ಹೊಳೆನರಸೀಪುರ

ತರಕಾರಿ ಮಾರಾಟ ಜೋರು

ಷಷ್ಠಿ ಹಬ್ಬದ ದಿನವಾದ ಶುಕ್ರವಾರ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಈ ದಿನ ಹಲವು ಬಗೆಯ ತರಕಾರಿಗಳನ್ನು ಹಂಚಿದರೆ ಒಳ್ಳೆಯದು ಎನ್ನುವ ನಂಬಿಕೆಯಿಂದಾಗಿ ಜನರು ವಿವಿಧ ಬಗೆಯ ತರಕಾರಿ ಕೊಳ್ಳಲು ಮುಗಿ ಬಿದ್ದಿದ್ದರು.

ಹೊಳೆನರಸೀಪುರ: ಷಷ್ಠಿ ಹಬ್ಬದ ದಿನವಾದ ಶುಕ್ರವಾರ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಈ ದಿನ ಹಲವು ಬಗೆಯ ತರಕಾರಿಗಳನ್ನು ಹಂಚಿದರೆ ಒಳ್ಳೆಯದು ಎನ್ನುವ ನಂಬಿಕೆಯಿಂದಾಗಿ ಜನರು ವಿವಿಧ ಬಗೆಯ ತರಕಾರಿ ಕೊಳ್ಳಲು ಮುಗಿ ಬಿದ್ದಿದ್ದರು.

ಕುಂಬಳಕಾಯಿ, ಬೂದುಕುಂಬಳ, ಹಲಸಿನ ಕಾಯಿ, ಪರಂಗಿಕಾಯಿ, ಹುಣಸೆಚೊಟ್ಟು, ಈರುಳ್ಳಿಹೂವು, ಮಾಗಿ ಕಾಯಿ, ಸೋರೇಕಾಯಿಗಳು ಮಾರುಕಟ್ಟೆಗೆ ಬಂದಿದ್ದವು. ವ್ಯಾಪಾರಸ್ಥರು ಅವಗಳನ್ನು ಕತ್ತರಿಸಿ ತುಂಡು ಲೆಕ್ಕದಲ್ಲಿ ಮಾರಾಟ ಮಾರಾಟ ಮಾಡುತ್ತಿದ್ದರು. ಕೆಲವು ಅಂಗಡಿಗಳಲ್ಲಿ 32 ಬಗೆಯ ತರಕಾರಿಗಳ ಒಂದು ತರಕಾರಿಗಳ ಬ್ಯಾಗ್‌ ಅನ್ನು ಇಟ್ಟು ₹ 120ರಂತೆ ಮಾರಾಟ ಮಾಡುತ್ತಿದ್ದರು.

‘ಈ ಬ್ಯಾಗ್‌ ಮಾಡಿದ್ದು ಒಳ್ಳೆಯದಾಯಿತು. ಇಲ್ಲದೆ ಇದ್ದಿದ್ದರೆ ದೊಡ್ಡ ಕುಂಬಳಕಾಯಿಯನ್ನೇ ತೆಗೆದುಕೊಳ್ಳಬೇಕಿತ್ತು. ತರಕಾರಿ ಪೀಸ್‌ಗಳಲ್ಲದೆ ಇಡಿಯಾಗಿ ಕೊಳ್ಳುವುದಾಗಿದ್ದರೆ ಎಲ್ಲ ತರಕಾರಿ ಕೊಳ್ಳಲು ಕನಿಷ್ಠ ₹ 500 ರಿಂದ 700 ಬೇಕಾಗುತ್ತಿತ್ತು’ ಎಂದು ಶ್ರೀನಿಧಿ ಪ್ರಿಂಟರ್ಸ್ ಮಾಲಿಕ ನರಸಿಂಹ ಶೆಟ್ಟಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಪುಟ್ಟಸೋಮಪ್ಪ ಅಭಿಪ್ರಾಯಪಟ್ಟರು.

ತರಕಾರಿ ಮಾರುಕಟ್ಟೆಗೆ ತೊಗರಿಕಾಯಿ ಹೆಚ್ಚಾಗಿ ಬಂದು ₹ 60ರಿಂದ 30ಕ್ಕೆ ಕುಸಿಯಿತು. ಅವರೆಕಾಯಿ ಕಡಿಮೆ ಬಂದಿದ್ದರಿಂದ ಬೆಲೆ ₹ 60ಕ್ಕೆ ಏರಿತ್ತು. ಕೆಲವರು ತರಕಾರಿ ಜತೆಗೆ ಸೊಪ್ಪನ್ನೂ ಖರೀದಿಸಿದ ಕಾರಣ ಸೊಪ್ಪಿನ ಬೆಲೆಯೂ ಹೆಚ್ಚಿತ್ತು. ಪಟ್ಟಣದ ಕೆಲವು ಬಡಾವಣೆಗಳಲ್ಲಿ ಯುವತಿಯರು ಮನೆ ಮನೆಗೆ ತರಕಾರಿ ಹಂಚುತ್ತಿದ್ದರು. ಹೂವು ಹಣ್ಣಿನ ವ್ಯಾಪಾರವೂ ಜೋರಾಗಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
₹ 1 ಕೋಟಿ ವೆಚ್ಚದಲ್ಲಿ ಬೆಲಸಿಂದ ಪ್ರಕೃತಿವನ ಅಭಿವೃದ್ಧಿ

ಚನ್ನರಾಯಪಟ್ಟಣ
₹ 1 ಕೋಟಿ ವೆಚ್ಚದಲ್ಲಿ ಬೆಲಸಿಂದ ಪ್ರಕೃತಿವನ ಅಭಿವೃದ್ಧಿ

16 Jan, 2018
ದಾಳಿಂಬೆ: ಕೆ.ಜಿ.ಗೆ ₹ 20 ಏರಿಕೆ

ಹಾಸನ
ದಾಳಿಂಬೆ: ಕೆ.ಜಿ.ಗೆ ₹ 20 ಏರಿಕೆ

16 Jan, 2018

ಶ್ರವಣಬೆಳಗೊಳ
ಬಸ್‌ ನಿಲ್ದಾಣದ ನವೀಕರಣ ಕಾಮಗಾರಿ ಪರಿಶೀಲನೆ

ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಬರುವ ವಾಹನಗಳ ಸಂಖ್ಯೆ, ನಿಲುಗಡೆ, ನಗರ ಸಾರಿಗೆ ಬಸ್‌ಗಳ ಸಂಚಾರ ಹಾಗೂ ತಾತ್ಕಾಲಿಕ ಬಸ್ ನಿಲ್ದಾಣಗಳ...

15 Jan, 2018

ಹಾಸನ
‘ಮೂಢನಂಬಿಕೆ ಬಿತ್ತುವ ಜ್ಯೋತಿಷಿಗಳು’

ನೈಸರ್ಗಿಕ ವಿದ್ಯಮಾನಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಸರಳವಾಗಿ ಜನರಿಗೆ ತಿಳಿಸಬೇಕು. ಚಂದ್ರ ಗ್ರಹಣ ನಿಸರ್ಗದ ಅತ್ಯುತ್ತಮ ಚಟುವಟಿಕೆ. ಇದನ್ನು ನಿರ್ಭಯವಾಗಿ ಜನರು ನೋಡಿ ಆನಂದಿಸುವುದನ್ನು...

15 Jan, 2018
ಡಿನೋಟಿಫಿಕೇಷನ್‌ ರದ್ದಾದರೆ ಕೆರೆ ಅಭಿವೃದ್ಧಿ

ಹಾಸನ
ಡಿನೋಟಿಫಿಕೇಷನ್‌ ರದ್ದಾದರೆ ಕೆರೆ ಅಭಿವೃದ್ಧಿ

15 Jan, 2018