ಮೈಸೂರು

ಸರ್ವಾಧಿಕಾರದ ರಾಷ್ಟ್ರೀಯ ಶಿಕ್ಷಣ ಬೇಡ

‘ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವ ನೆಪದಲ್ಲಿ ದೇಶದ ಚರಿತ್ರೆಯನ್ನು ಮಾತ್ರ ಪಠ್ಯದಲ್ಲಿ ಸೇರಿಸಿ ರಾಜ್ಯದ ಚರಿತ್ರೆಯನ್ನು ಗೌಣ ಮಾಡಬಾರದು. ಇದರಿಂದ ರಾಜ್ಯದ ಅಸ್ತಿತ್ವವೇ ನಾಶವಾಗುತ್ತದೆ‘

ಪ್ರೊ.ಎಸ್‌.ಜಿ.ಸಿದ್ದರಾಮಯ್ಯ

ಮೈಸೂರು: ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಾಗ ಸರ್ವಾಧಿಕಾರದ ಛಾಯೆ ಬಾರದ ಹಾಗೆ ನೋಡಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಸಲಹೆ ನೀಡಿದರು.

‘ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವ ನೆಪದಲ್ಲಿ ದೇಶದ ಚರಿತ್ರೆಯನ್ನು ಮಾತ್ರ ಪಠ್ಯದಲ್ಲಿ ಸೇರಿಸಿ ರಾಜ್ಯದ ಚರಿತ್ರೆಯನ್ನು ಗೌಣ ಮಾಡಬಾರದು. ಇದರಿಂದ ರಾಜ್ಯದ ಅಸ್ತಿತ್ವವೇ ನಾಶವಾಗುತ್ತದೆ‘ ಎಂದವರು ‘ಶಿಕ್ಷಣ– ವರ್ತಮಾನದ ಸವಾಲುಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಾಹಿತಿ ದೇವನೂರ ಮಹದೇವ ಸೇರಿದಂತೆ ಅನೇಕರು ಶಿಕ್ಷಣದ ರಾಷ್ಟ್ರೀಕರಣವನ್ನು ಬೆಂಬಲಿಸುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ. ಆದರೆ, ಇದರಲ್ಲಿ ರಾಜ್ಯಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕು. ರಾಷ್ಟ್ರೀಕರಣಗೊಂಡ ಕೂಡಲೇ ರಾಷ್ಟ್ರೀಯತೆಯನ್ನು ಹೇರುವ ಪ್ರಯತ್ನ ನಡೆಯುತ್ತದೆ. ಪಠ್ಯರಚನೆ ಆಗುವಾಗ ಪ್ರಾಥಮಿಕ ಶಿಕ್ಷಣದಿಂದ, ಉನ್ನತ ಶಿಕ್ಷಣದವರೆಗೂ ಜಾಗರೂಕವಾಗಿರಬೇಕು’ ಎಂದು ಹೇಳಿದರು.

‘ಶಿಕ್ಷಣ ಈಗ ಉಳ್ಳವರು ಹಾಗೂ ಬಡವರ ಮಧ್ಯೆ ಕವಲಾಗಿ ಒಡೆದಿದೆ. ಬಡವರನ್ನು ಪ್ರತಿನಿಧಿಸುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಯುವಂತೆ ಇಲ್ಲ. ದುರಸ್ತಿ ಆಗಬೇಕಾದ, ಒಡೆದು ಹೊಸದಾಗಿ ಕಟ್ಟಬೇಕಾದ ಶಾಲೆಗಳು ಸಾವಿರಾರು ಸಂಖ್ಯೆಯಲ್ಲಿವೆ. ನಮ್ಮ ಮಕ್ಕಳು ಕುಳಿತು ಕಲಿಯುವ ಶಾಲೆಗಳು ಸುರಕ್ಷಿತವಾಗಿರಬೇಕು; ಮೂಲಸೌಕರ್ಯ ನೀಡಬೇಕು. ಇದನ್ನು ಸರ್ಕಾರ ಜವಾಬ್ದಾರಿಯಿಂದ ಮಾಡಿದಾಗ ಖಾಸಗಿ ಶಾಲೆಗಳು ಮೆರೆಯುವುದು ನಿಲ್ಲುತ್ತದೆ’ ಎಂದರು.

ಈ ಕೆಲಸವಾಗದೇ ಇದ್ದಲ್ಲಿ, 200 ವರ್ಷಗಳ ಹಿಂದೆ ಶಿಕ್ಷಣವು ಕೇವಲ ಒಂದು ವರ್ಗಕ್ಕೆ ಮಾತ್ರ ಮೀಸಲಿದ್ದಂತೆ, ಈಗ ಉಳ್ಳವರಿಗೆ ಮಾತ್ರ ಶಿಕ್ಷಣ ಮೀಸಲಾಗಿಬಿಡುತ್ತದೆ. ಪ್ರಜಾಪ್ರಭುತ್ವವನ್ನು ಗೌರವಿಸುವ ಮನಸುಗಳು ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಖಾಸಗಿ ವಿಶ್ವವಿದ್ಯಾಲಯಗಳು ಕನ್ನಡದ ಅನ್ನ ತಿಂದಿರುವ ಕನಿಷ್ಠ ಕೃತಜ್ಞತೆಯನ್ನೂ ಹೊಂದಿಲ್ಲ. ಕನ್ನಡ ಕಲಿಕೆಯನ್ನು ನಾಲ್ಕು ಸೆಮಿಸ್ಟರ್‌ಗಳಿಂದ ಎರಡಕ್ಕೆ ಇಳಿಸಿವೆ. ಕನ್ನಡ ಉಪನ್ಯಾಸಕರಿಗೆ ವೇತನ ತಾರತಮ್ಯ ಮಾಡುತ್ತಿವೆ ಎಂದು ಖಾರವಾಗಿ ಹೇಳಿದರು.

ಭಾಷಾ ಕಾಯ್ದೆ ಜಾರಿಯಾಗಿಲ್ಲ: ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡದ ಕಡ್ಡಾಯ ಕಲಿಕೆ ಇರಬೇಕು ಎಂಬ ಭಾಷಾ ಕಾಯ್ದೆ ಪರಿಪೂರ್ಣವಾಗಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರವು ಹಿಂದಿಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಒತ್ತಾಯ ಹೇರುತ್ತಿರುವುದು ಇದಕ್ಕೆ ಕಾರಣ, ಎಂದು ಶಿಕ್ಷಣ ಇಲಾಖೆ ಹೇಳಿ ಜಾರಿಕೊಳ್ಳುತ್ತಿದೆ. ಹಿಂದಿಯ ಹೇರಿಕೆ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂಬುದನ್ನು ಗಮನಿಸಬೇಕು ಎಂದು ಎಚ್ಚರಿಸಿದರು.

* * 

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಅವಕಾಶ ಹೆಚ್ಚಬೇಕು. ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬೇಕು.
ಡಾ.ವಿಷ್ಣುಕಾಂತ ಚಟಪಲ್ಲಿ,
ಕನ್ನಡ ಮಾಧ್ಯಮ– ಉದ್ಯೋಗಾವಕಾಶಗಳು ಕುರಿತು ವಿಚಾರ ಮಂಡನೆ

Comments
ಈ ವಿಭಾಗದಿಂದ ಇನ್ನಷ್ಟು
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

ಎಚ್.ಡಿ.ಕೋಟೆ
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

23 Jan, 2018

ಎಚ್.ಡಿ.ಕೋಟೆ
‘ದೂರು ಕೊಡಲು ಬಂದವರನ್ನೇ ಜೈಲಿಗಟ್ಟುವ ಸರ್ಕಾರ’

‘ರಾಜ್ಯದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನಮಾಡಲಾಗುತ್ತಿಲ್ಲ, ಅವರ ಸ್ವಕ್ಷೇತ್ರದಲ್ಲಿಯೇ ಅಮಾನವೀಯ ಘಟನೆಗಳು ನಡೆಯುತ್ತಿವೆ. ಪೊಲೀಸರ ನಿಯಂತ್ರಣವನ್ನು ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಮಾಡುತ್ತಿದ್ದಾರೆ

23 Jan, 2018
ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

ಮೈಸೂರು
ಮಹಾರಾಣಿ ವಾಣಿಜ್ಯ ಕಾಲೇಜು ಉದ್ಘಾಟನೆ ಸಜ್ಜು

23 Jan, 2018

ಮೈಸೂರು
ನೈರುತ್ಯ ರೈಲ್ವೆಗೆ ₹ 37 ಸಾವಿರ ದಂಡ

ಟಿಕೆಟ್ ಇದ್ದರೂ ಉಜ್ಜಯಿನಿಯಿಂದ ಮೈಸೂರಿಗೆ ರೈಲಿನಲ್ಲಿ ನಗರದ ಕುಟುಂಬವೊಂದು ನಿಂತು ಪ್ರಯಾಣ ಮಾಡಬೇಕಾಗಿ ಬಂದ ಕಾರಣ ನೈರುತ್ಯ ರೈಲ್ವೆಗೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ...

22 Jan, 2018
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

ಎಚ್.ಡಿ.ಕೋಟೆ
29 ಕೆರೆಗೆ ನೀರು ತುಂಬಿಸಲು ₹ 79 ಕೋಟಿ; ಸಂಸದ

21 Jan, 2018