ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ ಸಂದೇಶ ಅಳಿಸಲು

ತಪ್ಪು ಸಂದೇಶ ಕಳಿಸಿ ಕೈ ಹಿಸುಕಿಕೊಳ್ಳುವುದರ ಬದಲು ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ ಸಂದೇಶವನ್ನು ಅಳಿಸುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ. ಕಳಿಸಿದ ಸಂದೇಶ ಯಾವುದೇ ವ್ಯಕ್ತಿ ಅಥವಾ ಗ್ರೂಪ್‌ಗೆ ಡೆಲಿವರಿಯಾಗಿದ್ದರೂ ಆ ಸಂದೇಶವನ್ನು ಅಳಿಸುವ ಆಯ್ಕೆ ವಾಟ್ಸ್‌ಆ್ಯಪ್‌ನಲ್ಲಿದೆ.

ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ ಸಂದೇಶ ಅಳಿಸಲು

ಸ್ಮಾರ್ಟ್‌ಫೋನ್‍ಗಳ ಬಳಕೆ ಹೆಚ್ಚಾಗುತ್ತಿರುವಂತೆ ವಾಟ್ಸ್‌ಆ್ಯಪ್‌ ಬಳಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಮಾಡುವವರು ಈಗ ತೀರಾ ವಿರಳ. ಜನಪ್ರಿಯ ಮೆಸೆಜಿಂಗ್ ಆ್ಯಪ್ ಆಗಿರುವ ವಾಟ್ಸ್‌ಆ್ಯಪ್‌ನಲ್ಲಿ ಹಲವು ಬಗೆಯ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದೆಂಬ ವಿಷಯ ಹಲವರಿಗೆ ಗೊತ್ತಿದೆ. ಆದರೆ, ಯಾರಿಗೋ ಕಳಿಸಬೇಕಾದ ಫೈಲ್ ಇನ್ಯಾರಿಗೋ ಕಳಿಸಿಬಿಟ್ಟರೆ, ಕಣ್ತಪ್ಪಿ ಯಾವುದೋ ಖಾಸಗಿ ವಿಡಿಯೊ ಅಥವಾ ಚಿತ್ರ ಯಾವುದಾದರೂ ಗ್ರೂಪ್‌ಗೆ ಹೋಗಿಬಿಟ್ಟರೆ?

ಹೀಗೆ ತಪ್ಪು ಸಂದೇಶ ಕಳಿಸಿ ಕೈ ಹಿಸುಕಿಕೊಳ್ಳುವುದರ ಬದಲು ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ ಸಂದೇಶವನ್ನು ಅಳಿಸುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ. ಕಳಿಸಿದ ಸಂದೇಶ ಯಾವುದೇ ವ್ಯಕ್ತಿ ಅಥವಾ ಗ್ರೂಪ್‌ಗೆ ಡೆಲಿವರಿಯಾಗಿದ್ದರೂ ಆ ಸಂದೇಶವನ್ನು ಅಳಿಸುವ ಆಯ್ಕೆ ವಾಟ್ಸ್‌ಆ್ಯಪ್‌ನಲ್ಲಿದೆ.

ತಪ್ಪಾಗಿ ಕಳಿಸಿದ ಮೆಸೇಜ್ ಅಳಿಸಬೇಕೆಂದರೆ ವಾಟ್ಸ್‌ಆ್ಯಪ್‌ನಲ್ಲಿ ಆ ಮೆಸೇಜ್ ಅಥವಾ ಫೈಲ್ ಮೇಲೆ ಲಾಂಗ್ ಪ್ರೆಸ್ ಮಾಡಿ. ಈಗ ಮೇಲೆ ಕಾಣುವ ಆಯ್ಕೆಗಳಲ್ಲಿ ಡಿಲೀಟ್ ಚಿಹ್ನೆ ಒತ್ತಿ. ಈಗ ಕಾಣಿಸಿಕೊಳ್ಳುವ ಆಯ್ಕೆಗಳಲ್ಲಿ Delete for everyone ಕ್ಲಿಕ್ ಮಾಡಿ. ಈಗ ನೀವು ಕಳಿಸಿದ ಮೆಸೇಜ್ ಸ್ವೀಕರಿಸಿದವರ ವಾಟ್ಸ್‌ಆ್ಯಪ್‌ನಲ್ಲೂ ಡಿಲೀಟ್ ಆಗಿರುತ್ತದೆ. ನಿಮ್ಮ ವಾಟ್ಸ್‌ಆ್ಯಪ್‌ನಲ್ಲಿ You deleted this massage ಎಂಬ ಬರಹ ಕಾಣಿಸಿಕೊಳ್ಳುತ್ತದೆ. ಹಾಗೆಯೇ ನೀವು ಸಂದೇಶ ಕಳಿಸಿದವರ ವಾಟ್ಸ್‌ಆ್ಯಪ್‌ನಲ್ಲಿ This message was recalled / deleted ಎಂಬ ಬರಹ ಕಾಣುತ್ತದೆ.

ಅಂದಹಾಗೆ ತಪ್ಪಾಗಿ ಕಳಿಸಿದ ಸಂದೇಶ ಅಳಿಸಲು ನಿಮಗಿರುವ ಸಮಯ 7 ನಿಮಿಷಗಳು ಮಾತ್ರ. 7 ನಿಮಿಷದೊಳಗೆ ನೀವು ಸಂದೇಶ ಡಿಲೀಟ್ ಮಾಡದಿದ್ದರೆ ಆ ಸಂದೇಶವನ್ನು ನಿಮ್ಮ ವಾಟ್ಸ್‌ಆ್ಯಪ್‌ನಲ್ಲಿ ಅಳಿಸಬಹುದೇ ಹೊರತು ಸಂದೇಶ ಸ್ವೀಕರಿಸಿದವರ ವಾಟ್ಸ್‌ಆ್ಯಪ್‌ನಲ್ಲಿ ಅಳಿಸಲು ಸಾಧ್ಯವಿಲ್ಲ. 7 ನಿಮಿಷದ ಬಳಿಕ ಆ ಸಂದೇಶ ಅವರ ವಾಟ್ಸ್‌ಆ್ಯಪ್‌ನಲ್ಲಿ ಸೇವ್ ಆಗಿರುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಮದರ್‌ಬೋರ್ಡ್‌ನಲ್ಲಿದೆ ಚಿನ್ನ

ಡೆಲ್‌ ಕಂಪನಿ
ಮದರ್‌ಬೋರ್ಡ್‌ನಲ್ಲಿದೆ ಚಿನ್ನ

18 Jan, 2018
ರೀಸ್ಟಾರ್ಟ್‌ ಪರಿಹಾರ

ತಂತ್ರೋಪನಿಷತ್ತು
ರೀಸ್ಟಾರ್ಟ್‌ ಪರಿಹಾರ

18 Jan, 2018
ಸ್ವಯಂ ಚಾಲಿತ ವಾಹನಕ್ಕೆ ಮೆದುಳು

ಪ್ರೊಸೆಸರ್ ಬಳಕೆ
ಸ್ವಯಂ ಚಾಲಿತ ವಾಹನಕ್ಕೆ ಮೆದುಳು

18 Jan, 2018
ಬದುಕು ಬದಲಿಸುವ ತಂತ್ರಜ್ಞಾನ

ಹೊಸತುಗಳ ಸಡಗರ
ಬದುಕು ಬದಲಿಸುವ ತಂತ್ರಜ್ಞಾನ

18 Jan, 2018
ಬರಲಿವೆ ಹೊಸ ತಂತ್ರಜ್ಞಾನಗಳು

ಮಾಹಿತಿ
ಬರಲಿವೆ ಹೊಸ ತಂತ್ರಜ್ಞಾನಗಳು

10 Jan, 2018