ತಿ.ನರಸೀಪುರ

ಗ್ರಾಮಾಭಿವೃದ್ಧಿ ಕಾರ್ಯಕ್ರಮ: ಬಳಕೆಗೆ ಸಲಹೆ

ಯೋಜನೆ ತಾಲ್ಲೂಕಿನಲ್ಲಿ ಅನುಷ್ಠಾನವಾದಾಗಿನಿಂದ ಗ್ರಾಮೀಣ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದು, ಮದ್ಯ ವ್ಯಸನಿಗಳು ದುಶ್ಚಟದಿಂದ ಮುಕ್ತರಾಗುತ್ತಿದ್ದಾರೆ.

ತಿ.ನರಸೀಪುರ: ಗ್ರಾಮೀಣ ಜನರ ಸರ್ವಾಂಗೀಣ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಕ್ತಿ ನೀಡುತ್ತಿದ್ದು, ಯೋಜನೆ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಜನಜಾಗೃತಿ ಸದಸ್ಯ ಕೆ.ಎನ್.ಪ್ರಭುಸ್ವಾಮಿ ಸಲಹೆ ನೀಡಿದರು.

ತಾಲ್ಲೂಕಿನ ವ್ಯಾಸರಾಜಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ನಡೆದ ಯೋಜನೆಯ ಸೋಸಲೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಯೋಜನೆ ತಾಲ್ಲೂಕಿನಲ್ಲಿ ಅನುಷ್ಠಾನವಾದಾಗಿನಿಂದ ಗ್ರಾಮೀಣ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದು, ಮದ್ಯ ವ್ಯಸನಿಗಳು ದುಶ್ಚಟದಿಂದ ಮುಕ್ತರಾಗುತ್ತಿದ್ದಾರೆ. ಯುವ ಸಮುದಾಯವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪದಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಾಲ ಸೌಲಭ್ಯ ನೀಡಿ ಅಭಿವೃದ್ಧಿಗೆ ಯೋಜನೆ ಸಹಕಾರ ನೀಡುತ್ತಿದೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಕುಟುಂಬದ ಸ್ವಾವಲಂಬನೆಗೆ ಅಗತ್ಯ ತಿಳಿವಳಿಕೆ ನೀಡುವುದೇ ಮೂಲ ಉದ್ದೇಶ ಎಂದು ಹೇಳಿದರು
ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಳಮ್ಮ ಮಹದೇವಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಯೋಜನಾಧಿಕಾರಿ ಸುನೀತಾ ಪ್ರಭು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷೆ ನಾಗಮ್ಮ ಅವರು ಬಾಲ್ಯ ವಿವಾಹ, ಸಂಚಾರ ಸುರಕ್ಷತೆ, ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೇರಿದಂತೆ ವಿವಿಧ ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಹೊನ್ನನಾಯಕ, ಹಾಗೂ ಉಪನ್ಯಾಸಕ ಎಂ. ಮಹದೇವ ಮಾತನಾಡಿದರು.
ಫಲಾನುಭವಿಗಳಿಗೆ ಮಾಸಾಶನ, ಉತ್ತಮ ಸಂಘಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ರಾಮು, ಮುಖಂಡ ಸೋಸಲೆ ಮಹಾದೇವಸ್ವಾಮಿ, ವಲಯ ಮೇಲ್ವಿಚಾರಕರಾದ ಯೋಗೀಶ್, ಸಂದೇಶ್ ಹಾಗೂ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಮೈಸೂರು
ದಂಡ ಕಟ್ಟಲಾಗದೆ ವಾಹನ ಬಿಟ್ಟರು

ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದು ದಂಡ ಪಾವತಿ ಸಲು ವಿಫಲವಾದ ಹಾಗೂ ದಾಖಲಾತಿ ಪತ್ತೆಯಾಗದ 46 ದ್ವಿಚಕ್ರ ವಾಹನ ಹರಾಜು ಹಾಕಲು ಕೆ.ಆರ್‌.ಸಂಚಾರ ಠಾಣೆಯ...

23 Mar, 2018
ಬಾಹ್ಯಬಂಧನ ಚಿಕಿತ್ಸೆ; ಸರಿಯಾದ ಕಾಲುಗಳು

ಮೈಸೂರು
ಬಾಹ್ಯಬಂಧನ ಚಿಕಿತ್ಸೆ; ಸರಿಯಾದ ಕಾಲುಗಳು

23 Mar, 2018

ಮೈಸೂರು
ದಲಿತ ವಚನಕಾರರಿಗೆ ಸಿಗದ ಆದ್ಯತೆ

ಶೂನ್ಯ ಸಂಪಾದನೆಯಲ್ಲಿ ದಲಿತ ವಚನಕಾರರಿಗೆ ಒತ್ತು ಕೊಟ್ಟಿಲ್ಲ ಎಂದು ಸಾಹಿತಿ ಪರಮಶಿವ ನಡುಬೆಟ್ಟ ಇಲ್ಲಿ ಗುರುವಾರ ವಿಷಾದಿಸಿದರು.

23 Mar, 2018
ತತ್ವಶಾಸ್ತ್ರ ಅರಿಯದವ ಶ್ರೇಷ್ಠ ಸಾಹಿತ್ಯ ರಚಿಸಲಾರ

ಮೈಸೂರು
ತತ್ವಶಾಸ್ತ್ರ ಅರಿಯದವ ಶ್ರೇಷ್ಠ ಸಾಹಿತ್ಯ ರಚಿಸಲಾರ

23 Mar, 2018

ಮೈಸೂರು
ವೈದಿಕಶಾಹಿ ದಾಳಿ ತಡೆದಿದ್ದು ಜಾನಪದ

ಅಪಾಯಕಾರಿಯಾಗುವ ಹಂತ ತಲುಪಿದ್ದ ಬ್ರಾಹ್ಮಣ್ಯ ಹಾಗೂ ವೈದಿಕಶಾಹಿ ದಾಳಿಯನ್ನು ವ್ಯವಸ್ಥಿತವಾಗಿ ಉಪಾಯದಿಂದ ನಿಯಂತ್ರಿಸಿದ್ದು ದೇಸಿ ಮಹಾಕಾವ್ಯ ಚಳವಳಿ ಎಂದು ಸಾಹಿತಿ ಡಾ.ಮೊಗಳ್ಳಿ ಗಣೇಶ್‌ ಅಭಿಪ್ರಾಯಪಟ್ಟರು. ...

22 Mar, 2018