ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಅಡಗುತಾಣಗಳ ಮೇಲೆ ಈಜಿಪ್ಟ್‌ ವಾಯುಪಡೆ ದಾಳಿ

Last Updated 25 ನವೆಂಬರ್ 2017, 7:02 IST
ಅಕ್ಷರ ಗಾತ್ರ

ಕೈರೋ: ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಉಗ್ರರು ದಾಳಿ ನಡೆಸಿ 230ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಬೆನ್ನಲೇ ಈಜಿಪ್ಟ್‌ ವಾಯುಪಡೆ ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರು ಹಾಗೂ ಅವರ ವಾಹನಗಳನ್ನು ಧ್ವಂಸ ಮಾಡಿದೆ.

ಈಜಿಪ್ಟ್‌ನ ಉತ್ತರ ಭಾಗದ ಸಿನಾಯ್‌ ಪ್ರಾಂತ್ಯದ ಅಲ್‌ ರೌಡಾ ಮಸೀದಿಯಲ್ಲಿ ದಾಳಿ ನಡೆಸಿದ ನಂತರ ಅಡಗು ತಾಣಗಳಲ್ಲಿ ಕುಳಿತಿದ್ದ ಉಗ್ರರು ಹಾಗೂ ಸುತ್ತಲಿನ ಭಯೋತ್ಪಾದಕರ ನೆಲೆಗಳ ಮೇಲೆ ವಾಯುಪಡೆ ದಾಳಿ ನಡೆಸಿರುವುದಾಗಿ ಅಲ್ಲಿನ ಸೇನಾವಕ್ತಾರ ತಮೀರ್‌ ಎಲ್– ರೆಫಾಯ್‌ ತಿಳಿಸಿದ್ದಾರೆ.

ಉಗ್ರರ ಡ್ರೋನ್‌ಗಳು ಹಾಗೂ ಶಸ್ತ್ರಾಸ್ತ್ರ ಸಂಗ್ರಹಗಳ ಮೇಲೆ ವಾಯುಪಡೆ ಗುರಿಯಿಟ್ಟು ದಾಳಿ ನಡೆಸಿದೆ. ಸೂಫಿ ಅನುಯಾಯಿಗಳು ಹೆಚ್ಚಾಗಿ ಬರುತ್ತಿದ್ದ ಮಸೀದಿ ಗುರಿಯಾಗಿಸಿ ಶುಕ್ರವಾರ ಉಗ್ರರು ಗುಂಡಿನ ದಾಳಿ ನಡೆಸಿ ಸ್ಫೋಟಕಗಳನ್ನು ಸಿಡಿಸಿದ್ದರು. ಇದರಿಂದ ಪ್ರಾರ್ಥನೆಗೆ ಬಂದಿದ್ದವರಲ್ಲಿ 230ಕ್ಕೂ ಹೆಚ್ಚು ಜನ ‍ಸಾವಿಗೀಡಾಗಿದ್ದು, 109ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಈಜಿ‍ಪ್ಟ್‌ ಸರ್ಕಾರ ಮೂರು ದಿನಗಳ ಶೋಕಾಚರಣೆ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT