ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ನಲ್ಲಿ ‘ಪದ್ಮಾವತಿ’ ಬಿಡುಗಡೆಗೆ ಬ್ರಿಟಿಷ್‌ ಸೆನ್ಸಾರ್‌ ಮಂಡಳಿ ಸಮ್ಮತಿ

Last Updated 23 ನವೆಂಬರ್ 2017, 7:44 IST
ಅಕ್ಷರ ಗಾತ್ರ

ಲಂಡನ್‌: ಪ್ರತಿಭಟನೆಯ ಕಾರಣದಿಂದ ಭಾರತದಲ್ಲಿ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆ ಮುಂದೂಡಲಾಗಿದೆ. ಆದರೆ, ಬ್ರಿಟಿಷ್‌ ಚಲನಚಿತ್ರ ಸೆನ್ಸಾರ್‌ ಮಂಡಳಿ(British Board of Film Classification –BBFC) ಚಿತ್ರ ಪ್ರಮಾಣೀಕರಿಸಿದೆ.

ಇಂಗ್ಲೆಂಡ್‌ನ ವೀಕ್ಷಕರು ಪದ್ಮಾವತಿ ಚಿತ್ರವನ್ನು ನಿಗದಿಯಂತೆ ಡಿ.1ರಂದು ವೀಕ್ಷಿಸಲು ಅಡ್ಡಿಯಿಲ್ಲ. ಬಿಬಿಎಫ್‌ಸಿ ಯಾವುದೇ ದೃಶ್ಯಗಳನ್ನು ಕತ್ತರಿಸಲು ಸೂಚಿಸದೆ 12ಎ ರೇಟಿಂಗ್‌ ನೀಡಿದೆ. 12ಎ ರೇಟಿಂಗ್‌ ಪಡೆದ ಚಿತ್ರವನ್ನು 12 ವರ್ಷ ಒಳಗಿನ ಮಕ್ಕಳು ಒಂಟಿಯಾಗಿ ವೀಕ್ಷಿಸಲು ಅವಕಾಶವಿರುವುದಿಲ್ಲ.

ಬ್ರಿಟಿಷ್‌ ಸೆನ್ಸಾರ್‌ ಮಂಡಳಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ‘ಪದ್ಮಾವತಿ(12ಎ), ಅತಿರೇಕವಿಲ್ಲದ ಹಿಂಸೆ...’ ಎನ್ನುವ ಅರ್ಥದಲ್ಲಿ ಪ್ರಕಟಿಸಿದ್ದು, ದೃಶ್ಯಗಳಿಗೆ ಕಟ್‌ ಸೂಚಿಸಿಲ್ಲ ಎಂದಿದೆ.

ರಾಣಿ ಪದ್ಮಿನಿ ಮತ್ತು ಅಲ್ಲಾವುದ್ದೀನ್‌ ಖಿಲ್ಜಿ ನಡುವೆ ಪ್ರಣಯವಿದ್ದಂತೆ ಕನಸಿನ ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂಬ ವದಂತಿಗಳಿಂದಾಗಿ ರಜಪೂತ ಸಮುದಾಯ ಸೇರಿ ಹಲವು ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಇಂಥ ದೃಶ್ಯಗಳು ಚಿತ್ರದಲ್ಲಿ ಇಲ್ಲ ಎಂದು ನಿರ್ದೇಶಕ ಬನ್ಸಾಲಿ ಸ್ಪಷ್ಟಪಡಿಸಿದ್ದರು.

16ನೇ ಶತಮಾನದ ’ಪದ್ಮಾವತ್‌’ ಪದ್ಯದಲ್ಲಿ ವರ್ಣನೆಗೆ ಸಿಕ್ಕಿರುವ ರಾಣಿ ಪದ್ಮಿನಿ ನಿಜಕ್ಕೂ ಇದ್ದಿರುವ ಬಗ್ಗೆ ಇತಿಹಾಸಕಾರರಲ್ಲಿ ದ್ವಂದ್ವವಿದೆ.

ಈಗಾಗಲೇ ಗುಜರಾತ್‌ ಹಾಗೂ ಮಧ್ಯ ಪ್ರದೇಶದಲ್ಲಿ ಪದ್ಮಾವತಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ದೇಶದ ಸೆನ್ಸಾರ್‌ ಮಂಡಳಿ ಇನ್ನೂ ಚಿತ್ರವನ್ನು ಪ್ರಮಾಣೀಕರಿಸಿಲ್ಲದ ಕಾರಣ ಚಿತ್ರ ಬಿಡುಗಡೆಯ ದಿನವನ್ನು ಚಿತ್ರ ನಿರ್ಮಾಣ ಸಂಸ್ಥೆ ವಯಕಾಮ್‌18 ಮೋಷನ್‌ ಪಿಕ್ಚರ್ಸ್‌ ನಿಗದಿಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT