ಹಾವೇರಿ

‘ಬದಲಾವಣೆ ತಂದ ಬಂಗಾರದ ಮನುಷ್ಯ’

‘ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮ ಪರದೆ ಮೇಲಿನ ಸಿನಿಮಾವು ಅಂಗೈಯಲ್ಲಿನ ಮೊಬೈಲ್‌ಗೆ ಬಂದಿದೆ. ಹೀಗಾಗಿ ಚಲನಚಿತ್ರ ಮಂದಿರಗಳಲ್ಲಿ ಸಿನಿಮಾ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ

ಹಾವೇರಿ: ‘ರಾಜ್‌ಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಹಲವರ ಬದುಕಿನಲ್ಲಿ ಬದಲಾವಣೆ ತಂದಿತ್ತು. ಅಂತಹ ಸದಭಿರುಚಿಯ ಸಿನಿಮಾ ವೀಕ್ಷಿಸುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು’ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಮಾಗಾವಿ ಚಿತ್ರಮಂದಿರದಲ್ಲಿ ಹಮ್ಮಿಕೊಂಡ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳ ಪ್ರದರ್ಶನದ ‘ಚಿತ್ರೋತ್ಸವ ಸಪ್ತಾಹ’ದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಹಿಂದಿನ ಹಲವು ಸಿನಿಮಾಗಳು ಸಮಾಜದ ಮೇಲೆ ಅತ್ಯುತ್ತಮ ಪರಿಣಾಮ ಬೀರಿದ್ದವು. ಹಲವರ ಬದುಕಿನಲ್ಲಿ ಬದಲಾಣೆಗಳನ್ನು ತಂದ ನಿರ್ದಶನಗಳಿವೆ. ಇಂತಹ ಸಿನಿಮಾಗಳು ಇಂದು ಹೆಚ್ಚಾಗಬೇಕು’ ಎಂದರು.

‘ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮ ಪರದೆ ಮೇಲಿನ ಸಿನಿಮಾವು ಅಂಗೈಯಲ್ಲಿನ ಮೊಬೈಲ್‌ಗೆ ಬಂದಿದೆ. ಹೀಗಾಗಿ ಚಲನಚಿತ್ರ ಮಂದಿರಗಳಲ್ಲಿ ಸಿನಿಮಾ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತಮ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು’ ಎಂದರು.

‘ಸಿನಿಮಾ ಒಂದ ಪ್ರಭಾವಿ ಮಾಧ್ಯಮ. ಬದುಕಿನ ಮೇಲೆ ಗಾಢಾ ಪ್ರಭಾವ ಬೀರಬಲ್ಲ ಶಕ್ತಿ ಹೊಂದಿದೆ’ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ ಮಾತನಾಡಿ, ‘ಸದಭಿರುಚಿಯ ಸಿನಿಮಾ ವೀಕ್ಷಣೆಯು ಮನೋರಂಜನೆ ಜೊತೆಗೆ ಬದುಕಿಗೆ ಸನ್ಮಾರ್ಗ ತೋರುತ್ತದೆ’ ಎಂದರು.

‘ಕನ್ನಡ ಸಿನಿಮಾಗಳು ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ಸಂದಿಗ್ಧ ಕಾಲಘಟ್ಟದಲ್ಲಿ ವಾರ್ತಾ ಇಲಾಖೆಯ ಮೂಲಕ ಉತ್ತಮ ಸಿನಿಮಾಗಳನ್ನು ಜನರಿಗೆ ಉಚಿತವಾಗಿ ತೋರಿಸುತ್ತಿರುವುದು ಸರ್ಕಾರದ ಶ್ಲಾಘನೀಯ ಕಾರ್ಯ’ ಎಂದರು. ಚಿತ್ರಮಂದಿರದ ಮಾಲೀಕ ಅಜಿತ್ ಮಾಗಾವಿ, ವ್ಯವಸ್ಥಾಪಕ ಶಶಿಕಾಂತ, ಶಿಕ್ಷಣಾಧಿಕಾರಿ ಚಂದ್ರಶೇಖರ ಭಗವಂತಗೌಡ ಇದ್ದರು.

ಉಚಿತ ಪ್ರವೇಶ 
ಇದೇ 25ರಂದು ‘ಕಿರಿಕ್ ಪಾರ್ಟಿ’, 26ರಂದು ‘ರಾಮ ರಾಮರೇ’, 27 ರಂದು ತುಳುಭಾಷೆಯ ಮದಿಪು, 28ರಂದು ‘ಯೂ-ಟರ್ನ್’, 29ರಂದು ‘ಅಲ್ಲಮ’ ಹಾಗೂ 30ರಂದು ‘ಮಾರಿಕೊಂಡವರು’ ಚಲನಚಿತ್ರಗಳು ಬೆಳಿಗ್ಗೆ 10.30ರಿಂದ ಪ್ರದರ್ಶನ ಕಾಣಲಿವೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ವಾರ್ತಾಧಿಕಾರಿ ಡಾ. ಬಿ.ಆರ್.ರಂಗನಾಥ ಕುಳಗಟ್ಟೆ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಮಳೆನೀರಿಗೂ ನೆಲೆ ನೀಡಿದ ಮನೆ

ಹಾವೇರಿ
ಮಳೆನೀರಿಗೂ ನೆಲೆ ನೀಡಿದ ಮನೆ

18 Jun, 2018
ತುಕ್ಕು ಹಿಡಿಯುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳು

ರಾಣೆಬೆನ್ನೂರು
ತುಕ್ಕು ಹಿಡಿಯುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳು

18 Jun, 2018
ರಸ್ತೆ ವಿಸ್ತರಣೆಯಿಂದ ರೈತರಿಗೆ ಸಂಕಷ್ಟ

ಹಂಸಭಾವಿ
ರಸ್ತೆ ವಿಸ್ತರಣೆಯಿಂದ ರೈತರಿಗೆ ಸಂಕಷ್ಟ

18 Jun, 2018
ನಗೆಮಲ್ಲನಾದ ಪೊಲೀಸಪ್ಪ

ಹಾವೇರಿ
ನಗೆಮಲ್ಲನಾದ ಪೊಲೀಸಪ್ಪ

17 Jun, 2018
ಐದೂ ಬೆರಳಿಗೆ ಕುಂಚ ಕಟ್ಟಿ ಕಲೆ ಅರಳಿಸಿದರು

ಹಾವೇರಿ
ಐದೂ ಬೆರಳಿಗೆ ಕುಂಚ ಕಟ್ಟಿ ಕಲೆ ಅರಳಿಸಿದರು

17 Jun, 2018