ಮೈಸೂರು

ವಯಸ್ಸು 14, ಪುಸ್ತಕ 20!

ಯುಕೆಜಿಯಿಂದ ಕನ್ನಡ–ಇಂಗ್ಲಿಷ್‌ ಬರವಣಿಗೆ ಆರಂಭಿಸಿದ ಅಂತಃಕರಣ 20 ಪುಸ್ತಕಗಳ ಲೇಖಕ. ಕಥೆ, ಕವನ, ಕಾದಂಬರಿ, ಕ್ರೀಡಾಬರಹಗಳನ್ನು ಬರೆದಿದ್ದು, ಸ್ಥಳೀಯ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆಯುತ್ತಿದ್ದಾನೆ.

ಅಂತಃಕರಣ

ಮೈಸೂರು: ಪುಸ್ತಕ ಮೇಳದಲ್ಲಿ ಕಿರಿಯ ಲೇಖಕನೊಬ್ಬ ಸಹೃದಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದಾನೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹರಳೀಮಠದ ಅಂತಃಕರಣ ಈ 14 ವರ್ಷದ ಪೋರ.

ಯುಕೆಜಿಯಿಂದ ಕನ್ನಡ–ಇಂಗ್ಲಿಷ್‌ ಬರವಣಿಗೆ ಆರಂಭಿಸಿದ ಅಂತಃಕರಣ 20 ಪುಸ್ತಕಗಳ ಲೇಖಕ. ಕಥೆ, ಕವನ, ಕಾದಂಬರಿ, ಕ್ರೀಡಾಬರಹಗಳನ್ನು ಬರೆದಿದ್ದು, ಸ್ಥಳೀಯ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆಯುತ್ತಿದ್ದಾನೆ. ಆನ್‌ಲೈನ್‌ ಸುದ್ದಿವಾಹಿನಿಗಳಲ್ಲೂ ಬರಹಗಳು ಪ್ರಕಟವಾಗಿದೆ. ‘ನಾನು ಕ್ರೀಡಾ ವರದಿಗಾರನಾಗಬೇಕು’ ಎಂಬ ಆಸೆ ತೋಡಿಕೊಂಡ ಅಂತಃಕರಣ ನ. 25ರಂದು ’ಮಕ್ಕಳ ಸಾಹಿತ್ಯ ಗೋಷ್ಠಿ’ಯಲ್ಲಿ ಮಾತನಾಡಲಿದ್ದಾನೆ.

Comments