ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಇತಿಹಾಸಕ್ಕೆ ಹೊಸ ಶಾಟ್ ಸೇರ್ಪಡೆ; ಇದು ಚಮರ ಸಿಲ್ವಾರ ವಿಚಿತ್ರ ಹೊಡೆತ!

Last Updated 22 ನವೆಂಬರ್ 2017, 11:58 IST
ಅಕ್ಷರ ಗಾತ್ರ

ಕೊಲಂಬೊ: ಕ್ರಿಕೆಟ್ ಇತಿಹಾಸದಲ್ಲಿ ವಿಚಿತ್ರ ಶಾಟ್ ಬಾರಿಸಿ ಶ್ರೀಲಂಕಾ ಆಟಗಾರ ಚಮರ್ ಸಿಲ್ವಾ ನಗೆಪಾಟಲಿಗೀಡಾಗಿದ್ದಾರೆ. ಕೊಲಂಬೊದಲ್ಲಿ ನಡೆಯುತ್ತಿರುವ ಮೆರ್ಕೆಂಟೈಲ್ ಕ್ರಿಕೆಟ್ ಪಂದ್ಯದಲ್ಲಿ ಎಂಎಎಸ್ ಯುನಿಚೆಲಾ ಮತ್ತು ತೀಜೆ ಲಂಕಾ ನಡುವಿನ ಪಂದ್ಯದಲ್ಲಿ ಚಮರ್ ಸಿಲ್ವಾ ಈ ರೀತಿ ಬ್ಯಾಟಿಂಗ್ ಮಾಡಿದ್ದಾರೆ.

ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಶಾನ್ ವಿಕೆಟ್ ಕೀಪರ್ ಕೈಗೆ ಬಾಲ್ ಸಿಗದಂತೆ ಬೌಂಡರಿ ಕಳುಹಿಸುವ ಶಾಟ್ ಹೊಡೆಯುತ್ತಿದ್ದರು. ಈ ಶಾಟ್ 'ದಿಲ್ ಸ್ಕೂಪ್' ಎಂದು ಕರೆಯಲ್ಪಡುತ್ತದೆ. ಇದೇ ರೀತಿ ಚಮರ ಸಿಲ್ವಾ ಅವರು ಸ್ಟಂಪ್ಸ್ ನ ಹಿಂದೆ ಓಡಿ ಹೋಗಿ ವಿಕೆಟ್ ಕೀಪರ್ ಬಳಿ ನಿಂತು ಬೌಂಡರಿ ಹೊಡೆಯಲು ಯತ್ನಿಸಿದ್ದರು. ಆದರೆ ಬಾಲ್ ನೇರ ಸ್ಟಂಪ್ಸ್ ಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT