ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 23–11–1967

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಂಜಾಬ್ ಸಂಪುಟದ ರಾಜಿನಾಮೆ

ಚಂಡೀಘಡ, ನ. 22– ಕೇವಲ ಎಂಟು ತಿಂಗಳುಗಳ ಹಿಂದೆ ಅಧಿಕಾರ ವಹಿಸಿಕೊಂಡ ಪಂಜಾಬಿನ ಜನತಾ ಸಂಯುಕ್ತ ರಂಗದ ಮಂತ್ರಿಮಂಡಲವು ಇಂದು ರಾಜಿನಾಮೆ ಸಲ್ಲಿಸಿತು.

ತಮ್ಮ ಮತ್ತು ಇತರ ಸಚಿವರ ರಾಜಿನಾಮೆಗಳನ್ನು ರಾಜ್ಯಪಾಲ ಶ್ರೀ ಡಿ.ಸಿ. ಪಾವಟೆಯವರಿಗೆ ಮುಖ್ಯಮಂತ್ರಿ ಗುರ್ನಾಂ ಸಿಂಗ್‌ರವರು ಒಪ್ಪಿಸಿದರು.

ಪಂಜಾಬಿನ ಈಗಿನ ವಿಧಾನಸಭೆಯನ್ನು ವಿಸರ್ಜಿಸಿ, ಸ್ಪಷ್ಟ ನಿರ್ಣಯ ನೀಡಲು ಜನತೆಗೆ ಸಹಾಯವಾಗಲು ಮಧ್ಯಕಾಲೀನ ಚುನಾವಣೆಯನ್ನು ನಡೆಸಬೇಕೆಂದು ರಾಜ್ಯಪಾಲರಿಗೆ ಗುರ್ನಾಂ ಸಿಂಗ್‌ರವರು ಕೋರಿಕೆ ಸಲ್ಲಿಸಿದ್ದಾರೆ.

ಇಂದಿರಾ ಸರ್ಕಾರದಲ್ಲಿ ಅವಿಶ್ವಾಸ ಸ್ವತಂತ್ರ ಪಕ್ಷ ವಿನಃ ಮಿಕ್ಕೆಲ್ಲ ವಿರೋಧ ಪಕ್ಷಗಳ ಬೆಂಬಲ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ನ. 22– ರಾಜ್ಯಪಾಲ ಧರ್ಮವೀರ ಅವರಿಂದ ಪಶ್ಚಿಮ ಬಂಗಾಳದ ಸಂಯುಕ್ತರಂಗ ಸರ್ಕಾರದ ವಜಾ ವಿಷಯವೇ ಇಂದು ಪಾರ್ಲಿಮೆಂಟ್ ಚರ್ಚೆಯನ್ನು ಪೂರ್ಣವಾಗಿ ಅವರಿಸಿತ್ತು.

ಆದರೆ ವಾದ ವಿವಾದಗಳಲ್ಲಿ ಹೆಚ್ಚಿನ ಹುರುಪು ಅಥವಾ ಕಾವು ಇರಲಿಲ್ಲ.

ಬಂಗಾಳದ ಜಿಜ್ಞಾಸೆ ಆಗಲೇ ಹಳೆಯದಾಗಿದ್ದುದು ಒಂದು ಕಾರಣ. ಅದಕ್ಕಿಂತ ಮುಖ್ಯವಾಗಿ, ಸ್ವತಂತ್ರ ಪಕ್ಷ ಖಂಡನೆಯಲ್ಲಿ ಪಾಲ್ಗೊಳ್ಳದೆ, ಸ್ವಾಗತದ ನಿಲುವು ತಳೆದುದರಿಂದ ಚರ್ಚೆ ಸತ್ವಹೀನವಾಯಿತು.

ಅಕಾಲಿ ನಾಯಕ ತಾರಾಸಿಂಗ್ ನಿಧನ

ಚಂಡೀಘಡ, ನ. 22– ಅಕಾಲಿ ದಳದ ಹಿರಿಯ ನಾಯಕ ಮಾಸ್ಟರ್ ತಾರಾಸಿಂಗ್ ಅವರು ಬುಧವಾರ ಬೆಳಗಿನ ಜಾವ 1.30 ಗಂಟೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ತಾರಾ ಸಿಂಗರಿಗೆ 84 ವರ್ಷ ವಯಸ್ಸಾಗಿದ್ದಿತು.

ಡಾ. ಘೋಷ್ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ

ನವದೆಹಲಿ, ನ. 22– ಪಶ್ಚಿಮ ಬಂಗಾಳದಲ್ಲಿನ ಡಾ. ಘೋಷ್ ನಾಯಕತ್ವದಲ್ಲಿ ರಚಿತವಾಗಿರುವ ನೂತನ ಸರ್ಕಾರಕ್ಕೆ ಹಾಗೂ ಪಂಜಾಬಿನಲ್ಲಿ ರಚಿಸಲ್ಪಡುವ ಬೇರೊಂದು ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುವುದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜರು ಇಂದು ಇಲ್ಲಿ ತಿಳಿಸಿದರು.

‘ಒಳಸಂಚಿನ’ ಪತ್ರ ವ್ಯವಹಾರ ಮಂಡನೆಗೆ ರಾಜ್ಯಸಭೆಯಲ್ಲಿ ಒತ್ತಾಯ, ಕೋಲಾಹಲ

ನವದೆಹಲಿ, ನ. 22– ಪಶ್ಚಿಮ ಬಂಗಾಳದಲ್ಲಿ ಸಂಯುಕ್ತರಂಗ ಸರ್ಕಾರವನ್ನು ಉರುಳಿಸಲು ಕೇಂದ್ರ ಮತ್ತು ರಾಜ್ಯಪಾಲರ ನಡುವೆ ’ಒಳಸಂಚು’ ನಡೆದಿದೆ  ಎಂದು ಅನುಮಾನಿಸಿದ ಕಮ್ಯುನಿಸ್ಟ್ ನಾಯಕ ಶ್ರೀ ಭೂಪೇಶ ಗುಪ್ತ ಮತ್ತು ಅವರ ಬೆಂಬಲಿಗರು, ಸಂಪುಟದ ವಜಾಕ್ಕೆ ಮುನ್ನ ನಡೆದ ಪತ್ರ ವ್ಯವಹಾರ ಪ್ರತಿ ಹಾಗೂ ರಾಜ್ಯಪಾಲರ ವರದಿಯ ಪ್ರತಿಗಳನ್ನೊದಗಿಸಬೇಕೆಂದು ಇಂದು ರಾಜ್ಯಸಭೆಯಲ್ಲಿ ಹಟ ಹಿಡಿದರು. ಆದರೆ ಅವರ ಯತ್ನ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT