ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲೇ ಮಾಡಬಹುದಿತ್ತು

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಖಾಸಗಿ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆ ಅಂತೂ ಇಂತೂ ಮುಕ್ತಾಯವಾಗಿ ಜನರು ನಿಟ್ಟುಸಿರುಬಿಡುವಂತಾಗಿದೆ.

ಕೆಪಿಎಂಇ ಕಾಯ್ದೆ ತಿದ್ದುಪಡಿ ಮಸೂದೆ ಬಗ್ಗೆ ವೈದ್ಯರಿಗೆ ಇದ್ದ ಅನುಮಾನ, ಆಕ್ಷೇಪಗಳನ್ನು ಮೊದಲೇ ಪರಿಗಣಿಸಬೇಕಾಗಿತ್ತು. ಐದಾರು ದಿನಗಳ ಕಾಲ ಪ್ರತಿಭಟನೆಯನ್ನು ನಡೆಸಲು, ಹತ್ತಾರು ಜನರ ಸಾವಿಗೆ ಕಾರಣವಾಗಲು ಅವಕಾಶಕೊಡಬಾರದಿತ್ತು. ಅನಾಹುತ ಆಗುವ ಮೊದಲೇ ಈಗಿರುವಂತೆ ತಿದ್ದುಪಡಿ ಮಾಡಬಹುದಿತ್ತು.

ಹೊಸ ಕಾಯ್ದೆ ಜಾರಿಗೆ ಬರಲಿ, ಬಾರದಿರಲಿ, ಸರ್ಕಾರ ಈಗಾಗಲೇ ವೈದ್ಯರು ಮತ್ತು ರೋಗಿಗಳ ಮಧ್ಯೆ ಹೆಚ್ಚಿನ ಸಂದರ್ಭಗಳಲ್ಲಿ ಇರುತ್ತಿದ್ದ ಬಾಂಧವ್ಯವನ್ನು ಕೆಡಿಸುವಲ್ಲಿ ಯಶಸ್ವಿಯಾಗಿದೆ. ರೋಗಿಗಳೊಡನೆ, ಅವರ ಸಂಬಂಧಿಗಳೊಡನೆ ಹೇಗೆ ಮಾತಾಡಬೇಕು, ಮಾತಾಡಬಾರದು ಎಂದು ವೈದ್ಯರು ಯೋಚಿಸುವಂತಾಗಿದೆ.

–ಡಾ. ಕೆ.ಕೆ. ಜಯಚಂದ್ರಗುಪ್ತ, ಹಾಸನ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT