ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಆಹಾರ ಪದ್ಧತಿ

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಲ ಬದಲಾದಂತೆ ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ತರಬೇಕು. ಬೇಸಿಗೆಯಲ್ಲಿ ತಂಪಾದ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಕು. ಮಳೆ ಹಾಗೂ ಚಳಿಗಾಲದಲ್ಲಿ ಬೆಚ್ಚಗಿನ ಆಹಾರಗಳನ್ನು ತಿನ್ನಬೇಕು. ಅದರಲ್ಲೂ ಆಯಾ ಕಾಲದಲ್ಲಿ ಬೆಳೆಯುವ ಆಹಾರ ತಿನ್ನುವುದು ತುಂಬಾ ಒಳ್ಳೆಯದು. ಇದರಿಂದ ಆ ಕಾಲಕ್ಕೆ ಅಗತ್ಯವಾದ ಪೋಷಕಾಂಶಗಳು ದೇಹಕ್ಕೆ ದೊರೆಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಚಳಿಗಾಲದಲ್ಲಿ ಬಿಸಿ-ಬಿಸಿ ಆಹಾರಗಳನ್ನು ತಿನ್ನುವುದು, ಶುಂಠಿ, ಚಕ್ಕೆ ಈ ರೀತಿಯ ಮಸಾಲೆಗಳನ್ನು ಆಹಾರದಲ್ಲಿ ಸೇರಿಸುವುದು, ಶುಂಠಿ ಟೀ ಕುಡಿಯುವುದು ಇವೆಲ್ಲ ತುಂಬ ಒಳ್ಳೆಯದು. ಅದರಲ್ಲಿ ಈ ಕೆಳಗಿನ ಆಹಾರಗಳು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಸಂರಕ್ಷಣೆ ಮಾಡುವಲ್ಲಿ ತುಂಬ ಸಹಕಾರಿ.

ಕಿತ್ತಳೆ ತಿಂದರೆ ಶೀತವಾಗುತ್ತದೆ ಎಂದು ಅದನ್ನು ತಿನ್ನದೇ ಇರುತ್ತಾರೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ಇದನ್ನು ತಿಂದರೆ ಕೆಮ್ಮು, ಶೀತ ಇವುಗಳ ವಿರುದ್ಧ ಹೋರಾಡುತ್ತದೆ. ಪ್ರತಿದಿನ ಕಿತ್ತಳೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ನೆಲಗಡಲೆಯನ್ನು ಹುರಿದು, ಬೇಯಿಸಿ ಮತ್ತು ಹಸಿಯಾಗಿ ಕೂಡ ತಿನ್ನಬಹುದು. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ಕೊಡುವುದರ ಜೊತೆಗೆ ದೇಹವನ್ನು ಬೆಚ್ಚಗಿಡುತ್ತದೆ.

ಸೀಬೆಕಾಯಿ ಹೊಟ್ಟೆಯ ಹಾಗೂ ಮೂಳೆಗಳ ಆರೋಗ್ಯಕ್ಕೆ ತುಂಬ ಒಳ್ಳೆಯದು. ಚಳಿಗಾಲದಲ್ಲಿ ಸಂಧಿ ನೋವು ಹೆಚ್ಚಾಗಿ ಕಂಡು ಬರುತ್ತದೆ. ಸೀಬೆಕಾಯಿ ಸಂಧಿನೋವು ತಡೆಯುವಲ್ಲಿ ಸಹಕಾರಿಯಾಗಿದೆ.

ಕ್ಯಾರೆಟ್ ನಲ್ಲಿ ವಿಟಮಿನ್ ಬಿ, ಸಿ, ಡಿ ಮತ್ತು ಕೆ ಅಂಶವಿರುವುದರಿಂದ ಚಳಿಗಾಲದಲ್ಲಿ ಇದನ್ನು ನಿಮ್ಮ ಡಯಟ್ ನಲ್ಲಿ ಸೇರಿಸಲು ಮರೆಯಬೇಡಿ.

ಕಿವಿಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಇದೆ. ಕಿವಿ ಹಣ್ಣನ್ನು ಕತ್ತರಿಸಿ ಚಿಟಿಕೆಯಷ್ಟು ಉಪ್ಪು ಹಾಕಿ ತಿಂದರೆ ರುಚಿಯ ಜೊತೆಗೆ ಆರೋಗ್ಯಕ್ಕೆ ತುಂಬ ಒಳ್ಳೆಯದು.

ಜ್ವರ ಬಂದು ತುಂಬಾ ಸುಸ್ತಾದಾಗ ಒಂದು ಚಿಕನ್ ಸೂಪ್ ಕುಡಿದರೆ ಸಾಕು; ಸುಸ್ತು ತಕ್ಷಣ ಮಾಯವಾಗುವುದು. ಚಳಿಗಾಲದಲ್ಲಿ ಚಿಕನ್ ಸೂಪ್ ಅನ್ನು ವಾರದಲ್ಲಿ ಎರಡು ಬಾರಿಯಾದರೂ ಕುಡಿಯುವುದು ಒಳ್ಳೆಯದು.

ಕೋಕಾ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಊಟ ಮಾಡಿದ ನಂತರ ಕೋಕಾ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಹಾಗೂ ದೇಹದ ಆರೋಗ್ಯ ಹೆಚ್ಚಾಗುವುದು.

ಚಳಿಯಲ್ಲಿ ಎಣ್ಣೆಯಲ್ಲಿ ಕರಿದ ಕುರುಕಲು ತಿಂಡಿಗಳನ್ನು ಬಿಸಿ-ಬಿಸಿಯಾಗಿ ತಿನ್ನಲು ಇಷ್ಟಪಡುತ್ತೇವೆ. ಇವುಗಳನ್ನು ತಿಂದರೆ ದೇಹದ ತೂಕ ಹೆಚ್ಚಾಗುವುದು. ಅದರ ಬದಲು ನಟ್ಸ್ ತಿಂದರೆ ಬಾಯಿಗೂ ರುಚಿ, ದೇಹದ ಆರೋಗ್ಯಕ್ಕೂ ಒಳ್ಳೆಯದು.

ಸೊಪ್ಪನ್ನು ಆಹಾರಕ್ರಮದಲ್ಲಿ ಹೆಚ್ಚಾಗಿ ಸೇರಿಸಬೇಕು. ಅದರಲ್ಲೂ ಈ ಸಮಯದಲ್ಲಿ ಪಾಲಾಕ್ ಸೊಪ್ಪು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT