ಮೈಸೂರು

ಮೊದಲು ಭೂರಿಭೋಜನ; ಕೊನೆಗೆ ಅನ್ನ–ಸಾರು!

ಸಾರ್ವಜನಿಕರಿಗಾಗಿ 73 ಕೌಂಟರ್‌ ತೆರೆಯಲಾಗಿತ್ತು. ಮೊದಲು ಬಂದ ಎಲ್ಲರೂ ಬಿಸಿಬಿಸಿ ಕಜ್ಜಾಯ, ಚಪಾತಿ, ಪೂರಿ–ಸಾಗು, ಅನ್ನ–ಸಾರು, ಬಾತು, ಮೊಸರನ್ನವನ್ನು ನಾಲಿಗೆ ಚಪ್ಪರಿಸಿ ಸವಿದರು.

ಮೈಸೂರು: ಸಾಹಿತ್ಯ ಸಮ್ಮೇಳನದ ಊಟದ ವ್ಯವಸ್ಥೆಯಲ್ಲಿ ಮೊದಲ ದಿನವೇ ಅವ್ಯವಸ್ಥೆ ಕಾಡಿತು. ಸಾರ್ವಜನಿಕರಿಗಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಹಾಕಿದ ಕೌಂಟರ್‌ಗಳಲ್ಲಿ ಅಡುಗೆ ಬೇಗ ಖಾಲಿಯಾದ್ದರಿಂದ ಅನ್ನ ಮತ್ತು ಸಾರನ್ನು ಮಾತ್ರ ಬಡಿಸಲಾಯಿತು.

ಸಮ್ಮೇಳನಕ್ಕೆ ಬಂದವರು ಬೆಳಿಗ್ಗೆ 11.30ರ ಹೊತ್ತಿಗೇ ಊಟದ ಕೌಂಟರ್‌ಗಳತ್ತ ಧಾವಿಸಿದರು. ಮಧ್ಯಾಹ್ನ 2ರವರೆಗೂ ಜನ ಕಡಿಮೆ ಇದ್ದುದರಿಂದ ಅಚ್ಚುಕಟ್ಟಾಗಿ ಊಟ ಬಡಿಸಲಾಯಿತು. ಪುರುಷರು, ಮಹಿಳೆಯರು ಹಾಗೂ ಅಂಗವಿಕಲರಿಗಾಗಿ ಪ್ರತ್ಯೇಕ ವ್ಯವಸ್ಥೆಯಿತ್ತು.

ಸಾರ್ವಜನಿಕರಿಗಾಗಿ 73 ಕೌಂಟರ್‌ ತೆರೆಯಲಾಗಿತ್ತು. ಮೊದಲು ಬಂದ ಎಲ್ಲರೂ ಬಿಸಿಬಿಸಿ ಕಜ್ಜಾಯ, ಚಪಾತಿ, ಪೂರಿ–ಸಾಗು, ಅನ್ನ–ಸಾರು, ಬಾತು, ಮೊಸರನ್ನವನ್ನು ನಾಲಿಗೆ ಚಪ್ಪರಿಸಿ ಸವಿದರು.

ವಿಶಾಲ ಮೈದಾನದಲ್ಲಿ ಗಟ್ಟಿಮುಟ್ಟಾದ ಪೆಂಡಾಲ್‌ ಹಾಕಿ ನೆರಳು ಮಾಡಲಾಗಿತ್ತು. ದೂಳು ಏಳದಂತೆ ನೆಲಹಾಸು ಹಾಕಲಾಗಿತ್ತು. ಊಟದ ವಿವರ, ಕಾರ್ಯಕ್ರಮದ ವಿವರಗಳನ್ನೂ ಮೈಕಿನ ಮೂಲಕ ನಿರಂತರವಾಗಿ ನೀಡಲಾಯಿತು. ಮಧ್ಯೆಮಧ್ಯೆ ಕೇಳಿಬಂದ ಕನ್ನಡ ಭಾವಗೀತೆಗಳು ಭೋಜನಕ್ಕೆ ಇನ್ನಷ್ಟು ರುಚಿ ನೀಡಿದವು.

ಉದ್ಘಾಟನಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅಪಾರ ಜನ ಮೈದಾನಕ್ಕೆ ಬಂದರು. ಇದರಿಂದಾಗಿ ಪೂರಿ, ಕಜ್ಜಾಯ, ಮೊಸರನ್ನ ಮಧ್ಯಾಹ್ನ 2.30ರ ನಂತರ ಖಾಲಿಯಾಯಿತು. ಕೊನೆಕೊನೆಗೆ ಅನ್ನ–ಸಾಂಬಾರು ಅಷ್ಟೇ ಉಳಿಯಿತು.

ಹಸಿದವರ ಸಾಲು ಕರಗದಿದ್ದರೂ ಕೌಂಟರ್‌ಗಳಲ್ಲಿ ಅಡುಗೆ ಇರಲಿಲ್ಲ. ಹೀಗಾಗಿ, ಬೆಳಗಿನ ಉಪಾಹಾರಕ್ಕೆ ಮಾಡಿದ್ದ ಸಿಹಿ ಪೊಂಗಲ್‌ ಹಾಗೂ ಖಾರ ಪೊಂಗಲ್‌ ಬಡಿಸಲಾಯಿತು. ಗಣ್ಯರ ಕೌಂಟರ್‌ನತ್ತ ದೌಡು: ಸಾರ್ವಜನಿಕರ ಕೌಂಟರುಗಳಲ್ಲಿ ಅಡುಗೆ ಖಾಲಿಯಾಗಿದ್ದರಿಂದ ಗಣ್ಯರು, ಪತ್ರಕರ್ತರು ಹಾಗೂ ಸಮ್ಮೇಳನ ಪ್ರತಿನಿಧಿಗಳ ಕೌಂಟರುಗಳತ್ತ ಜನರ ಗುಂಪುಗಳು ಧಾವಿಸಿದವು. ಅಲ್ಲಿ ಕೂಡ ನೂಕುನುಗ್ಗಲು ಆರಂಭವಾಯಿತು. ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕೆ ನಿಂತರು.

ಬೆಳಿಗ್ಗೆ ಉಪಾಹಾರಕ್ಕೆ ಸಿಹಿ ಪೊಂಗಲ್‌ ಹಾಗೂ ಖಾರ ಪೊಂಗಲ್‌. ಮಧ್ಯಾಹ್ನದ ಊಟಕ್ಕೆ ಕಜ್ಜಾಯ, ಪೂರಿ–ಸಾಗು, ಬಾತ್‌–ಮೊಸರುಬಜ್ಜಿ, ಅನ್ನ–ಸಾರು, ಮೊಸರನ್ನ–ಉಪ್ಪಿನಕಾಯಿ ಶುಕ್ರವಾರದ ಮೆನುವಿನಲ್ಲಿದ್ದವು. ರಾತ್ರಿ ಹೋಳಿಗೆ ಊಟದ ವಿಶೇಷವಿತ್ತು.

* * 

ನಿರೀಕ್ಷೆಗಿಂತ ಎರಡು ಪಟ್ಟು ಜನ ಉಟದ ಪೆಂಡಾಲಿನಲ್ಲಿದ್ದರು. ಯಾರೊಬ್ಬರೂ ಹಸಿದು<br/>ಕೊಂಡಿರದಂತೆ ನೋಡಿಕೊಂಡಿದ್ದೇವೆ ಕಾ.ರಾಮೇಶ್ವರಪ್ಪ,
ಹಿರಿಯ ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

Comments
ಈ ವಿಭಾಗದಿಂದ ಇನ್ನಷ್ಟು
ವರುಣಾದಲ್ಲಿ ಸಿ.ಎಂ ಮಿಂಚಿನ ಸಂಚಾರ

ಮೈಸೂರು
ವರುಣಾದಲ್ಲಿ ಸಿ.ಎಂ ಮಿಂಚಿನ ಸಂಚಾರ

18 Apr, 2018

ಮೈಸೂರು
ಪುತ್ರ ಯತೀಂದ್ರ ಪರ ಸಿ.ಎಂ. ಮತಯಾಚನೆ

‘ನಾನು ವರುಣಾ ಕ್ಷೇತ್ರದ ಮಣ್ಣಿನ ಮಗ. ಇವನು ನನ್ನ ಮಗ. ನನ್ನನ್ನು ಎರಡು ಸಲ ಭಾರಿ ಅಂತರದಿಂದ ಗೆಲ್ಲಿಸಿರುವ ನೀವು, ಇವನನ್ನು ಅದಕ್ಕಿಂತಲೂ ದೊಡ್ಡ...

18 Apr, 2018

ಮೈಸೂರು
ಸಿ.ಎಂ ನಿವಾಸದ ಎದುರು ಬೀಡುಬಿಟ್ಟ ಬೆಂಬಲಿಗರು

ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿರುವ ಸಿರಗುಪ್ಪ ಶಾಸಕ ಬಿ.ಎಂ.ನಾಗರಾಜು ಹಾಗೂ ಹಾನಗಲ್‌ ಶಾಸಕ ಮನೋಹರ ತಹಶೀಲ್ದಾರ್ ಅವರ ನೂರಾರು ಬೆಂಬಲಿಗರು ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ...

18 Apr, 2018

ಮೈಸೂರು
ಸಿ.ಎಂ, ಎಚ್‌ಡಿಕೆ ಭರದ ಪ್ರಚಾರ

ವಿಧಾನಸಭಾ ಚುನಾವಣೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಭರ್ಜರಿ ಪ್ರಚಾರ...

17 Apr, 2018

ಮೈಸೂರು
ಪ್ರಸಾದ್‌ ಅಳಿಯ ಹರ್ಷವರ್ಧನ್‌ಗೆ ಟಿಕೆಟ್‌

ಮೈಸೂರು ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಇನ್ನುಳಿದ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ.

17 Apr, 2018