ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಡಿಯೊದಲ್ಲಿರುವುದು ನಿತ್ಯಾನಂದ ಸ್ವಾಮಿ’

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾ­ನಂದ ಸ್ವಾಮಿ ಲೈಂಗಿಕ ಹಗರಣದ ಸಂಬಂಧ ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ಅಧಿಕಾರಿಗಳು ಸಿದ್ಧಪಡಿಸಿದ್ದ ವರದಿಯ ಅಂಶಗಳು ಈಗ ಬಹಿರಂಗವಾಗಿವೆ.

‘ವಿಡಿಯೊದಲ್ಲಿ ಯುವತಿ ಹಾಗೂ ವ್ಯಕ್ತಿಯೊಬ್ಬರು ರಾಸಲೀಲೆಯಲ್ಲಿ ತೊಡಗಿದ್ದು ದಾಖಲಾಗಿದೆ. ಅದನ್ನು ಪರೀಕ್ಷಿಸಲಾಗಿ, ರಾಸಲೀಲೆಯಲ್ಲಿ ತೊಡಗಿದ್ದ ಆ ವ್ಯಕ್ತಿಯೇ ನಿತ್ಯಾನಂದ ಸ್ವಾಮಿ ಎಂಬುದು ಖಾತ್ರಿಯಾಗಿದೆ. ವಿಡಿಯೊ ತಿರುಚಿಲ್ಲ’ ಎಂದು ವರದಿಯಲ್ಲಿ ಬರೆಯಲಾಗಿದೆ.

2010ರಲ್ಲಿ ಬಹಿರಂಗವಾದ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು, ಅದೇ ವರ್ಷದ ಮೇ 12ರಂದು ರಾಸಲೀಲೆಯ ಅಸಲಿ ಹಾಗೂ ನಿತ್ಯಾನಂದ ಅವರ ಹಲವು ವಿಡಿಯೊಗಳನ್ನು ಎರಡು ಕವರ್‌ಗಳಲ್ಲಿ ದೆಹಲಿಯ ಎಫ್‌ಎಸ್‌ಎಲ್‌ ಅಧಿಕಾರಿಗಳಿಗೆ ಕಳುಹಿಸಿದ್ದರು. ಆ ವಿಡಿಯೊಗಳ ಪರೀಕ್ಷೆಯ ವರದಿಯನ್ನು ಎಫ್‌ಎಸ್ಎಲ್‌ ಸಹಾಯಕ ನಿರ್ದೇಶಕ ಸಿ.ಪಿ.ಸಿಂಗ್‌, 2010ರ ಜೂನ್‌ 2ರಂದು ಅಂದಿನ ಸಿಐಡಿ ಡಿಐಜಿ ಚರಣ್‌ ರೆಡ್ಡಿ ಅವರಿಗೆ ಕಳುಹಿಸಿದ್ದರು. ಈಗ ಆ ವರದಿಯ ಅಂಶಗಳೇ ಬಹಿರಂಗವಾಗಿವೆ.

‘ಎರಡು ಪ್ರತ್ಯೇಕ ಕವರ್‌ಗಳಲ್ಲಿ ಡಿ.ವಿ.ಡಿ ಹಾಗೂ ಮೆಮೊರಿ ಕಾರ್ಡ್‌ ಇದ್ದವು. ಅವುಗಳಲ್ಲಿ 283 ವಿಡಿಯೊಗಳ ಸಂಗ್ರಹವಿತ್ತು. ಎಲ್ಲ ವಿಡಿಯೊಗಳನ್ನು ಹೊಂದಾಣಿಕೆ ಮಾಡಿ ನೋಡಿ ವರದಿ ಸಿದ್ದಪಡಿಸಿದ್ದೇವೆ.  ಜತೆಗೆ ಆ ಕಾರ್ಡ್‌ನಲ್ಲಿದ್ದ 34 ವಿಡಿಯೊ ತುಣುಕುಗಳು ಅಳಿಸಿದ್ದು ಗೊತ್ತಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಲಯದಲ್ಲಿ ವಿಚಾರಣೆ

ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಐಡಿಯ ಅಂದಿನ ಎಸ್ಪಿ ಯೋಗಪ್ಪ, ರಾಮನಗರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಅದರ ವಿಚಾರಣೆ ನಡೆಯುತ್ತಿದೆ. ಈಗ ಬಹಿರಂಗವಾಗಿರುವ ಎಫ್‌ಎಸ್‌ಎಲ್‌ ವರದಿ, ದೋಷಾರೋಪ ಪಟ್ಟಿಯೊಂದಿಗೆ ಲಗತ್ತಿಸಿದ್ದು ಎಂಬುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT