ಚಾಮರಾಜನಗರ

ಹುತ್ತಕ್ಕೆ ಕೋಳಿ ರಕ್ತ ನೈವೇದ್ಯ

‘ಜಮೀನುಗಳಲ್ಲಿ ನಾಗರಹಾವು ಕಾಣಿಸಿ­ಕೊಳ್ಳು­ವುದು ಸಾಮಾನ್ಯ. ಷಷ್ಠಿ ಯಂದು ಹುತ್ತಕ್ಕೆ ಕೋಳಿ ಬಲಿ ನೀಡಿದರೆ ನಾಗರಹಾವು ಕಾಣಿಸಿ­ಕೊಳ್ಳು­ವುದಿಲ್ಲ. ಇಲ್ಲದಿದ್ದರೆ ಹಾವು ಕಾಣಿಸಿಕೊಂಡು ನಾಗ­ದೋಷ ಕಾಡುತ್ತದೆ ಎಂಬ ನಂಬಿಕೆ ಇಲ್ಲಿನ ಗ್ರಾಮೀಣ­ ಭಾಗಗಳಲ್ಲಿದೆ’

ಮಲ್ಲಯ್ಯನಪುರದಲ್ಲಿ ತನಿ ಹಬ್ಬದ ಅಂಗವಾಗಿ ಹುತ್ತಕ್ಕೆ ಕೋಳಿ ಬಲಿ ನೀಡಲಾಯಿತು

ಚಾಮರಾಜನಗರ: ನಾಗರ ಪಂಚಮಿ, ಷಷ್ಠಿ ದಿನದಂದು ಹುತ್ತಕ್ಕೆ ಹಾಲು, ತುಪ್ಪ ಎರೆದು ಪೂಜೆ ಸಲ್ಲಿಸು­ವುದು ವಾಡಿಕೆ. ಆದರೆ, ಜಿಲ್ಲೆಯಲ್ಲಿ ಹುತ್ತಕ್ಕೆ ನಾಟಿ ಕೋಳಿಯ ಬಿಸಿ ರಕ್ತದ ನೈವೇದ್ಯ ಅರ್ಪಿಸಿ ‘ತನಿ ಹಬ್ಬ’ ಆಚರಿಸಲಾಯಿತು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶುಕ್ರ­ವಾರ ‘ತನಿ ಹಬ್ಬ’ದ ಸಡಗರ ಕಂಡುಬಂತು. ಹೊಸಬಟ್ಟೆ ಧರಿಸಿದ್ದ ಮಕ್ಕಳು, ಮಹಿಳೆ ಯರು ಬೆಳಿಗ್ಗೆಯೇ ಹೊಲಕ್ಕೆ ಪೂಜಾ ಸಾಮಾಗ್ರಿಗಳೊಂದಿಗೆ ನಾಟಿಕೋಳಿ ಹಾಗೂ ಮೊಟ್ಟೆ ಕೊಂಡೊಯ್ದು, ಹುತ್ತಕ್ಕೆ ಸಾಂಪ್ರದಾಯಿಕ­ವಾಗಿ ಪೂಜೆ ಸಲ್ಲಿಸಿ ನಮಸ್ಕರಿಸಿದರು. ಬಳಿಕ, ಕೋಳಿಯ ಕತ್ತು ಕೊಯ್ದು ರಕ್ತವನ್ನು ಹುತ್ತದ ಕೋವಿಗಳಿಗೆ ಬಿಟ್ಟರು. ನಂತರ ಮೊಟ್ಟೆ ಮತ್ತು ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಪುಟ್ಟದಾದ ‘ನಾಗರಹೆಡೆ’ ಆಭರಣವನ್ನು ಕೋವಿನಲ್ಲಿ ಹಾಕಿದರು.

‘ಜಮೀನುಗಳಲ್ಲಿ ನಾಗರಹಾವು ಕಾಣಿಸಿ­ಕೊಳ್ಳು­ವುದು ಸಾಮಾನ್ಯ. ಷಷ್ಠಿ ಯಂದು ಹುತ್ತಕ್ಕೆ ಕೋಳಿ ಬಲಿ ನೀಡಿದರೆ ನಾಗರಹಾವು ಕಾಣಿಸಿ­ಕೊಳ್ಳು­ವುದಿಲ್ಲ. ಇಲ್ಲದಿದ್ದರೆ ಹಾವು ಕಾಣಿಸಿಕೊಂಡು ನಾಗ­ದೋಷ ಕಾಡುತ್ತದೆ ಎಂಬ ನಂಬಿಕೆ ಇಲ್ಲಿನ ಗ್ರಾಮೀಣ­ ಭಾಗಗಳಲ್ಲಿದೆ’ ಎಂದು ಸ್ಥಳೀಯರು ತಿಳಿಸಿದರು. ಕೋಳಿ ಬಲಿ ನೀಡದ ಜನರು ಹುತ್ತಕ್ಕೆ ಬಾಳೆ­ಹಣ್ಣು, ಹಾಲು- ಸಕ್ಕರೆಯ ನೈವೇದ್ಯ ಅರ್ಪಿಸುವ ಮೂಲಕ ತನಿ ಹಬ್ಬ ಆಚರಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಸಂತೇಮರಹಳ್ಳಿ
ಭೂಕಂಪನ; ರಕ್ಷಣೆಗೆ ಹೊಸ ತಂತ್ರಜ್ಞಾನ ಅಗತ್ಯ

ಭೂಕಂಪನದಿಂದ ಭಾರಿ ಕಟ್ಟಡಗಳಿಗೆ ಆಗುವ ಹಾನಿ ತಪ್ಪಿಸಲು ಹೊಸ ತಂತ್ರಜ್ಞಾನದ ಅಗತ್ಯ ಇದೆ ಇದೆ ಎಂದು ಸಂಪನ್ಮೂಲ ವ್ಯಕ್ತಿ ಅಜಯ್ ಸಿಂಗ್ ತಿಳಿಸಿದರು.

24 Apr, 2018

ಚಾಮರಾಜನಗರ
ಪಕ್ಷೇತರರಿಗೂ ಮಣೆ ಹಾಕಿದ್ದ ಮತದಾರ

ಚಾಮರಾಜನಗರದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷೇತರರು ಆಯ್ಕೆಯಾಗಿದ್ದು, ‘ಮತದಾರರು ರಾಜಕೀಯ ಪಕ್ಷಗಳಿಗೆ ಮಾತ್ರ ಮತ ಹಾಕುತ್ತಾರೆ’ ಎಂಬ ಅಭಿಪ್ರಾಯವನ್ನು ಜಿಲ್ಲೆಯ ಮತದಾರರು ಸುಳ್ಳಾಗಿಸಿದ್ದಾರೆ.

24 Apr, 2018
ಹಣ್ಣುಗಳ ರಾಜನ ಆಗಮನ; ಬೆಲೆ ದುಬಾರಿ

ಚಾಮರಾಜನಗರ
ಹಣ್ಣುಗಳ ರಾಜನ ಆಗಮನ; ಬೆಲೆ ದುಬಾರಿ

24 Apr, 2018

ಚಾಮರಾಜನಗರ
ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ

ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಒಟ್ಟು 17 ಮಂದಿ ನಾಮಪತ್ರ ಸಲ್ಲಿಸಿದರು.

24 Apr, 2018
ಸ್ವಚ್ಛತೆ ಕಣ್ಮರೆ: ಸಾಂಕ್ರಾಮಿಕ ರೋಗದ ಭೀತಿ

ಚಾಮರಾಜನಗರ
ಸ್ವಚ್ಛತೆ ಕಣ್ಮರೆ: ಸಾಂಕ್ರಾಮಿಕ ರೋಗದ ಭೀತಿ

23 Apr, 2018