ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಷಷ್ಠಿ ಸಂಭ್ರಮ

ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಸುಬ್ರಮಣ್ಯ ಷಷ್ಠಿ ಸಂಭ್ರಮದಿಂದ ನಡೆಯಿತು.

ಮಡಿಕೇರಿಯ ಮುತ್ತಪ್ಪ ದೇವಾಲಯದಲ್ಲಿ ಶುಕ್ರವಾರ ನಡೆದ ಸುಬ್ರಹ್ಮಣ್ಯ ಷಷ್ಠಿ ಉತ್ಸವದಲ್ಲಿ ದೈವ್ವ ವೇಷಧಾರಿ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಸುಬ್ರಮಣ್ಯ ಷಷ್ಠಿ ಸಂಭ್ರಮದಿಂದ ನಡೆಯಿತು. ಮಡಿಕೇರಿಯ ಮುತ್ತಪ್ಪ ದೇವಾಲಯದ ಉತ್ಸವ ಸಮಿತಿ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ಈ ಬಾರಿ ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ, ಪಂಚ ಕಜ್ಜಾಯ ಸೇವೆ, ಹಣ್ಣು ಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ಜರುಗಿದವು. ಬಳಿಕ ಅನ್ನಸಂತರ್ಪಣೆ ನಡೆಯಿತು. ಆದರೆ, ಈ ಬಾರಿ ಪೂಜೆಯೇ ವಿಳಂಬವಾದ ಕಾರಣ ಭಕ್ತರು ಕಾದು ಕಾದು ಸುಸ್ತಾದರು. ಮಧ್ಯಾಹ್ನ 2ಕ್ಕೆ ಅನ್ನಸಂತರ್ಪಣೆ ಆರಂಭಗೊಂಡಿತು. ವಯಸ್ಕರು, ಪುಟ್ಟ ಮಕ್ಕಳು ಹಾಗೂ ಮಹಿಳೆಯರು ಬಿಸಿಲಿನಲ್ಲೇ ಕಾದರು.

ಇನ್ನೂ ಓಂಕಾರೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಸಂಜೆ ತೆಪ್ಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ನಡೆದವು. ಅಲ್ಲಿಯೂ ಮಧ್ಯಾಹ್ನ ಭಕ್ತರಿಗೆ ಆಯೋಜಿಸಿದ್ದ ಅನ್ನಸಂತರ್ಪಣೆ ಮಾತ್ರ ಅವ್ಯವಸ್ಥೆಯಿಂದ ಕೂಡಿತ್ತು. ಮಧ್ಯಾಹ್ನ 2.30ರ ವೇಳೆಗೆ ತಯಾರಿಸಿದ್ದ ಖಾದ್ಯಗಳು ಮುಕ್ತಾಯವಾಗಿತ್ತು. ಭಕ್ತರು ಸರದಿಯಲ್ಲಿ ಕಾದು ಬಸವಳಿದರು.

ಮನೆ ಮನಗಳಲ್ಲೂ ಷಷ್ಠಿ ಸಂಭ್ರಮ ಮನೆ ಮಾಡಿತ್ತು. ಕುಕ್ಕೆ ಸುಬ್ರಮಣ್ಯದಲ್ಲಿ ಪಂಚ ರಥೋತ್ಸವ ನಡೆದ ಬಳಿಕ ಮನೆಯಲ್ಲಿ ಹಬ್ಬ ನಡೆಯಿತು. ಮಹಿಳೆಯರು ತುಂಡು ಮಾಡಿದ ತರಕಾರಿಗಳನ್ನು ಮನೆ ಮನೆಗೆ ತೆರಳಿ ಹಂಚಿದ್ದು ವಿಶೇಷ.

Comments
ಈ ವಿಭಾಗದಿಂದ ಇನ್ನಷ್ಟು

ನಾಪೋಕ್ಲು
ಬೈಗುಳವೇ ಇಲ್ಲಿ ದೇವರ ಶ್ಲೋಕ...!

ದೇವರ ಹೆಸರಿನಲ್ಲಿ ಕಂಡವರಿಗೆಲ್ಲ ಮನಸೋಇಚ್ಛೆ ಬೈದು, ಹಣ ಬೇಡಿ ನಂತರ ದೇವರಲ್ಲಿ ತಪ್ಪೊಪ್ಪಿಕೊಳ್ಳುವ ಗಿರಿಜನರ ಹಬ್ಬವೊಂದು ಜಿಲ್ಲೆಯ ಗಡಿ ಭಾಗದ ತಿತಿಮತಿ ಸಮೀಪದ ದೇವರಪುರದಲ್ಲಿ...

22 Apr, 2018

ಮಡಿಕೇರಿ
ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಜ್ಜು

ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದ್ದು ಈ ಬಾರಿಯ ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಆಭ್ಯರ್ಥಿ ಅರುಣ್ ಮಾಚಯ್ಯ ಹೇಳಿದರು. ...

22 Apr, 2018
ಲಾರಿ ಹತ್ತಲು ‘ಧರ್ಮರಾಯ’ನಿಂದ ಪ್ರತಿರೋಧ

ಗೋಣಿಕೊಪ್ಪಲು
ಲಾರಿ ಹತ್ತಲು ‘ಧರ್ಮರಾಯ’ನಿಂದ ಪ್ರತಿರೋಧ

22 Apr, 2018
ಸಡನ್ ಡೆತ್‌ನಲ್ಲಿ ಕೇಟೋಳಿರ ತಂಡಕ್ಕೆ ಜಯ

ನಾಪೋಕ್ಲು
ಸಡನ್ ಡೆತ್‌ನಲ್ಲಿ ಕೇಟೋಳಿರ ತಂಡಕ್ಕೆ ಜಯ

22 Apr, 2018

ಮಡಿಕೇರಿ
ಚುನಾವಣೆ ಅಖಾಡಕ್ಕೆ ಅಪ್ಪಚ್ಚು

ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್‌ ಅವರು ಶುಕ್ರವಾರ ನಾಮಪತ್ರ ಸಲ್ಲಿಸುವ ಮೂಲಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದರು. ನಾಲ್ಕು ಬಾರಿ...

21 Apr, 2018