ಭಾಲ್ಕಿ

ಭಾಲ್ಕಿ: ವಿದ್ಯುತ್ ಕಂಬ ಏರಿದ ಅಸ್ವಸ್ಥ

ಕಂಬದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಕೆಲವರೂ ಕೂಡಲೇ ಜೆಸ್ಕಾಂ ಕಚೇರಿಗೆ ವಿಷಯ ಮುಟ್ಟಿಸಿ ವಿದ್ಯುತ್ ಸಂಪರ್ಕ ಹಾಕದಂತೆ ಮನವಿ ಮಾಡಿದ್ದರು

ಭಾಲ್ಕಿಯ ಬಸ್ ನಿಲ್ದಾಣ ಸಮೀಪದ ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ ವ್ಯಕ್ತಿ

ಭಾಲ್ಕಿ: ಮಾನಸಿಕ ಅಸ್ವಸ್ಥ ವ್ಯಕ್ತಿ ವಿದ್ಯುತ್ ಕಂಬ ಏರಿ ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಪಟ್ಟಣದ ಬಸ್ ನಿಲ್ದಾಣ ಸಮೀಪದಲ್ಲಿ ಶುಕ್ರವಾರ ನಡೆದಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಸ್ ನಿಲ್ದಾಣ ಸಮೀಪದ ವಿದ್ಯುತ್ ಕಂಬ ಏರಿದ. ಇದರಿಂದ ಸಾರ್ವಜನಿಕರು ಗಾಬರಿಗೊಂಡು ಕೂಡಲೇ ಕಂಬದಿಂದ ಇಳಿದು ಬರುವಂತೆ ಪರಿಪರಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕಂಬದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಕೆಲವರೂ ಕೂಡಲೇ ಜೆಸ್ಕಾಂ ಕಚೇರಿಗೆ ವಿಷಯ ಮುಟ್ಟಿಸಿ ವಿದ್ಯುತ್ ಸಂಪರ್ಕ ಹಾಕದಂತೆ ಮನವಿ ಮಾಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ವ್ಯಕ್ತಿಯನ್ನು ಕಂಬದಿಂದ ಕೆಳಗೆ ಬರುವಂತೆ ಕೇಳಿಕೊಂಡರು ಬರಲಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಏಣಿ ಸಹಾಯದಿಂದ ಆತನನ್ನು ಕೆಳಗೆ ಇಳಿಸಿದರು. ಮಾನಸಿಕ ಅಸ್ವಸ್ಥ ಇರುವ ಕಾರಣಕ್ಕೆ ವ್ಯಕ್ತಿ ವಿದ್ಯುತ್ ಕಂಬ ಏರಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತನ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಕಲ್ಲಂಗಡಿ ಕೃಷಿಯಲ್ಲಿ ಖುಷಿ ಕಂಡ ರೈತ

ಭಾಲ್ಕಿ
ಕಲ್ಲಂಗಡಿ ಕೃಷಿಯಲ್ಲಿ ಖುಷಿ ಕಂಡ ರೈತ

19 Mar, 2018
ಮುನ್ನೆಚ್ಚರಿಕೆ ವಹಿಸಿ, ಕಾಯಿಲೆ ಬರುವುದನ್ನು ತಡೆಯಿರಿ

ಬೀದರ್‌
ಮುನ್ನೆಚ್ಚರಿಕೆ ವಹಿಸಿ, ಕಾಯಿಲೆ ಬರುವುದನ್ನು ತಡೆಯಿರಿ

19 Mar, 2018
ಟನ್ ಕಬ್ಬಿಗೆ ₹2,200 ಮುಂಗಡ ಕೊಡದಿದ್ದರೆ ಕ್ರಮ

ಬೀದರ್
ಟನ್ ಕಬ್ಬಿಗೆ ₹2,200 ಮುಂಗಡ ಕೊಡದಿದ್ದರೆ ಕ್ರಮ

17 Mar, 2018
ಎಸ್ಸೆಸ್ಸೆಲ್ಸಿ: 28,032 ವಿದ್ಯಾರ್ಥಿಗಳು

ಬೀದರ್
ಎಸ್ಸೆಸ್ಸೆಲ್ಸಿ: 28,032 ವಿದ್ಯಾರ್ಥಿಗಳು

17 Mar, 2018

ಕಮಲಾಪುರ
‘371 (ಜೆ): ಅಸಮರ್ಪಕ ಜಾರಿ’

‘ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್‌ನವರು ಸಭೆ, ಸಮಾರಂಭ, ಬೀದಿ–ಬೀದಿಗಳಲ್ಲಿ ಹೇಳುತ್ತ ಹೊರಟಿರುವ ಸಂವಿಧಾನದ 371 (ಜೆ) ಕಲಂ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ’ ಎಂದು ಮಾಜಿ ಸಚಿವ...

17 Mar, 2018