವ ಕೋಣೆ ಹಾಗೂ ಐದು ಮಳಿಗೆಗಳು ಇವೆ. ಒಂದನೇ ಅಂತಸ್ತಿನಲ್ಲಿ ವಿಶಾಲವಾದ ಸಭಾಂಗಣವಿದೆ.

‘ರಾಜ್ಯದ ನಗರ ಮತ್ತು ಪಟ್ಟಣಗಳನ್ನು ಕೊಳೆಗೇರಿ ಮುಕ್ತಗೊಳಿಸುವುದು ರಾಜೀವ್ ಆವಾಸ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜಫರಾಬಾದ್‌ನಲ್ಲಿ ಫಲಾನುಭವಿಗಳ ಅನುಕೂಲಕ್ಕಾಗಿ ಸಮುದಾಯ ಕೇಂದ್ರ ನಿರ್ಮಿಸಲಾಗಿದ್ಗಿದು, ಅಲ್ಲಿ ಮದುವೆ, ಸಭೆ–ಸಮಾರಂಭಗಳನ್ನು ನಡೆಸಬಹುದಾಗಿದೆ’ ಎಂದು ಪಾಲಿಕೆ ಆಯುಕ್ತ ಪಿ.ಸುನಿಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಕೊಳೆಗೇರಿ ನಿವಾಸಿಗಳು, ನಗರ ಪ್ರದೇಶಗಳ ಬಡವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ನ. 27ರಂದು ಹಕ್ಕು ಪತ್ರ ವಿತರಿಸಲಾಗುವುದು.
ಪಿ.ಸುನಿಲ್‌ಕುಮಾರ
ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT