ಮೈಸೂರು

ಸಿದ್ಧಲಿಂಗಪುರದಲ್ಲಿ ಜಾತ್ರೆಯ ಸಡಗರ

ದೇವಸ್ಥಾನವನ್ನು ತಳಿರು ತೋರಣ ಗಳಿಂದ ಸಿಂಗರಿಸಲಾಗಿತ್ತು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಭಕ್ತರ ಓಡಾಟಕ್ಕೆ ತೊಂದರೆಯಾಗಲಿಲ್ಲ.

ಮೈಸೂರು ಬಳಿಯ ಸಿದ್ಧಲಿಂಗಪುರದಲ್ಲಿ ಚಂಪಕ ಷಷ್ಠಿ ಪ್ರಯುಕ್ತ ಶುಕ್ರವಾರ ಹುತ್ತಕ್ಕೆ ತನಿ ಎರೆದು ಜನರು ಭಕ್ತಿ ಭಾವ ಮೆರೆದರು

ಮೈಸೂರು: ಚುಮುಚುಮು ಚಳಿಯ ಮಧ್ಯೆ ತೀಡುತ್ತಿದ್ದ ಕುಳಿರ್ಗಾಳಿಯಲ್ಲಿ ಸಣ್ಣಗೆ ನಡುಗುತ್ತಾ ಇಲ್ಲಿನ ಸಿದ್ಧಲಿಂಗ ಪುರದಲ್ಲಿ ಜನಸಂದಣಿ ಸೇರತೊಡಗಿತು. ನಸುಕಿನ ಇಬ್ಬನಿಯ ಮಧ್ಯೆ ಇರುವೆ ಸಾಲಿನಂತೆ ನಿಂತ ಭಕ್ತರು, ಚಂಪಕ ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯಸ್ವಾಮಿ ದೇಗುಲ ದಲ್ಲಿ ತನಿ ಎರೆದು ಭಕ್ತಿಭಾವ ಮೆರೆದರು.

ದೇವಸ್ಥಾನವನ್ನು ತಳಿರು ತೋರಣ ಗಳಿಂದ ಸಿಂಗರಿಸಲಾಗಿತ್ತು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಭಕ್ತರ ಓಡಾಟಕ್ಕೆ ತೊಂದರೆಯಾಗಲಿಲ್ಲ. ದೇವಸ್ಥಾನದ ಸುತ್ತ ಕಂಡು ಬಂದ ಹುತ್ತಗಳ ಸುತ್ತ ನೆರೆದ ಭಕ್ತರು, ತಾವು ತಂದಿದ್ದ ಹಾಲು, ಬೆಣ್ಣೆಯನ್ನು ಹುತ್ತಕ್ಕೆ ಸುರಿದರು. ಬಾಳೆಹಣ್ಣು, ಎಲೆ ಅಡಿಕೆ ಇಟ್ಟು ಗಂಧದಕಡ್ಡಿ, ಕರ್ಪೂರದಾರತಿ ಬೆಳಗಿದರು.

ಕೆಲವರು ತಾವು ತಂದಿದ್ದ ಪ್ರಸಾದ ವನ್ನು ಇತರರಿಗೆ ಹಂಚಿದರು. ನಂತರ, ದೇವಸ್ಥಾನದ ಪ್ರವೇಶಕ್ಕೆ ಸಾಲುಗಟ್ಟಿ ನಿಂತರು. ಹೆದ್ದಾರಿಯ ಒಂದು ಭಾಗವನ್ನು ವ್ಯಾಪಾರಿಗಳು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದರು. ಪೂಜೆಗೆ ಬೇಕಾದ ಪರಿಕರಗಳ ಒಡ್ಡೋಲಗ ಒಂದು ಕಡೆಯಾದರೆ ಮತ್ತೊಂದೆಡೆ ಗೃಹೋಪಯೋಗಿ ಸರಕುಗಳ ಮಾರಾಟ ನಡೆದಿತ್ತು.

ಸೂರ್ಯ ನೆತ್ತಿಗೇರುವ ಹೊತ್ತಿಗೆ ಜನಸಂದಣಿ ಕೊಂಚ ತಿಳಿಯಾಯಿತು. ಇದಕ್ಕೂ ಮುನ್ನ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಚಾರಕ್ಕೆ ಇಳಿದ ಎಸ್‌ಡಿಪಿಐ ಅಭ್ಯರ್ಥಿ

ಮೈಸೂರು
ಪ್ರಚಾರಕ್ಕೆ ಇಳಿದ ಎಸ್‌ಡಿಪಿಐ ಅಭ್ಯರ್ಥಿ

16 Jan, 2018

ಹುಣಸೂರು
ಬಂದೋಬಸ್ತ್, ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು

ಇಲಾಖೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ರಥೋತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ

16 Jan, 2018
‘ರಾಜಕಾರಣದಲ್ಲಿ ವ್ಯಾಪಾರಿ ಮನೋಭಾವ’

ಸುತ್ತೂರು
‘ರಾಜಕಾರಣದಲ್ಲಿ ವ್ಯಾಪಾರಿ ಮನೋಭಾವ’

15 Jan, 2018

ನಂಜನಗೂಡು
ಹಣ ದುರ್ಬಳಕೆ; ಮೂವರು ಅಮಾನತು

ತುಲಾಭಾರ ಸೇವೆ ವಿಭಾಗದ ಮೇಲ್ವಿಚಾರಕ ಅಭಿಷೇಕ್, ಗುಮಾಸ್ತೆ ಸುಭಾಷಿಣಿ ಹಾಗೂ ನಿವೃತ್ತ ಗುಮಾಸ್ತ ಶ್ರೀಕಂಠಸ್ವಾಮಿ ಅವರಿಗೆ ನೋಟಿಸ್ ನೀಡಲಾಗಿದೆ.

15 Jan, 2018
ಹೊಸ ಬಸ್ ನಿಲ್ದಾಣ; ನಿರೀಕ್ಷೆ ಹಲವು

ಮೂಲಸೌಕರ್ಯ
ಹೊಸ ಬಸ್ ನಿಲ್ದಾಣ; ನಿರೀಕ್ಷೆ ಹಲವು

15 Jan, 2018