ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ತಂಡಕ್ಕೆ ಸಮಗ್ರ ಪ್ರಶಸ್ತಿ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಉಜಿರೆ: ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ನಡೆದ ಯೋಗ ಸ್ಪೋರ್ಟ್‌ ಕಪ್ ಪಂದ್ಯಾಟದಲ್ಲಿ ಪಶ್ಚಿಮ ಬಂಗಾಳ ಸಮಗ್ರ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ಪಶ್ಚಿಮ ಬಂಗಾಳ 122 ಅಂಕ ಪಡೆದಿದ್ದು, ಜಾರ್ಖಂಡ್‌ 79 ಅಂಕಗಳೊಂದಿಗೆ ಪ್ರಥಮ ರನ್ನರ್‌ ಅಪ್‌ ಹಾಗೂ ಕರ್ನಾಟಕ 59 ಅಂಕಗಳೊಂದಿಗೆ ದ್ವಿತೀಯ ರನ್ನರ್‌ ಅಪ್ ಆಗಿ ಹೊರಹೊಮ್ಮಿದೆ.

ಫಲಿತಾಂಶ: ಯೋಗಾಸನ ಸ್ಪರ್ಧೆಯಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ (8 ರಿಂದ 11 ವರ್ಷ) ಜಾರ್ಖಂಡ್‌ನ ಸುಶ್ಮಿತ್ ದಾಸ್ ಗುಪ್ತ ಹಾಗೂ ಮಹಿಳೆಯರ ವಿಭಾಗದಲ್ಲಿ ಪಶ್ಚಿಮ ಬಂಗಾಳದ ತನಿಶಾ ದಾಸ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಜೂನಿಯರ್ ವಿಭಾಗ: (11–17 ವರ್ಷ) ಪುರುಷರ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಸೋವೆಲ್ ಅಹ್ಮದ್ ಗಾಝಿ ಹಾಗೂ ಮಹಿಳೆಯರ ವಿಭಾಗದಲ್ಲಿ ಕೇರಳದ ಶ್ರೇಯಾ ಆರ್. ನಾಯರ್ ಮೊದಲಿಗರಾಗಿದ್ದಾರೆ.

ಹಿರಿಯರ ವಿಭಾಗ 'ಎ': (17 ರಿಂದ 25) ಪುರುಷರ ವಿಭಾಗದಲ್ಲಿ ಹರಿಯಾಣದ ಜೈ ಪ್ರಕಾಶ್, ಮಹಿಳೆಯರಲ್ಲಿ ಪಶ್ಚಿಮ ಬಂಗಾಳದ ಅನುಷಾ ಮಜುಂದಾರ್‌. ಹಿರಿಯರ ವಿಭಾಗ 'ಬಿ' ಪುರುಷರಲ್ಲಿ ಪಶ್ಚಿಮ ಬಂಗಾಳದ ಮಾನಶ್ ಮುಖರ್ಜಿ ಹಾಗೂ ಮಹಿಳೆಯುರ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಮಧುಬಂತಿ ದೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಆರ್ಟಿಸ್ಟಿಕ್‌ ಸಿಂಗಲ್: ಜೂನಿಯರ್ ವಿಭಾಗದ ಪುರುಷರಲ್ಲಿ ಪ. ಬಂಗಾಳದ ರೋಹನ್ ಕರ್ಮಾಕರ್‌ ಮಹಿಳೆಯರಲ್ಲಿ ಜಾರ್ಖಂಡ್‌ನ ಸೃಷ್ಟಿ ರಾಯ್, ಹಿರಿಯರ ವಿಭಾಗದಲ್ಲಿ ಹರಿಯಾಣದ ರೂಪೇಶ್ ಕುಮಾರ್, ಮಹಿಳೆಯರ ವಿಭಾಗದಲ್ಲಿ ಅಸ್ಸಾಂನ ಪಂಚಿ ಬೋರಾ ಮೊದಲಿಗರಾಗಿದ್ದಾರೆ.

ಆರ್ಟಿಸ್ಟಿಕ್‌ ಜೋಡಿ: ಜೂನಿಯರ್ ವಿಭಾಗದಲ್ಲಿ ಜಾರ್ಖಂಡ್‌ನ ಸೃಷ್ಟಿ ರಾಯ್ ಮತ್ತು ಕೋಮಲ್ ಕುಮಾರಿ, ಹಿರಿಯರ ವಿಭಾಗದಲ್ಲಿ: ಪಶ್ಚಿಮ ಬಂಗಾಳದ ರಾಖಿ ಚಟರ್ಜಿ ಮತ್ತು ಅನುಷಾ ಮುಜುಮ್ದಾರ್ ಮೊದಲಿಗರಾಗಿದ್ದಾರೆ.

ರಿದಿಮಿಕ್: ಜೂನಿಯರ್‌ ವಿಭಾಗದಲ್ಲಿ ಜಾರ್ಖಂಡ್‌ನ ಸೃಷ್ಟಿ ರಾಯ್ ಮತ್ತು ಕೋಮಲ್ ಕುಮಾರಿ, ಸೀನಿಯರ್ ವಿಭಾಗದಲ್ಲಿ ಪಶ್ಚಿಮ ಬಂಗಾಳದ ರಾಖಿ ಚಟರ್ಜಿ ಮತ್ತು ಅನುಷಾ ಮುಜುಮ್ದಾರ್, ಫ್ರೀ ಫ್ಲೋದಲ್ಲಿ ಜಾರ್ಖಂಡ್‌ನ ಸೃಷ್ಟಿ ರಾಯ್, ಕೋಮಲ್ ಕುಮಾರಿ, ತಹಸೀನ್ ಅಹ್ಮದ್, ಹರ್ಷಿತಾ, ಅಲೀಸ್ ತಿಕರ್‌ ಜಯ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT