ನರಗುಂದ

ರಾಜಕೀಯ ಪ್ರತಿಷ್ಠೆಗೆ ರೈತರ ಬಲಿ ಸಲ್ಲ

‘ಹಲವು ತಂತ್ರ, ಕುತಂತ್ರಗಳ ಮೂಲಕ ಮಹದಾಯಿ ಹೋರಾಟ ಹತ್ತಿಕ್ಕುವ ವ್ಯವಸ್ಥಿತ ಪಿತೂರಿ ನಡೆದಿದೆ. ಆದರೆ, ಇದುವರೆಗೆ ಇದರಲ್ಲಿ ಯಶಸ್ಸು ಲಭಿಸಿಲ್ಲ. ಜನಪ್ರತಿನಿಧಿಗಳು ಈಗಲೂ ಇದೇ ತಂತ್ರ ಅನುಸರಿಸಿದರೆ ರೈತರು ಬಗ್ಗುವುದಿಲ್ಲ

ನರಗುಂದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 863ನೇ ದಿನ ಶುಕ್ರವಾರ ಹೋರಾಟ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ ಮಾತನಾಡಿದರು

ನರಗುಂದ: ‘ಮಹದಾಯಿ ಯೋಜನೆ ಜಾರಿಯಾಗಬೇಕು ಎಂದು ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ತಮ್ಮ ರಾಜಕೀಯ ಪ್ರತಿ
ಷ್ಠೆಗೆ ರೈತರ ಹಿತ ಬಲಿ ಕೊಡಬಾರದು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ ಆಗ್ರಹಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 863ನೇ ದಿನ ಶುಕ್ರವಾರ ಅವರು ಮಾತನಾಡಿದರು.

‘ಹಲವು ತಂತ್ರ, ಕುತಂತ್ರಗಳ ಮೂಲಕ ಮಹದಾಯಿ ಹೋರಾಟ ಹತ್ತಿಕ್ಕುವ ವ್ಯವಸ್ಥಿತ ಪಿತೂರಿ ನಡೆದಿದೆ. ಆದರೆ, ಇದುವರೆಗೆ ಇದರಲ್ಲಿ ಯಶಸ್ಸು ಲಭಿಸಿಲ್ಲ. ಜನಪ್ರತಿನಿಧಿಗಳು ಈಗಲೂ ಇದೇ ತಂತ್ರ ಅನುಸರಿಸಿದರೆ ರೈತರು ಬಗ್ಗುವುದಿಲ್ಲ. ಬದಲಾಗಿ ಚುನಾವಣೆ ಸಂದರ್ಭದಲ್ಲಿ ಪಾಠ ಕಲಿಸುತ್ತಾರೆ’ ಎಂದು ಅವರು ಎಚ್ಚರಿಕೆ ನೀಡಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಹದಾಯಿ ಸಮಸ್ಯೆಯತ್ತ ಗಮನ ಹರಿಸಬೇಕಾದ ತುರ್ತು ಅಗತ್ಯವಿದೆ. ಆದರೆ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ಈ ಭಾಗದ ಶಾಸಕ, ಸಂಸದರ ಧೋರಣೆ ಸರಿಯಲ್ಲ’ ಎಂದರು.

‘ಪ್ರಧಾನಿ ಅಂತರರಾಷ್ಟ್ರೀಯ ಸಂಬಂಧ ವೃದ್ಧಿಗೆ ಶ್ರಮಿಸುವಂತೆ ರೈತರ ಅಭಿವೃದ್ಧಿಯ ವಿಷಯದಲ್ಲಿ ಪ್ರಯತ್ನಿಸುತ್ತಿಲ್ಲ. ಇದರಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಮಹದಾಯಿ ನೀರು ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯತ್ನ ಮಾಡಬೇಕು. ನಾಲ್ಕು ಜಿಲ್ಲೆಗಳ ರೈತರಿಗೆ ಮಹದಾಯಿ ನೀರು ಬಹಳ ಅವಶ್ಯವಾಗಿದೆ. ಈ ಕುರಿತು ನಿರ್ಲಕ್ಷ್ಯ ತೋರಿಸಿದರೆ ಜನನಾಯಕರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ’ ಎಂದು ಮಹದಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ಪರಶುರಾಮ ಜಂಬಗಿ ಹೇಳಿದರು.

ವೀರಬಸಪ್ಪ ಹೂಗಾರ, ಸೋಮಲಿಂಗಪ್ಪ ಆಯಟ್ಟಿ, ಎಸ್‌.ಕೆ.ಗಿರಿಯಣ್ಣವರ, ವೀರಣ್ಣ ಸೊಪ್ಪಿನ, ಯಲ್ಲಪ್ಪ ಗುಡದೇರಿ, ಚನ್ನಪ್ಪಗೌಡ ಪಾಟೀಲ, ಸಿದ್ದಪ್ಪ ಚಂದ್ರತ್ನವರ, ಹುನುಮಂತ ಪಡೆಸೂರು, ಚನ್ನಬಸು ಹುಲಜೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ನರೇಗಲ್
‘ಅಭಿವೃದ್ಧಿ ಸಹಿಸದ ಬಿಜೆಪಿಯಿಂದ ಸುಳ್ಳು ಆರೋಪ’

‘ಅಭಿವೃದ್ದಿಯನ್ನು ಅರಗಿಸಿಕೊಳ್ಳಲಾಗದ ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿವೆ’ ಎಂದು ಶಾಸಕ ಜಿ.ಎಸ್.ಪಾಟೀಲ ಟೀಕಿಸಿದರು.

18 Apr, 2018

ನರಗುಂದ
‘ಮಹದಾಯಿಗೆ ಸರ್ಕಾರದ ನಿರ್ಲಕ್ಷ್ಯ’

‘ಕೇಂದ್ರ ಸರ್ಕಾರವು ಬೇರೆ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಕೇಂದ್ರ, ರಾಜ್ಯ...

18 Apr, 2018
ಕಮಲ ಪಾಳೆಯದಲ್ಲಿ ಭಿನ್ನಮತ ಸ್ಫೋಟ

ಗದಗ
ಕಮಲ ಪಾಳೆಯದಲ್ಲಿ ಭಿನ್ನಮತ ಸ್ಫೋಟ

18 Apr, 2018

ರೋಣ
ಕಳಕಪ್ಪ ಬಂಡಿ ಪರ ಸಂಕನೂರ ಪ್ರಚಾರ

‘ಕಾಂಗ್ರೆಸ್ ಪಕ್ಷದ ಐದು ವರ್ಷದ ಆಡಳಿತದ ಅವಧಿಯಲ್ಲಿ ಅಭಿವೃದ್ದಿ ಕೆಲಸಗಳು ಶೂನ್ಯವಾಗಿವೆ. ರೈತರಿಗೆ ಯುವಕರಿಗೆ ಬಡಜನರಿಗೆ ಸಿದ್ದರಾಮಯ್ಯನವರಿಂದ ಅನ್ಯಾಯವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ...

18 Apr, 2018

ಲಕ್ಷ್ಮೇಶ್ವರ
ಯಲ್ಲಾಪುರದಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆ

ಗದಗ ಜಿಲ್ಲೆ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಕಟ್ಟಕಡೆಯ ಗ್ರಾಮವಾಗಿರುವ ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಲ್ಲಾಪುರದಲ್ಲಿ ನೀರಿನ ಸಮಸ್ಯೆ ಉಲ್ಭಣಿಸಿದ್ದು ನಿತ್ಯ ಗುಟುಕು ನೀರಿಗಾಗಿ...

17 Apr, 2018