ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡನ ಚಿಕಿತ್ಸೆಗೆ ಮಗು ಮಾರಾಟ

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೇಲೂರು: ಗಂಡನ ಚಿಕಿತ್ಸೆಯ ವೆಚ್ಚ ಭರಿಸುವುದಕ್ಕಾಗಿ ಮಹಿಳೆಯೊಬ್ಬರು ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ್ದು, ಗುರುವಾರ ಜಿಲ್ಲಾ ಮಕ್ಕಳ ಸಂರಕ್ಷಣಾ ಸಮಿತಿ ವಶಕ್ಕೆ ಪಡೆದಿದೆ.

ಪತಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಹಾಸನದ ಮಹಿಳೆಯೊಬ್ಬರು ತನ್ನ ಮೂರು ತಿಂಗಳ ಗಂಡು ಮಗುವನ್ನು ವಾರದ ಹಿಂದೆ ₹ 22 ಸಾವಿರಕ್ಕೆ ಮಾರಾಟ ಮಾಡಿದ್ದರು. ಹಾಸನದ ರಂಗೋಲಿಹಳ್ಳದ ಗಾಯತ್ರಿ ನಾಗರಾಜ್‌ ಖರೀದಿಸಿದ್ದರು. ಮಾರಾಟ ಮಾಡಿದ ಮಹಿಳೆಯ ವಿವರ ತಿಳಿದು ಬಂದಿಲ್ಲ.

ಗಾಯತ್ರಿ ಆ ಮಗುವನ್ನು ಬೇಲೂರಿನ ಹೊಸನಗರ ಬಡಾವಣೆಯ ಮಂಜುಳಾ ದೇವರಾಜ್‌ ಅವರಿಗೆ ಮರು ಮಾರಾಟ ಮಾಡಿದರು. ನಂತರ ಈ ವಿಚಾರವನ್ನು ನಿವೃತ್ತ ನರ್ಸ್‌ ಶಾಂತಮ್ಮ ಅವರಿಗೆ ಗಾಯತ್ರಿ ತಿಳಿಸಿದ್ದು, ಮಗು ಮಾರಾಟದ ವಿಚಾರ ಹೊರಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಸಂರಕ್ಷಣಾ ಇಲಾಖೆ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಂಜುಳಾ ಮನೆಗೆ ತೆರಳಿ ಮಗುವನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT