ಅಫಜಲಪುರ

ಸಕಾಲಕ್ಕೆ ದ್ರಾಕ್ಷಿ ಬೆಳೆ ನಿರ್ವಹಣೆ ಮಾಡಲು ಸಲಹೆ

‘ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಶಾಳ ಗ್ರಾಮವನ್ನು ಆಯ್ಕೆ ಮಾಡಿಕೊಂಡು ರೈತರಿಗೆ ಸಹಾಯಧನದಲ್ಲಿ ದ್ರಾಕ್ಷಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.

ಅಫಜಲಪುರ: ‘ರೈತರು ದ್ರಾಕ್ಷಿ ಬೆಳೆಯುವುದು ಈಗಿನ ಕಾಲದಲ್ಲಿ ಬಹಳ ಕಷ್ಟಕರ. ವಾತಾವರಣ ಏರುಪೇರಿನಿಂದಾಗಿ ಬೆಳೆಗಳಿಗೆ ರೋಗ ಬರುತ್ತದೆ. ಅದಕ್ಕಾಗಿ ಸಮಯಕ್ಕೆ ಸರಿಯಾಗಿ ದ್ರಾಕ್ಷಿ ಬೆಳೆ ನಿರ್ವಹಣೆ ಮಾಡಬೇಕು’ ಎಂದು ತೋಟಗಾರಿಕೆ ಉಪ ನಿರ್ದೇಶಕ ಮೊಹ್ಮದ ಅಲಿ ತಿಳಿಸಿದರು.

ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ 2017 – 18ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದ್ರಾಕ್ಷಿ ತಾಕುಗಳನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಶಾಳ ಗ್ರಾಮವನ್ನು ಆಯ್ಕೆ ಮಾಡಿಕೊಂಡು ರೈತರಿಗೆ ಸಹಾಯಧನದಲ್ಲಿ ದ್ರಾಕ್ಷಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕಾಗಿ ರೈತರು ಹೊಸ ತಾಂತ್ರಿಕತೆಯನ್ನು ಬಳಸಿ ದ್ರಾಕ್ಷಿ ಬೆಳೆ ನಿರ್ವಹಣೆ ಮಾಡಬೇಕು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕು’ ಎಂದು ಅವರು ತಿಳಿಸಿದರು.

ಕರಜಗಿ ಗ್ರಾಮದಲ್ಲಿ ಸಾಮೂಹಿಕ ಕೆರೆಯನ್ನು ವೀಕ್ಷಣೆ ಮಾಡಿದ ಅವರು, ‘ಈ ಕೆರೆಯಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದ್ದು, ಈ ಭಾಗದಲ್ಲಿ ಬರುವ ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದರು.

ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ರಾಜಕುಮಾರ ಗೋವಿನ್‌ ಮಾತನಾಡಿ, ‘ಮಾಶಾಳದಲ್ಲಿ ದ್ರಾಕ್ಷಿ ಬೆಳೆಗಾರರು ಸರ್ಕಾರದ ಸಹಾಯಧನ ಪ್ರಾಮಾಣಿಕವಾಗಿ ಬಳಸಿಕೊಂಡು ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಸಂತೋಷಕುಮಾರ ಲೋಣಿ ಮಾತನಾಡಿ, ಮಾಶಾಳ ಮತ್ತು ಕರಜಗಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಕಾರ್ಯಕ್ರಮದ ಬಗ್ಗೆ ಉಪ ನಿರ್ದೇಶಕರಿಗೆ ಮಾಹಿತಿ ನೀಡಿದರು.

ತಮ್ಮ ಅನುಭವವನ್ನು ಹಂಚಿಕೊಂಡ ದ್ರಾಕ್ಷಿ ಬೆಳೆಗಾರರಾದ ಮಲ್ಲಿಕಾರ್ಜುನ ನಾಮಗೊಂಡ, ನಾಗೇಶ ವಾಲಿ, ಭೀಮಾಶಂಕರ ಹೈದ್ರಾ, ಮಲ್ಲಿಕಾರ್ಜುನ ಖುರ್ಜಿ ದ್ರಾಕ್ಷಿ ನಿರ್ವಹಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

Comments
ಈ ವಿಭಾಗದಿಂದ ಇನ್ನಷ್ಟು

ಕಲಬುರ್ಗಿ
ಅಪಘಾತ: ಯುವಕ ಸಾವು

ಜೇವರ್ಗಿ ಬಸ್ ಡಿಪೋ ಎದುರು ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

18 Jun, 2018
ಹಬ್ಬದ ಮಾರನೇ ದಿನವೂ ಸಡಗರ, ಸಂಭ್ರಮ

ಕಲಬುರ್ಗಿ
ಹಬ್ಬದ ಮಾರನೇ ದಿನವೂ ಸಡಗರ, ಸಂಭ್ರಮ

18 Jun, 2018

ವಾಡಿ
ಕಾಮಗಾರಿ ಅಪೂರ್ಣ: ನೀರಿಗಾಗಿ ತಪ್ಪದ ಅಲೆದಾಟ

ವಾಡಿ ಸಮೀಪದ ಹಲಕರ್ಟಿ ಗ್ರಾಪಂ ವ್ಯಾಪ್ತಿಯ ಬಳವಡ್ಗಿ ಗ್ರಾಮದಲ್ಲಿ ಬೇಸಿಗೆ ಕಳೆದರೂ ಕುಡಿಯುವ ನೀರಿಗಾಗಿ ಅಲೆದಾಟ ತಪ್ಪಿಲ್ಲ. ಕುಡಿಯಲು ನೀರು ಒದಗಿಸಿ ಎನ್ನುವ ಗ್ರಾಮಸ್ಥರ...

18 Jun, 2018
ಸಂರಕ್ಷಿತ ಸ್ಮಾರಕ ಪಟ್ಟಿಗೆ ಮೋಘಾ ರಾಮಲಿಂಗೇಶ್ವರ

ಚಿಂಚೋಳಿ
ಸಂರಕ್ಷಿತ ಸ್ಮಾರಕ ಪಟ್ಟಿಗೆ ಮೋಘಾ ರಾಮಲಿಂಗೇಶ್ವರ

18 Jun, 2018

ಅಫಜಲಪುರ
ಶಾಸಕ ಪಾಟೀಲ ಸಹೋದರರಿಗೆ ಬೆಳ್ಳಿ ಕಿರೀಟ...

ಶಾಸಕ ಎಂ.ವೈ.ಪಾಟೀಲ  ಹಾಗೂ ಅವರ ಸಹೋದರ ಎಸ್‌.ವೈ.ಪಾಟೀಲ ಅವರಿಗೆ ಅವರ ಸ್ವಗ್ರಾಮ ದೇಸಾಯಿ ಕಲ್ಲೂರದಲ್ಲಿ ಭಾನುವಾರ  ಗ್ರಾಮಸ್ಥರಾದ ಯಲ್ಲಾಲಿಂಗ ಉಕಲಿ, ಸಿದ್ದರಾಮ ಉಕಲಿ ಸುಮಾರು...

18 Jun, 2018