ಮುದ್ದೇಬಿಹಾಳ

ಲಿಂಗಾಯತ ಮಹಾರ‍್ಯಾಲಿ ಬೆಂಬಲಿಸಿ

‘ವೈದಿಕ ಧರ್ಮದಲ್ಲಿದ್ದ ಕಂದಾಚಾರ, ಮೂಢ ನಂಬಿಕೆ, ಅರ್ಥವಿಲ್ಲದ ಹೋಮ, ಹವನಗಳಂಥ ಆಚರಣೆಗಳನ್ನು ವಿರೋಧಿಸಿ ಬಸವಾದಿ ಶರಣರು 12ನೇ ಶತಮಾನದಲ್ಲಿ ಸ್ಥಾಪಿಸಿದ ಧರ್ಮವೇ ಬಸವ ಧರ್ಮ.

ಮುದ್ದೇಬಿಹಾಳ: ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಯಾವುದೇ ಒಂದು ಜಾತಿ, ಮತಗಳಿಗೆ ಮೀಸಲಾಗಿರದೇ ಮಾನವೀಯತೆ, ಸಕಲರಲ್ಲಿ ಸಮಾನತೆ ತರುವುದೇ ಆಗಿದ್ದು, ಅದರ ಸಾಂವಿಧಾನಿಕ ಮಾನ್ಯತೆಗಾಗಿ ನಡೆ ಯುತ್ತಿರುವ ಮಹಾರ‍್ಯಾಲಿಗೆ ಎಲ್ಲರೂ ಬೆಂಬಲಿಸಬೇಕು ಎಂದು ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ.ರವಿ ಬಿರಾದಾರ ಮನವಿ ಮಾಡಿದರು.

ಪಟ್ಟಣದ ಎ.ಪಿ.ಎಂ.ಸಿ. ಆವರಣ ದಲ್ಲಿರುವ ರಮೇಶ ಢವಳಗಿ ಅವರ ಅಡತ್ ಅಂಗಡಿಯಲ್ಲಿ ನಡೆದ ಲಿಂಗಾಯತ ಸಮಾಜದ ಉಪ ಪಂಗಡಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಲಿಂಗಾಯತ ಧರ್ಮದಲ್ಲಿ 99 ಜಾತಿಗಳಿದ್ದು, ಆಯಾ ವೃತ್ತಿ ಗನುಗುಣವಾಗಿ ಗುರುತಿಸಲ್ಪಟ್ಟಿವೆ. ಲಿಂಗಾಯತ ಧರ್ಮವನ್ನು ಬಸವಣ್ಣನೇ ಸ್ಥಾಪಿಸಿದ ಎಂಬುದಕ್ಕೆ ಸಾಕಷ್ಟು ಅಧಿಕೃತ ದಾಖಲೆಗಳಿವೆ. 1901 ರಲ್ಲಿ ಬ್ರಿಟೀಷರು ನಡೆಸಿದ ಸಾರ್ವತ್ರಿಕ ಜನಗಣತಿಯಲ್ಲಿ ಸಹ ಲಿಂಗಾಯತ ಧರ್ಮದ ದಾಖಲೆ ಗಳಿವೆ’ ಎಂದರು.

‘ವೈದಿಕ ಧರ್ಮದಲ್ಲಿದ್ದ ಕಂದಾಚಾರ, ಮೂಢ ನಂಬಿಕೆ, ಅರ್ಥವಿಲ್ಲದ ಹೋಮ, ಹವನಗಳಂಥ ಆಚರಣೆಗಳನ್ನು ವಿರೋಧಿಸಿ ಬಸವಾದಿ ಶರಣರು 12ನೇ ಶತಮಾನದಲ್ಲಿ ಸ್ಥಾಪಿಸಿದ ಧರ್ಮವೇ ಬಸವ ಧರ್ಮ. ಬಸವ ಧರ್ಮದಲ್ಲಿ ಸ್ತ್ರೀ ಸ್ವಾತಂತ್ರ್ಯ ಇದೆ. ವೀರಶೈವ ಲಿಂಗಾಯತ ಧರ್ಮ ಎಂಬ ಹೆಸರಿನಲ್ಲಿ ಸಾಂವಿಧಾನಿಕ ಮಾನ್ಯತೆಗಾಗಿ ಮೂರು ಸಲ ಮನವಿ ಸಲ್ಲಿಸಿದಾಗ್ಯೂ ಅದು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ತಿರಸ್ಕಾರಗೊಂಡಿದೆ. ಈಗಲಾ ದರೂ ನಾವು ಎಚ್ಚೆತ್ತು ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ ಎಂದವರು ಹೇಳಿದರು.

ಚಂದ್ರಶೇಖರ ಉಮರಾಣಿ, ಚಂದ್ರಶೇಖರ ಇಟಗಿ, ಶಿವಕುಮಾರ ಬಿರಾದಾರ ಮಾತನಾಡಿದರು. ಎಸ್.ಎಂ.ಬನೋಶಿ, ಎನ್.ಬಿ.ಕುಂಬಾರ, ಶಂಕ್ರಪ್ಪ ಹಡಪದ, ಮಡಿವಾಳಪ್ಪ ಮಡಿವಾಳರ, ಚನ್ನಬಸು ಗುಡ್ಡದ, ರಾಜು ಕರಡ್ಡಿ, ಮುತ್ತು ಬಿರಾದಾರ, ಪ್ರಕಾಶ ಕಶೆಟ್ಟಿ, ಎಂ.ಸಿ.ಕುಂಬಾರ, ಸಿ.ಬಿ.ಕವಡಿಮಟ್ಟಿ, ಗೋಪಿ ಮಡಿವಾಳರ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

ವಿಜಯಪುರ
ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

19 Apr, 2018
ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

ನಿಡಗುಂದಿ
ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

19 Apr, 2018

ನಿಡಗುಂದಿ
ಚುನಾವಣೆ ಬಹಿಷ್ಕಾರ: ಎಚ್ಚರಿಕೆ

ಗ್ರಾಮಕ್ಕೆ ಮೂಲಸೌಲಭ್ಯ ಗಳನ್ನು ಒದಗಿಸಿಲ್ಲ ಎಂದು ಆಕ್ರೋಶ ಗೊಂಡಿರುವ ಸಮೀಪದ ಉಣ್ಣಿಬಾವಿ ಗ್ರಾಮಸ್ಥರು, ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

19 Apr, 2018
ಅಕ್ಷಯ ತೃತೀಯ; ಖರೀದಿ ಜೋರು

ವಿಜಯಪುರ
ಅಕ್ಷಯ ತೃತೀಯ; ಖರೀದಿ ಜೋರು

19 Apr, 2018
ರಾಷ್ಟ್ರೀಯ ಬಸವೋತ್ಸವ; ಬಸವ ಜಯಂತಿ ಮರೀಚಿಕೆ

ವಿಜಯಪುರ
ರಾಷ್ಟ್ರೀಯ ಬಸವೋತ್ಸವ; ಬಸವ ಜಯಂತಿ ಮರೀಚಿಕೆ

18 Apr, 2018