ಕೊಳ್ಳೇಗಾಲ

ವಿಜೃಂಭಣೆಯ ಬ್ರಹ್ಮ ರಥೋತ್ಸವ

ಬೆಳಿಗ್ಗೆ ಏಕವಾರ ರುದ್ರಾಭಿಷೇಕ, ಉರುಳು ಸೇವೆ ಹಾಗೂ ಮಹಾಮಂಗಳಾರತಿ ಸೇವೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯ ರಥೋತ್ಸವ ನಡೆಯಿತು. ನೂರಾರು ಭಕ್ತರುಗಳು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕೊಳ್ಳೇಗಾಲ: ಷಷ್ಠಿ ಹಬ್ಬದ ಅಂಗವಾಗಿ ನಗರದ ದೇವಾಂಗಪೇಟೆ ಬಡಾವಣೆಯಲ್ಲಿರುವ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆಯಿತು. ಸುಬ್ರಹ್ಮಣ್ಯೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಂಗಪೇಟೆಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಬೆಳಿಗ್ಗೆ ಏಕವಾರ ರುದ್ರಾಭಿಷೇಕ, ಉರುಳು ಸೇವೆ ಹಾಗೂ ಮಹಾಮಂಗಳಾರತಿ ಸೇವೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯ ರಥೋತ್ಸವ ನಡೆಯಿತು. ನೂರಾರು ಭಕ್ತರುಗಳು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಸುತ್ತಲೂ ವಿದ್ಯುತ್ ದೀಪ ಹಾಗೂ ಹಸಿರು ತೋರಣದಿಂದ ಶೃಂಗರಿಸಲಾಗಿತ್ತು.

ಮುಖಂಡರಾದ ಡಾ. ಪರಮೇಶ್ವರಯ್ಯ, ಕೂಗಟಿ ಗೋಪಾಲ್, ನಿರಂಜನ್, ರವಿ, ವೀರಭದ್ರಪ್ರಸಾದ್, ಎಂ.ಎನ್. ಸುಬ್ರಹ್ಮಣ್ಯಂ, ಡಿ.ಷಣ್ಮುಗ, ಗಂಗಾಧರ್, ಶಿವಕುಮಾರ್, ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್ ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮುಗಿಯದ ಕಾಮಗಾರಿ: ಜನರ ಪರದಾಟ

ಯಳಂದೂರು
ಮುಗಿಯದ ಕಾಮಗಾರಿ: ಜನರ ಪರದಾಟ

20 Mar, 2018
ಶಿಥಿಲಗೊಂಡ ಓವರ್‌ಹೆಡ್‌ ಟ್ಯಾಂಕ್‌

ಸಂತೇಮರಹಳ್ಳಿ
ಶಿಥಿಲಗೊಂಡ ಓವರ್‌ಹೆಡ್‌ ಟ್ಯಾಂಕ್‌

20 Mar, 2018
ಟೊಮೆಟೊ, ಈರುಳ್ಳಿ ಬೆಲೆ ಕುಸಿತ

ಚಾಮರಾಜನಗರ
ಟೊಮೆಟೊ, ಈರುಳ್ಳಿ ಬೆಲೆ ಕುಸಿತ

20 Mar, 2018
ಭಾರಿ ಬಿರುಗಾಳಿ, ಮಳೆಗೆ ಬಾಳೆ ಬೆಳೆ ನಾಶ

ಯಳಂದೂರು
ಭಾರಿ ಬಿರುಗಾಳಿ, ಮಳೆಗೆ ಬಾಳೆ ಬೆಳೆ ನಾಶ

20 Mar, 2018
ದೇವರ ಗುಡ್ಡರ ‘ಪಾದಯಾತ್ರೆ’ ಸಾಹಸ

ಸಂತೇಮರಹಳ್ಳಿ
ದೇವರ ಗುಡ್ಡರ ‘ಪಾದಯಾತ್ರೆ’ ಸಾಹಸ

19 Mar, 2018