ಶ್ರವಣಬೆಳಗೊಳ

ಪ್ಲಾಸ್ಟಿಕ್ ಮುಕ್ತ ಶ್ರವಣಬೆಳಗೊಳಕ್ಕೆ ಸಹಕರಿಸಿ

ಕಲುಷಿತಗೊಂಡಿದ್ದ ರಾಚೇನಹಳ್ಳಿ ಕೆರೆ ನೀರನ್ನು ಹೊರಗಡೆಗೆ ಹಾಕಿದ್ದು, ಇಂದಿನಿಂದಲೇ ಟ್ರಾಕ್ಟರ್‌ನಲ್ಲಿ ಹೂಳು ತೆಗೆಯಲಾಗುತ್ತಿದೆ.

ಶ್ರವಣಬೆಳಗೊಳ: ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಮಹಾಮಸ್ತಕಾಭಿಷೇಕದ ವಿಶೇಷಾಧಿಕಾರಿ ಬಿ.ಎನ್.ವರಪ್ರಸಾದ್ ರೆಡ್ಡಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಪ್ರಭಾಕರ್ ನೇತೃತ್ವದಲ್ಲಿ ವರ್ತಕರ ಸಭೆ ಕರೆಯಲಾಗಿತ್ತು.

‘ಗ್ರಾಮ ಪಂಚಾಯಿತಿಯಿಂದ ಹಸಿಕಸ, ಒಣಕಸವನ್ನಾಗಿ ವಿಂಗಡಿಸುವಂತೆ ಎರಡು ಬಕೆಟ್‌ಗಳನ್ನು ನೀಡಲಾಗುತ್ತದೆ. ವಾರದಲ್ಲಿ ಎರಡು ದಿನ ಒಣ ಕಸ ಹಾಗೂ ಉಳಿದ 5 ದಿನ ಹಸಿಕಸವನ್ನು ಸಂಗ್ರಹಿಸಿ ಕೋರನಹಳ್ಳಿ ಬಳಿ 5 ಎಕರೆ ಪ್ರದೇಶದಲ್ಲಿ ಸಾವಯವ ಗೊಬ್ಬರವನ್ನಾಗಿ ಮಾಡಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಕಲುಷಿತಗೊಂಡಿದ್ದ ರಾಚೇನಹಳ್ಳಿ ಕೆರೆ ನೀರನ್ನು ಹೊರಗಡೆಗೆ ಹಾಕಿದ್ದು, ಇಂದಿನಿಂದಲೇ ಟ್ರಾಕ್ಟರ್‌ನಲ್ಲಿ ಹೂಳು ತೆಗೆಯಲಾಗುತ್ತಿದೆ.

ಪ್ರಥಮ ಬಾರಿಗೆ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಸಲಾಗುತ್ತಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಜಾಥಾ ಮಾಡಲಾಗುತ್ತದೆ’ ಎಂದರು. ಪಿಡಿಒ ನವೀನ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷಣ್, ಜನಾರ್ದನ್, ವರ್ತಕರಾದ ರಾಮಸ್ವಾಮಿ, ರಘು ಮೆಸ್, ತರಕಾರಿ ವ್ಯಾಪಾರಿಗಳು, ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಆನೆ ಉಪಟಳ ತಡೆಗಟ್ಟದಿದ್ದರೆ ಕ್ರಿಮಿನಲ್‌ ಪ್ರಕರಣ

ಹಾಸನ
ಆನೆ ಉಪಟಳ ತಡೆಗಟ್ಟದಿದ್ದರೆ ಕ್ರಿಮಿನಲ್‌ ಪ್ರಕರಣ

19 Jan, 2018

ಶ್ರವಣಬೆಳಗೊಳ
ಕಲ್ಯಾಣಿಯಲ್ಲಿ ಮೊಳಗಿದ ಗೊಮ್ಮಟ ಸ್ತುತಿ

ಗೊಮ್ಮಟನ ಮಹಾಮಸ್ತಕಾಭಿಷೇಕ ಅಂಗವಾಗಿ ಸುಮಾರು 3 ಸಾವಿರ ಜೈನ ಬಾಂಧವರು ಗುರುವಾರ ಬಾಹುಬಲಿ ಗೀತೆಯನ್ನು ಸಾಮೂಹಿಕವಾಗಿ ಹಾಡಿದರು.

19 Jan, 2018

ಹಿರೀಸಾವೆ
ಕ್ರೀಡಾಕೂಟಕ್ಕೆ ಸ್ಪರ್ಧಿಗಳ ಕೊರತೆ

ಹಲವು ವರ್ಷಗಳ ಹಿಂದೆ ನಡೆಸುತ್ತಿದ್ದ ತೆಂಗಿನ ಕಾಯಿ ಸುಲಿಯುವುದು, ಕಲ್ಲು ಗುಂಡು ಎತ್ತುವುದು, 50 ಕೆ.ಜಿ ತೂಕದ ಮೂಟೆ ಹೊತ್ತು 75 ಮೀಟರ್ ಓಡುವುದು,...

19 Jan, 2018
ರಂಗನಾಥಸ್ವಾಮಿ ರಥೋತ್ಸವ

ಅರಸೀಕೆರೆ
ರಂಗನಾಥಸ್ವಾಮಿ ರಥೋತ್ಸವ

18 Jan, 2018

ಹಾಸನ
ಅನುಮತಿ ಪ್ರಕ್ರಿಯೆ ಚುರುಕುಗೊಳಿಸಿ: ಡಿ.ಸಿ

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಅರಣ್ಯ ಇಲಾಖೆಯ ಪ್ರತ್ಯೇಕ ವನ್ಯಜೀವಿ ಉಪ ವಿಭಾಗ ಪ್ರಾರಂಭವಾಗಬೇಕು. ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಆನೆ...

18 Jan, 2018