ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತ ಪದ ಬಳಸದ ಬಸವಣ್ಣ’

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹಾನುಭಾವಿಬಸವಣ್ಣನವರು ತಮ್ಮ ಯಾವ ವಚನಗಳಲ್ಲಿಯೂ ಲಿಂಗಾಯತ ಎಂಬ ಪದವನ್ನು ಬಳಸಿಲ್ಲ. ಇಂಥದರಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಲು ಹೇಗೆ ಸಾಧ್ಯ’ ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು.

ಇಲ್ಲಿನ ಹಳೇ ಹುಬ್ಬಳ್ಳಿಯ ಹನ್ನೆರಡು ಮಠದಲ್ಲಿ ಗುರುವಾರ ಸಿದ್ಧವೀರ ಸ್ವಾಮಿಗಳ ಶಿಲಾಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು. ‘ದೇಹದ ಮೇಲೆ ಲಿಂಗ ಧರಿಸಿದವನನ್ನು ವೀರಶೈವ ಎನ್ನುತ್ತಾರೆಯೇ ಹೊರತು ಲಿಂಗಾಯತ ಎನ್ನುವುದಿಲ್ಲ. ಯಾರು ಇಷ್ಟಲಿಂಗ ಧರಿಸುತ್ತಾರೋ ಅವರು ವೀರಶೈವರು. ಕಾಲ ಕ್ರಮೇಣ ಸರ್ಕಾರಿ ದಾಖಲಾತಿಗಳಲ್ಲಿ ವೀರಶೈವ ಲಿಂಗಾಯತ ಎಂಬ ಪದ ಬಳಕೆಗೆ ಬಂದಿದೆ ಅಷ್ಟೇ. ವೀರಶೈವರೇ ಲಿಂಗಾಯತರು. ಲಿಂಗಾಯತರೇ ವೀರಶೈವರು’ ಎಂದು ಪ್ರತಿಪಾದಿಸಿದರು.

‘ವೀರಶೈವ– ಲಿಂಗಾಯತ ಭೇದ ಭಾವ ನಮ್ಮಲ್ಲಿ ಸುಳಿಯದಂತೆ ಎಲ್ಲವೂ ಏಕ ಭಾವದಿಂದ ಹೋಗುತ್ತಿದ್ದೇವೆ. ಈ ಪರಂಪರೆ ಮುಂದುವರಿಯಬೇಕು’ ಎಂದು ಸ್ವಾಮೀಜಿ ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT