ಶಹಾಪುರ

ಎಸ್‌ಬಿಐ ಬ್ಯಾಂಕ್‌ ಮುಂದೆ ಬಾಯಿ ತೆರೆದ ಚರಂಡಿ

‘ಬೀದರ್‌– ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡಿರುವ ಚರಂಡಿ ತುಸು ದೂರದಲ್ಲಿ ಸ್ಲ್ಯಾಬ್ ಹಾಕಲಾಗಿದೆ. ಆದರೆ, ಬ್ಯಾಂಕಿನ ಮುಂದುಗಡೆ ರಕ್ಷಣೆಯ ಕ್ರಮ ತೆಗೆದುಕೊಂಡಿಲ್ಲ.

ಶಹಾಪುರ: ‘ನಗರದ ಎಸ್‌ಬಿಐ ಬ್ಯಾಂಕಿನ ಮುಂದೆ ಚರಂಡಿ ಬಾಯಿ ತೆರೆದು ನಿಂತಿದೆ. ಬ್ಯಾಂಕಿನ ವ್ಯವಹಾರಕ್ಕೆ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ಆತಂಕದಲ್ಲಿ ಬರುವ ದುಃಸ್ಥಿತಿ ಇದೆ’ ಎಂದು ರೈತ ಮುಖಂಡ ಅಮರೇಶ ನಾಯಕ ಇಟಗಿ ಆರೋಪಿಸಿದ್ದಾರೆ.

‘ಬೀದರ್‌– ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡಿರುವ ಚರಂಡಿ ತುಸು ದೂರದಲ್ಲಿ ಸ್ಲ್ಯಾಬ್ ಹಾಕಲಾಗಿದೆ. ಆದರೆ, ಬ್ಯಾಂಕಿನ ಮುಂದುಗಡೆ ರಕ್ಷಣೆಯ ಕ್ರಮ ತೆಗೆದುಕೊಂಡಿಲ್ಲ. ತುಸು ನಿಷ್ಕಾಳಜಿ ವಹಿಸಿದರೆ ಚರಂಡಿಯಲ್ಲಿ ಬೀಳಬಹುದು.

ಅಲ್ಲದೆ, ಚರಂಡಿಯ ದುರ್ವಾಸನೆ ಇಡೀ ಬ್ಯಾಂಕಿನ ತುಂಬಾ ವ್ಯಾಪಿಸಿದೆ. ನಗರಸಭೆಯ ಪೌರಾಯುಕ್ತರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಒಂದು ವಾರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸದಿದ್ದರೆ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಅವರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ವೈಭವದ ಸೋಮನಾಥ ದೇವರ ಉಚ್ಛಾಯಿ

ಕಕ್ಕೇರಾ
ವೈಭವದ ಸೋಮನಾಥ ದೇವರ ಉಚ್ಛಾಯಿ

19 Jan, 2018
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ

ಯಾದಗಿರಿ
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ

19 Jan, 2018
ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಒದಗಿಸಿ

ಯಾದಗಿರಿ
ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ಒದಗಿಸಿ

18 Jan, 2018

ಕೆಂಭಾವಿ
ಮೂಲಸೌಕರ್ಯಕ್ಕೆ ಆದ್ಯತೆ: ಶಿರವಾಳ

ಸಮೀಪದ ಮಲ್ಲಾ ಕ್ರಾಸ್‌ನಲ್ಲಿ 2017–18ನೇ ಸಾಲಿನ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಮಲ್ಲಾದಿಂದ ಕೆಂಭಾವಿಯ 9.8 ಕಿ.ಮೀ ರಸ್ತೆಯ ₹1.25 ಕೋಟಿ...

18 Jan, 2018
ಗಂಭೀರ ಚರ್ಚೆ ಇಲ್ಲದೆ ಸಭೆ ಸಮಾಪ್ತಿ

ಯಾದಗಿರಿ
ಗಂಭೀರ ಚರ್ಚೆ ಇಲ್ಲದೆ ಸಭೆ ಸಮಾಪ್ತಿ

18 Jan, 2018