ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಂದಿರದೊಂದಿಗೆ ರಾಮ ರಾಜ್ಯವೂ ಸಾಕಾರ ಆಗಬೇಕು’

Last Updated 26 ನವೆಂಬರ್ 2017, 6:01 IST
ಅಕ್ಷರ ಗಾತ್ರ

ಉಡುಪಿ: ರಾಮ ಮಂದಿರ ನಿರ್ಮಾಣಕ್ಕೆ ಗಡುವು ನಿಗದಿಯಾಗಿದೆ. ಅದರ ಜತೆಗೆ ರಾಮ ರಾಜ್ಯದ ನಿರ್ಮಾಣವೂ ಆಗಬೇಕಾಗಿದೆ ಎಂದು ಧಾರವಾಡ ಆರೂಢಾಶ್ರಮದ ಲಲಿತಮ್ಮ ದೇವಿ ಹೇಳಿದರು.

ಧರ್ಮ ಸಂಸತ್‌ನಲ್ಲಿ ಶನಿವಾರ ಉತ್ತರ ಕರ್ನಾಟಕದ ಮಠಾಧೀಶರ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ದೇಶ ಪ್ರಗತಿಗೆ ರಾಜಕೀಯಕ್ಕೆ ಅಧ್ಯಾತ್ಮದ ತಳಹದಿ ಅಗತ್ಯವಾಗಿದೆಎಂದರು.

ಬಸವಕಲ್ಯಾಣದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಜ್ಞಾನದ ದಾರಿದ್ರ್ಯ ಹೆಚ್ಚಾಗಿದೆ. ಮೆಕಾಲೆ ಶಿಕ್ಷಣ ಪದ್ಧತಿಯು, ಕೇವಲ ಅರ್ಥ ಮತ್ತು ಕಾಮನೆಯ ಮೇಲೆ ನಿಂತಿದೆ. ವೋಟ್ ರಾಜಕಾರಣಕ್ಕಾಗಿ ಸರ್ಕಾರಗಳು ಇದನ್ನು ಬದಲಿಸುವುದಿಲ್ಲ. ಇದಕ್ಕೆ ಸಂತರು ಮುಂದಾಗಬೇಕು. ಹಿಂದೂ ಧರ್ಮದ ಉಳಿವಿಗೆ ಶಸ್ತ್ರ ವಿದ್ಯೆ ಮತ್ತು ಶಾಸ್ತ್ರ ವಿದ್ಯೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಬೆಳಗಾವಿಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ದೇಶದ ಯಾವುದೋ ಮೂಲೆಯಲ್ಲಿ ಇರುವ ಕಟ್ಟಕಡೆಯ ಜನತೆಗೆ ಧರ್ಮ ಸಿಗುತ್ತಿಲ್ಲ. ಇದರಿಂದ ಅವರು ಬೇರೆ ಧರ್ಮದತ್ತ ಹೋಗುತ್ತಿದ್ದಾರೆ. ಅವರಿಗೆ ಘರ್ ವಾಪಸಿ ಬೇಕಾಗಿಲ್ಲ. ನಾವೇ ಅವರ ಬಳಿಗೆ ಹೋಗಬೇಕು. ಹಿಂದೂ ಧರ್ಮವನ್ನು ಅವರ ಬಳಿಗೆ ಕೊಂಡೊಯ್ಯಬೇಕು. ಎಲ್ಲರನ್ನು ಒಪ್ಪಿಕೊಳ್ಳುವ ಮೂಲಕ ರಾಮಮಂದಿರದ ಕನಸು ನನಸಾಗಿಸಬೇಕು ಎಂದು ಹೇಳಿದರು.

ಕೈವಲ್ಯಾನಂದ ಸ್ವಾಮೀಜಿ ಮಾತನಾಡಿ, ಸ್ತ್ರೀ ಸ್ವಾತಂತ್ರ್ಯ, ಆಧುನಿಕ ಶಿಕ್ಷಣದ ನೆಪದಲ್ಲಿ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಹಿಂದೂ ಧರ್ಮದ ಪ್ರಮುಖ ಭಾಗವಾಗಿರುವ ಗೃಹಸ್ಥ ಮೌಲ್ಯಗಳ ಪರಿಪಾಲನೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಬಾಂಧವ್ಯ ಅಳಿಯುತ್ತಿದೆ ಎಂದು ಹೇಳಿದರು.

ಭಾಷೆಯು ಸಂಸ್ಕೃತಿಯ ವಾಹಕ. ಆದರೆ, ಶಿಕ್ಷಣದ ಹೆಸರಿನಲ್ಲಿ ಇಂದಿನ ವಿದ್ಯಾರ್ಥಿಗಳ ಮೇಲೆ‌ ಆಗುತ್ತಿರುವ ದೌರ್ಜನ್ಯ ಬೇರಾರ ಮೇಲೂ ಆಗುತ್ತಿಲ್ಲ. ಭಾಷೆ ಅಳಿದರೆ, ಧರ್ಮವೂ ಉಳಿಯುವುದಿಲ್ಲ. ಅದಕ್ಕಾಗಿ ಸಮೃದ್ಧವಾಗಿರುವ ಭಾಷೆಯನ್ನು ಬೆಳೆಸಬೇಕಾಗಿದೆ ಎಂದು ಸಲಹೆ ನೀಡಿದರು.

