ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯ ನಗಣ್ಯ...?

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹಳೆಯ 500, 1000 ರೂಪಾಯಿಯ ನೋಟು, ಆರ್.ಬಿ.ಐ. ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಗತಕಾಲಕ್ಕೆ ಸೇರಿದ್ದು ಆಯಿತು. ಅದೇ ಸಾಲಿಗೆ ಅನಧಿಕೃತವಾಗಿ 10 ರೂಪಾಯಿ ಮುಖಬೆಲೆಯ ನಾಣ್ಯ ಸೇರಿರುವುದು ಆಶ್ಚರ್ಯವೇ ಸರಿ. ಆರ್.ಬಿ.ಐ. ಹಾಗೂ ಕೇಂದ್ರ ಸರ್ಕಾರದ ನಿರ್ದೇಶನವೇ ಇಲ್ಲದೆ, ಕೆಲವು ಸಮೂಹ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಅಪಪ್ರಚಾರ ಮಾಡಲಾಗಿರುವ ಕಾರಣ ನಾಣ್ಯಗಳು ನಗಣ್ಯವಾಗಿರುವಂತೆ ಕಾಣಿಸುತ್ತಿದೆ.

ಆರ್.ಬಿ.ಐ. ನಿರ್ದೇಶನವಿಲ್ಲದಿದ್ದರೂ ಕೆಲವು ಬ್ಯಾಂಕ್‌ಗಳು ಈ ನಾಣ್ಯ ಸ್ವೀಕರಿಸಲು ನಿರಾಕರಿಸುತ್ತಿವೆ. ಈ ಧೋರಣೆ ಸರಿಯಲ್ಲ. ಹವ್ಯಾಸವಾಗಿ ಅಥವಾ ಕಷ್ಟ ಕಾಲಕ್ಕೆ ಸಹಾಯವಾಗಲೆಂದು ಶೇಖರಿಸಿಟ್ಟಿರುವ ಹಣವನ್ನು ಬ್ಯಾಂಕ್‌ಗಳು, ಕಿರಾಣಿ ಅಂಗಡಿಗಳು, ತರಕಾರಿ ಮಾರುವವರು, ಬೇಕರಿಯವರು ಸ್ವೀಕರಿಸುತ್ತಿಲ್ಲ. ಇದರಿಂದ ತೊಂದರೆ ಉಂಟಾಗಿದೆ. ಇದನ್ನು ನಿವಾರಿಸಬೇಕು. ಕಡ್ಡಾಯವಾಗಿ ಸ್ವೀಕರಿಸುವಂತೆ ಸರ್ಕಾರ ಸಂಬಂಧಪಟ್ಟವರಿಗೆ ಸೂಚಿಸಬೇಕು.

–ಎಂ. ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT