ಯಲಬುರ್ಗಾ

‘ಸಹಕಾರ ಸಂಘಗಳಿಗೆ ಪಾರದರ್ಶಕತೆ ಅಗತ್ಯ’

ವ್ಯವಹಾರದಲ್ಲಿ ಪಾರದರ್ಶಕತೆ, ಕರ್ತವ್ಯ ನಿಷ್ಠೆ ಹಾಗೂ ಪರಸ್ಪರ ಸಹಕಾರ ಭಾವನೆಗಳು ಒಳಗೊಂಡಿದ್ದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿಗೊಳ್ಳಲು ಸಾಧ್ಯವಿದೆ

ಯಲಬುರ್ಗಾ: ವ್ಯವಹಾರದಲ್ಲಿ ಪಾರದರ್ಶಕತೆ, ಕರ್ತವ್ಯ ನಿಷ್ಠೆ ಹಾಗೂ ಪರಸ್ಪರ ಸಹಕಾರ ಭಾವನೆಗಳು ಒಳಗೊಂಡಿದ್ದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿಗೊಳ್ಳಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಇಲಾಖೆ, ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಮತ್ತು ತಾಲ್ಲೂಕು ಪ್ರೌಢ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 64ನೇ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷೆ ಶಕುಂತಲಾ ಹುಡೇಜಾಲಿಯವರು ಅಧ್ಯಕ್ಷತೆವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಪಿ.ಎನ್. ಕಳಸಣ್ಣವರ, ಇಫ್ಕೋ ಸಂಸ್ಥೆಯ ಚಿದಂಬರಮೂರ್ತಿ ಹೊಸಪೇಟೆ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ರಾದ ಹನುಮಪ್ಪ ಉಪ್ಪಾರ,

ಪಟ್ಟಣ ಪಂಚಾಯತ ಅಧ್ಯಕ್ಷೆ ಜಯಶ್ರೀ ಅರಕೇರಿ, ಹಾಗೂ ವಿವಿಧ ಸಹಕಾರ ಸಂಘಗಳ ಸಹಕಾರಿಗಳಾದ ನಿರ್ದೇಶಕರಾದ ಗವಿಸಿದ್ದೇಶ ಹುಡೇಜಾಲಿ, ಹನುಮಪ್ಪ ಸಂಕನೂರ, ಅನ್ನದಾನನಗೌಡ ಪಾಟೀಲ ,ದುರಗಪ್ಪ ಬಸಪ್ಪ, ಶರಣಪ್ಪ , ಷಣ್ಮುಖಪ್ಪ ರಾಂಪೂರ , ಶರಣಬಸಪ್ಪ ದಾನಕೈ, ವೈ.ಜಿ. ಪಾಟೀಲ ಬಾಲದಂಡಪ್ಪ ತಳವಾರ, ರತ್ನಮ್ಮ ಮಾಲಿಪಾಟೀಲ, ಕಳಕಮಲ್ಲಪ್ಪ ಅಂತೂರ, ಆರ್.ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕರಾದ ಶಿವಕುಮಾರ, ಶ್ರೀಧರ, ಸಿದ್ರಾಮಯ್ಯಸ್ವಾಮಿ, ನಾಗರಾಜ ಬೆಲೇರಿ, ನೀಲನಗೌಡ ಪವಾಡಿಗೌಡರ, ಗವಿಸಿದ್ದಯ್ಯ ಎಸ್. ಹಿರೇಮಠ ಉಪಸ್ಥಿತರಿದ್ದರು. ದೇವಪ್ಪ ವಾಲ್ಮೀಕಿ ನಿರೂಪಿಸಿದರು. ಗೈಬುಸಾಬ ತಳಕಲ್ ವಂದಿಸಿದರು

Comments
ಈ ವಿಭಾಗದಿಂದ ಇನ್ನಷ್ಟು
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

ಕೊಪ್ಪಳ
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

21 Jan, 2018
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

ಕೊಪ್ಪಳ
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

20 Jan, 2018

ಗಂಗಾವತಿ
ಆತ್ಮಹತ್ಯೆ ನಿರ್ಣಯ ಹಿಂಪಡೆದ ಪೌರನೌಕರರು

ಹಿರಿಯ ಕಾರ್ಮಿಕ ನಾಯಕ ಜೆ. ಭಾರದ್ವಾಜ್, ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯದಂತೆ ಸರ್ಕಾರದ ನಿರ್ದೇಶನವಿದೆ.

20 Jan, 2018

ಕೊಪ್ಪಳ
ಜೀವನ ಮೌಲ್ಯ ಜಾಗೃತಗೊಳಿಸಿದ ಸಾಧಕ

ಅವರು ಅಸ್ಪೃಶ್ಯತೆಯ ವಿರುದ್ಧ ನೇರವಾಗಿ ಮಾತನಾಡುವ, ಖಂಡಿಸುವ ವ್ಯಕ್ತಿ ಆಗಿದ್ದರು. ಇವರ ಇತಿಹಾಸವನ್ನು ಯಾರು ಬರೆಯಲಿಲ್ಲ. ಆದರೆ, ವೇಮನರು ತಮ್ಮ ಪದ್ಯಗಳ ಮೂಲಕ ಪ್ರತಿಯೊಬ್ಬರ...

20 Jan, 2018
‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

ಕುಷ್ಟಗಿ
‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

19 Jan, 2018