ರೇವೂರಿನ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲವ್ ಜಿಹಾದ್ ಅನ್ನು ನಿಯಂತ್ರಿಸಬೇಕು. ಈಗಾಗಲೇ ಬೇರೆ ಜಾತಿಯವರ ಜತೆಗೆ ಹೋದವರನ್ನು ಮತ್ತೆ ನಮ್ಮ ಧರ್ಮಕ್ಕೆ ಕರೆತರುವ ಕೆಲಸವನ್ನು ಸಂತರು ಮಾಡಬೇಕಾಗಿದೆ ಎಂದರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವ ಹಿಂದೂ ಪರಿಷತ್‌ ಯಾರನ್ನೂ ವಿರೋಧಿಸುವುದಿಲ್ಲ. ನಮ್ಮ ಹೆಣ್ಣು ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬಿತ್ತಬೇಕು. ನಮ್ಮ ಪೂಜೆ, ಪರಂಪರೆಯ ಜತೆಗೆ ಎಲ್ಲರನ್ನು ಒಪ್ಪಿಕೊಳ್ಳುವ ಕೆಲಸ ಮಾಡಬೇಕು ಎಂದರು. ರಾಮ ಮಂದಿರಕ್ಕೆ ಮುಸ್ಲಿಮರು ವಿರೋಧಿಸುತ್ತಿಲ್ಲ. ನಮ್ಮವರೇ ಕೆಲವರು ವಿರೋಧಿಸುತ್ತಿದ್ದಾರೆ. ಅಂಥವರಿಗೆ ಬುದ್ಧಿ ಹೇಳಬೇಕು ಎಂದರು.

ಸ್ವರ್ಣವಲ್ಲಿ ಮಠಾಧೀಶರು ನಡೆಸಿದ ಭಗವದ್ಗೀತಾ ಅಭಿಯಾನದ ಮೂಲಕ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಅಂತಹ ಕಾರ್ಯ ನಿರಂತರವಾಗಿ ಮುಂದುವರಿಯಬೇಕು. ನಾವೆಲ್ಲರೂ ಒಂದಾಗಿ ನಡೆಯಬೇಕು ಎಂದು ಹೇಳಿದರು.

ಧರ್ಮ ಸಂಸತ್‌ ಮೂಲಕ ಮಠಾಧೀಶರು, ಸಂತರ ಕೆಲಸ, ಕಾರ್ಯಗಳನ್ನು ವಹಿಸಬೇಕು. ಅದನ್ನು ಮುನ್ನಡೆಸಿಕೊಂಡು ಹೋಗಲು ಸಾಧು ಸಂತರು ಬದ್ಧರಾಗಬೇಕು. ಇದಕ್ಕೆ ಉತ್ತರ ಕರ್ನಾಟಕದ ಎಲ್ಲ ಮಠಾಧೀಶರ ಬೆಂಬಲವಿದೆ ಎಂದು ಘೋಷಿಸಿದರು.

ಧಾರವಾಡ ರಾಮಕೃಷ್ಣ ಆಶ್ರಮದದ ಸರಸ್ವತಿ ಸ್ವಾಮೀಜಿ ಮಾತನಾಡಿ, ರಾಮ ಮಂದಿರ ಕಟ್ಟಿದ ಮಾತ್ರಕ್ಕೆ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ನಮ್ಮ ಸನಾತನ ಧರ್ಮಕ್ಕೆ ಆದ್ಯತೆ ಕೊಡುತ್ತೇವೆ ಎಂಬುದರ ಸಂಕೇತ ರಾಮ ಮಂದಿರ. ತ್ಯಾಗ ಮತ್ತು ಸೇವೆಯ ಗುಣಗಳು ಇರುವ ಪರಂಪರೆಯನ್ನು ಉಳಿಸಬೇಕು ಎಂದರು.

ಗುರು ಪರಂಪರೆಗೆ ನಡೆದುಕೊಳ್ಳುವ ಮನೆತನಗಳ ಯುವ ಪೀಳಿಗೆಗೆ ಧರ್ಮ, ಸಂಸ್ಕೃತಿ ತಿಳಿ ಹೇಳುವ ಕೆಲಸವನ್ನು ಆಯಾ ಮಠಗಳು ಮಾಡಬೇಕು ಎಂದು ಸಲಹೆ ನೀಡಿದರು.

ಯುವ ಜನಾಂಗದ ಮೂಲಕ ಧರ್ಮ ಬೆಳೆಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದ ಅವರು, ಈಗ ಕಾಲ ಬದಲಾಗಿದೆ. ಈಗ ರಾಮಮಂದಿರ ನಿರ್ಮಾಣ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇವರ ಹುಬ್ಬಳ್ಳಿ ಸಿದ್ಧಶಿವಯೋಗಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT