ಅಫಜಲಪುರ

ರಸ್ತೆ ಮೇಲೆ ಚರಂಡಿ ನೀರು: ಜನರ ಪರದಾಟ

ಕ್ರಿಯಾ ಯೋಜನೆ ಪ್ರಕಾರ ಚರಂಡಿ ನಿರ್ಮಾಣ ಮಾಡದಿರುವುದರಿಂದ ಚರಂಡಿ ನೀರು ಮುಖ್ಯರಸ್ತೆ ಮೇಲೆ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ.

ಅಫಜಲಪುರ ಪಟ್ಟಣದ ಮುಖ್ಯರಸ್ತೆ ಚರಂಡಿ ವ್ಯವಸ್ಥೆಯಿಲ್ಲದೇ ಮಾಲಿನ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ

ಅಫಜಲಪುರ: ಪಟ್ಟಣದಲ್ಲಿ ಕ್ರಿಯಾ ಯೋಜನೆ ಪ್ರಕಾರ ಚರಂಡಿ ನಿರ್ಮಾಣ ಮಾಡದಿರುವುದರಿಂದ ಚರಂಡಿ ನೀರು ಮುಖ್ಯರಸ್ತೆ ಮೇಲೆ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ.

ಇದು ಅಂಬೇಡ್ಕರ್ ವೃತ್ತದಿಂದ ಹಳೆಯ ಪಟ್ಟಣ ಪಂಚಾಯಿತಿವರೆಗಿನ ಮುಖ್ಯರಸ್ತೆಯಾಗಿದ್ದು, ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಈ ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. 5 ವರ್ಷಗಳ ಹಿಂದೆ ಈ ರಸ್ತೆಯನ್ನು 2 – 3 ಬಾರಿ ಚರಂಡಿ ನಿರ್ಮಿಸಿ ಡಾಂಬರೀಕರಣ ರಸ್ತೆ ಮಾಡಲಾಗಿದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ ವರ್ಷದಲ್ಲೇ ಎಲ್ಲವೂ ಕಿತ್ತು ಹೋಗಿದೆ. ಜನರು ಪ್ರಮುಖ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

ಈ ಕುರಿತು ಮಾಹಿತಿ ನೀಡಿದ ಪಟ್ಟಣದ ಮುಖಂಡರಾದ ಸಿದ್ದರಾಮಪ್ಪ ಮನ್ಮಿ, ಸದಾಶಿವ ಮೇತ್ರಿ, ಚಂದು ಕರಜಗಿ, ‘ಪುರಸಭೆಯವರು ಸ್ಥಳಕ್ಕೆ ಭೇಟಿ ನೀಡಿ ಚರಂಡಿ ನೀರು ನೇರವಾಗಿ ಮುಂದೆ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಅದೇ ನೀರು ನಳದ ತಗ್ಗುಗಳಲ್ಲಿ ಬಂದು ಸೇರಿಕೊಳ್ಳುತ್ತಿರುವುದರಿಂದ ಅದೇ ನೀರನ್ನು ಕುಡಿಯುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಕಲಬುರ್ಗಿ
ಬಿಸಿಲಿಗೆ ಬತ್ತದ ಉತ್ಸಾಹ

ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಪಿ ಅಭ್ಯರ್ಥಿಗಳು ಅಪಾರ ಬೆಂಬಲಿಗರು, ಕಾರ್ಯಕರ್ತರ ಜಯ ಘೋಷಗಳ ಮಧ್ಯೆ ಅಂತಿಮ ದಿನವಾದ ಮಂಗಳವಾರ...

25 Apr, 2018

ಕಲಬುರ್ಗಿ
ಇನ್ನೇನಿದ್ದರೂ ‘ಹಿಂದೆ ಸರಿಸುವ’ ಆಟ

ಕಲಬುರ್ಗಿಯ ಒಂಬತ್ತು ವಿಧಾನಸಭೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಂಡಿದೆ. ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಏ.25ರಂದು ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್‌ ಪಡೆಯಲು ಏ.27 ಕೊನೆಯ...

25 Apr, 2018
ಸುಪಾರಿಗೆ ನಾನು ಹೆದರಲ್ಲ: ಖರ್ಗೆ

ಕಲ್ಬುರ್ಗಿ
ಸುಪಾರಿಗೆ ನಾನು ಹೆದರಲ್ಲ: ಖರ್ಗೆ

25 Apr, 2018
ಕೀರ್ತಿ ನಗರದಲ್ಲಿ ನೀರಿನ ಕಿರಿಕಿರಿ

ಕಲಬುರ್ಗಿ
ಕೀರ್ತಿ ನಗರದಲ್ಲಿ ನೀರಿನ ಕಿರಿಕಿರಿ

25 Apr, 2018
ಎತ್ತಿನ ಬಂಡಿಯಲ್ಲಿ ಬಂದು ಬಿ.ಆರ್.ಪಾಟೀಲ ನಾಮಪತ್ರ ಸಲ್ಲಿಕೆ

ಆಳಂದ
ಎತ್ತಿನ ಬಂಡಿಯಲ್ಲಿ ಬಂದು ಬಿ.ಆರ್.ಪಾಟೀಲ ನಾಮಪತ್ರ ಸಲ್ಲಿಕೆ

25 Apr, 2018